Breaking News
recent

'ಮಾಸ್ತಿಗುಡಿ' ಸಾಹಸ ನಿರ್ದೇಶಕ ರವಿವರ್ಮಗೆ ಜಗ್ಗೇಶ್ ಛೀಮಾರಿ

'ಮಾಸ್ತಿ ಗುಡಿ' ಚಿತ್ರದ ಖಳನಟರಾದ ಅನಿಲ್ ಹಾಗೂ ಉದಯ್ ಅವರ ದುರಂತ ಸಾವಿಗೆ ಕನ್ನಡ ಚಿತ್ರರಂಗದಿಂದ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. 'ಮಾಸ್ತಿ ಗುಡಿ' ಚಿತ್ರತಂಡದ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ರಾಮನಗರ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
mastigudi
mastigudi
ದುರ್ಘಟನೆ ಖಂಡಿಸಿ ನವರಸ ನಾಯಕ ಜಗ್ಗೇಶ್, 'ಮಾಸ್ತಿಗುಡಿ' ಚಿತ್ರದ ಸಾಹಸ ನಿರ್ದೇಶಕ ರವಿವರ್ಮ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಹಸ ನಿರ್ದೇಶಕರ ನಿರ್ಲಕ್ಷ್ಯದಿಂದ ಇಬ್ಬರು ಸಾವಿಗೀಡಾಗಿದ್ದಾರೆ ಎಂದು ಟ್ವೀಟ್ ಮಾಡುವ ಮೂಲಕ ಜಗ್ಗೇಶ್ ನೇರವಾಗಿ ರವಿವರ್ಮ ರವರಿಗೆ ಛೀಮಾರಿ ಹಾಕಿದ್ದಾರೆ.['ಮಸಣ' ಗುಡಿ ಸೇರುವ ಮುನ್ನ ಅನಿಲ್-ಉದಯ್ ಕೊನೆಯ ಸೆಲ್ಫಿ]
''ರವಿವರ್ಮ ನೀನು ಅಡಿಮಟ್ಟದಿಂದ ಬಂದವನಾಗಿ ಬಡವರ ಮಕ್ಕಳ ತಳ್ಳಿ ಆಳ ನೋಡಿಬಿಟ್ಟೆಯಲ್ಲಾ. ಧಿಕ್ಕಾರವಿರಲಿ ನಿನ್ನ ಡಬ್ಬಾ ಸಾಹಸಕ್ಕೆ! ಅಯ್ಯೋ ದೇವರೆ ನಾನು ಕಂಡ ಬಡ ಮಕ್ಕಳು ಹೋಗಿಬಿಟ್ಟರು'' ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
''ಬಡತನದಿಂದ ಬಂದ ಕಂದಮ್ಮಗಳು..ಎರಡು ತುತ್ತಿಗಾಗಿ ದೇಹ ದಣಿಸಿ ತಯಾರಾಗಿದ್ದ ಬಗೆ ನನ್ನ ಕಣ್ಣ ಮುಂದಿದೆ. ಎದುರಿಗೆ ಸಿಕ್ಕರೆ ಬಾಯ್ತುಂಬ ಅಣ್ಣಾ ಅಂತ ತಬ್ಬುತ್ತಿದ್ದರು. ಹೆಣವಾದರೆ!'' ಅಂತ ನೋವಿನ ಮಾತುಗಳನ್ನಾಡಿದ್ದಾರೆ ಜಗ್ಗೇಶ್
''ಅನಿಲ್ ಮತ್ತು ಉದಯ್...ನನ್ನ ಮಗ ಯತಿ ಸ್ನೇಹಿತರು. ಇಬ್ಬರೂ ಇನ್ನಿಲ್ಲ. ಲೈಫು ಇಷ್ಟೇನಾ?'' ಅಂತ ಜಗ್ಗೇಶ್ ಪತ್ನಿ ಪರಿಮಳಾ ಕೂಡ ಟ್ವೀಟ್ ಮಾಡಿದ್ದಾರೆ.
'ಮಾಸ್ತಿಗುಡಿ' ಚಿತ್ರಕ್ಕಾಗಿ, ಅನಿಲ್ ಮತ್ತು ಉದಯ್...ಇಬ್ಬರೂ ತುಂಬ ಹಾರ್ಡ್ ವರ್ಕ್ ಮಾಡಿದ್ದರು. ಸತತವಾಗಿ ದೇಹವನ್ನ ದಂಡಿಸಿ, ಸಿಕ್ಸ್ ಪ್ಯಾಕ್ ಮಾಡಿದ್ದರು. ಹೆಚ್ಚು ಸಮಯ ಜಿಮ್ ನಲ್ಲಿ ಕಾಲ ಕಳೆಯುತ್ತಿದ್ದರು. ಇಂದು ಬೆಳಿಗ್ಗೆಯಿಂದ ಕೂಡ ಅನಿಲ್ ಹಾಗೂ ಉದಯ್ ಡಯೆಟ್ ನಲ್ಲಿದ್ದರು. ಖಾಲಿ ಹೊಟ್ಟೆಯಲ್ಲಿ ಶೂಟಿಂಗ್ ಗೆ ಪಾಲ್ಗೊಂಡಿದ್ದರು. ಆದ್ರೆ ವಿಧಿ ಲಿಖಿತ ಬೇರೆ ಆಗಿತ್ತು.
Fresh Kannada

Fresh Kannada

No comments:

Post a Comment

Google+ Followers

Powered by Blogger.