Breaking News
recent

'ಮಸಣ' ಗುಡಿ ಸೇರುವ ಮುನ್ನ ಅನಿಲ್-ಉದಯ್ ಕೊನೆಯ ಸೆಲ್ಫಿ

ಮನಸ್ಸಿನಲ್ಲಿ ಆತಂಕ ಇದ್ದರೂ, ಏನಾಗುತ್ತೋ ಎಂಬ ಭಯ ಕಾಡುತ್ತಿದ್ದರೂ, ನಟ ಉದಯ್ ಮತ್ತು ಅನಿಲ್ ಮೊಗದಲ್ಲಿ ಮಂದಹಾಸ ಮಾತ್ರ ಕೊಂಚ ಕೂಡ ಕಡಿಮೆ ಆಗಿರಲಿಲ್ಲ. ಅದಕ್ಕೆ ಸಾಕ್ಷಿ ಈ 'ಕೊನೆ ಸೆಲ್ಫಿ'.
ಹೆಲಿಕಾಫ್ಟರ್ ಹತ್ತುವ ಮುನ್ನ ಅನಿಲ್ ಮತ್ತು ಉದಯ್ ಖುಷಿಯಾಗಿದ್ದರು. 'ನಾನು ಜೀವನದಲ್ಲಿ ಹೆಲಿಕಾಫ್ಟರ್ ನೋಡುತ್ತಿರುವುದು ಇದೇ ಮೊದಲು' ಅಂತ ಹೇಳುತ್ತಾ ಉದಯ್ ಸಂಭ್ರಮ ಪಟ್ಟಿದ್ದರು.
ಅದೇ ಸಡಗರದಲ್ಲಿ ಹೆಲಿಕಾಫ್ಟರ್ ಮುಂದೆ ನಿಂತು ಉದಯ್ ಸೆಲ್ಫಿ ಕ್ಲಿಕ್ ಮಾಡಿದರು. ಉದಯ್ ಕ್ಲಿಕ್ಕಿಸಿರುವ ಸೆಲ್ಫಿಯಲ್ಲಿ ನಟ ಅನಿಲ್, ಜಿಮ್ ಟ್ರೈನರ್ ಪಾನಿ ಪೂರಿ ಕಿಟ್ಟಿ ಕೂಡ ಇದ್ದಾರೆ. ಇಬ್ಬರ ಸಾಹಸಕ್ಕೆ ಶುಭವಾಗಲಿ ಎಂಬ ಅರ್ಥದಲ್ಲಿ ಎಲ್ಲರೂ ಥಂಬ್ಸ್ ಅಪ್ ಮಾಡಿದ್ದರು. ಆದ್ರೆ...ಬಳಿಕ ನಡೆದದ್ದು ಯಾರೂ ಊಹಿಸಲಾರದ ದುರ್ಘಟನೆ.
'ಮಾಸ್ತಿ ಗುಡಿ' ಚಿತ್ರದ 'ಶಾಟ್ ಮುಗಿದರೆ ಸಾಕು' ಅಂತ 100 ಅಡಿ ಎತ್ತರದಿಂದ ಹೆಲಿಕಾಫ್ಟರ್ ನಿಂದ ಹಾರಿದ ಅನಿಲ್ ಮತ್ತು ಉದಯ್ ಬಾರದ ಲೋಕಕ್ಕೆ ತೆರಳಿದ್ದಾರೆ.
'ಮಾಸ್ತಿ ಗುಡಿ' ಚಿತ್ರದಲ್ಲಿ ಸೂಪರ್ ಹೀರೋ ಆಗಲು ಹೋಗಿ ಇಬ್ಬರೂ 'ಮಸಣ ಗುಡಿ' ಸೇರಿರುವುದು ಮಾತ್ರ ಘೋರ ದುರಂತ.
Fresh Kannada

Fresh Kannada

No comments:

Post a Comment

Google+ Followers

Powered by Blogger.