Breaking News
recent

'ಒಳ್ಳೆ ಹುಡುಗ' ಪ್ರಥಮ್ ಗೆ ಬೆಂಡೆತ್ತಿ ಬ್ರೇಕ್ ಹಾಕಿದ ಕಿಚ್ಚ ಸುದೀಪ್.!

ಹೆಸರಿನಲ್ಲೇ 'ಕಿರಿಕ್' ಇಟ್ಟುಕೊಂಡಿದ್ದರೂ, ಕೀರ್ತಿ ಮಾಡುತ್ತಿರುವ 'ಕಿರಿಕ್'ಗಿಂತಲೂ 'ಬಿಗ್ ಬಾಸ್' ಮನೆಯಲ್ಲಿ ಎಲ್ಲಾ ಸ್ಪರ್ಧಿಗಳಿಗೆ ಪ್ರಥಮ್ ಕೊಡುತ್ತಿರುವ ಪ್ರಾಬ್ಲಂ ಅತಿಯಾಗಿದೆ.
pratham and sudeep bigg boss kannada

'ಇನ್ನೊಬ್ಬರ ತಪ್ಪು ಕಂಡು ಹಿಡಿದು ತಾನೇ ಸರಿ' ಎಂದು ಬಿಂಬಿಸಿಕೊಳ್ಳುವ ಪ್ರಥಮ್ ವಿರುದ್ಧ ಮೊದಲ ವಾರದಿಂದಲೂ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಎಲ್ಲಾ ಸ್ಪರ್ಧಿಗಳಿಗೆ ಅಸಮಾಧಾನ ಇದ್ದೇ ಇದೆ.
ಅಂದಿನಿಂದಲೂ ಎಲ್ಲವನ್ನೂ ಸೂಕ್ಷವಾಗಿ ಗಮನಿಸುತ್ತಿರುವ ಕಿಚ್ಚ ಸುದೀಪ್, ಕಳೆದ ಶನಿವಾರದ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಪ್ರಥಮ್ ಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡರು.
'ಕನ್ನಡ ರಾಜ್ಯೋತ್ಸವ' ದಿನದಂದು ಮುಖಕ್ಕೆ ಅರಿಶಿನ-ಕುಂಕುಮ ಹಚ್ಚಿಕೊಳ್ಳುವಾಗ, ಅಡುಗೆ ಮನೆಯಲ್ಲಿ ರೇಖಾ ಮತ್ತು ಪ್ರಥಮ್ ನಡುವೆ ಆದ ವಾಗ್ವಾದದ ಟಾಪಿಕ್ ಇಟ್ಟುಕೊಂಡು 'ಒಳ್ಳೆ ಹುಡುಗ' ಪ್ರಥಮ್ ರನ್ನ ಕಿಚ್ಚ ಸುದೀಪ್ ಬೆಂಡೆತ್ತಿ ಬ್ರೇಕ್ ಹಾಕಿದರು.

'ಪಿರಿ ಪಿರಿ' ಪ್ರಥಮ್ ಗೆ ಸುದೀಪ್ ಹೇಗೆ ಬಿಸಿ ಮುಟ್ಟಿಸಿದರು ಅಂತ ಅವರ ಮಾತುಗಳಲ್ಲೇ ಓದಿರಿ....
1. ಪ್ರಥಮ್ ಮುಂದೆ ಸುದೀಪ್ ಇಟ್ಟ ಪ್ರಶ್ನೆ 
''ಕನ್ನಡ ರಾಜ್ಯೋತ್ಸವ'ವನ್ನು ಆಚರಿಸುವುದಕ್ಕೆ ಮುಖಕ್ಕೆ ಅರಿಶಿನ-ಕುಂಕುಮ ಹಚ್ಚಿಕೊಳ್ಳುತ್ತೀರಾ... ನಿಮ್ಮ ಭಾವನೆ ಎಲ್ಲರಿಗೂ ಅರ್ಥವಾಗುತ್ತೆ. ಹಾಗಂತ, ಅಡುಗೆ ಮನೆಯಲ್ಲಿ ಅಷ್ಟು ಗಲೀಜು ಮಾಡಿರುವುದರ ಬಗ್ಗೆ ಕೇಳೋಕೆ ಬಂದ್ರೆ, ಅಲ್ಲಿಂದ ಕುಂಕುಮ ವಿಚಾರಕ್ಕೆ ಶಿಫ್ಟ್ ಆಗುತ್ತೀರಾ... ಕುಂಕುಮ ಮತ್ತು ಅಸಹ್ಯ ಪೋಣಿಸಿಬಿಟ್ಟು ಮಾತನಾಡಲು ಶುರು ಮಾಡುತ್ತೀರಾ... ತಾವು ಮಾತನ್ನ ಬದಲಾಯಿಸಿ, ಮನೆಯವರು ಮಾಡಿರುವ ಪ್ರಶ್ನೆಗಳಿಂದ ಎಷ್ಟು ದಿನ ನೀವು ಡೈವರ್ಟ್ ಮಾಡೋಕೆ ಆಗುತ್ತೆ ಅನ್ನೋದು ನಮ್ಮ ಪ್ರಶ್ನೆ'' - ಕಿಚ್ಚ ಸುದೀಪ್
2. ಎಷ್ಟು ವಾರ ಎಸ್ಕೇಪ್ ಆಗಬಹುದು? 
ಸುದೀಪ್ - ''ಬೇರೆಯವರು ಯಾರೂ ಮನುಷ್ಯರು ಅಲ್ಲ, ನೀವೊಬ್ಬರೇ ಮನುಷ್ಯರು ಅಂತ ಯಾಕೆ ಭಾವಿಸುತ್ತೀರಾ? ಇದನ್ನೇ ಮಾಡ್ಕೊಂಡು ಎಷ್ಟು ವಾರ ಎಸ್ಕೇಪ್ ಆಗಬಹುದು ಅಂತ ಅನ್ಸುತ್ತೆ ನಿಮಗೆ?''
ಪ್ರಥಮ್ - ''ಎಸ್ಕೇಪ್ ಗೆ ಅದನ್ನ ಮಾನದಂಡವಾಗಿ ಅಥವಾ ರೂಪವಾಗಿ ಇಟ್ಕೊಂಡಿಲ್ಲ. ಆ ಭ್ರಮೆಯಲ್ಲಿ ನಾನು ಇಲ್ಲ''
3. ನಿಮಗೆ ಹೇಗೆ ಬೇಕೋ, ಹಾಗೆ... 
''ಅಸಹ್ಯ ಅಂತ ರೇಖಾ ಮಾತನಾಡಿದ್ದು ಕುಂಕುಮದ ಮೇಲೆ ಅಲ್ಲ... ಅಲ್ಲಿ ಆಗಿರುವ ಗಲೀಜಿನ ಮೇಲೆ. ಆದ್ರೆ ತಾವು, ನಿಮಗೆ ಹೇಗೆ ಬೇಕೋ ಹಾಗೆ ತೆಗೆದುಕೊಳ್ಳುತ್ತೀರಾ. ಬೆಳಗ್ಗೆ ಆದ್ರೆ ನಿಮಗಂತ, ನಮಗಿಂತ ಜಾಸ್ತಿ ಒಂದು ಹೆಣ್ಣು 'ಕುಂಕುಮ'ನ ಪೂಜೆ ಮಾಡುವುದು. ಅವರಿಗೆ ಹೇಳಿಕೊಡಲು ಬರ್ತೀರಾ 'ಅಸಹ್ಯ' ಪದದ ಬಗ್ಗೆ? ನಾವು ಪೂಜೆ ಮಾಡಿದಾಗ ಭಕ್ತಿಯಿಂದ ಕುಂಕುಮ ಇಟ್ಟುಕೊಳ್ಳುತ್ತೀವಿ. ಹೆಣ್ಮಕ್ಕಳು ಇನ್ನೊಬ್ಬರ ಜೀವಕ್ಕೆ ಇಟ್ಟುಕೊಳ್ಳುತ್ತಾರೆ. ಹೀಗಿರುವಾಗ, ಅವರ ಬಳಿ ವಾದ ಯಾಕೆ?'' - ಕಿಚ್ಚ ಸುದೀಪ್
4. 'ಕನ್ನಡ ರಾಜ್ಯೋತ್ಸವ' ಹೇಗೆ ಮಾಡಬೇಕು? 
ಸುದೀಪ್ - ''ಹೀಗೆ ಮಾಡಿದ್ರೇನೆ 'ಕನ್ನಡ ರಾಜ್ಯೋತ್ಸವ'ನಾ?''
ಪ್ರಥಮ್ - ''ನನ್ನ ಧಾಟಿಯಲ್ಲಿ ಹೇಗೆ ಸಾಧ್ಯವೋ, ನಾನು ಮಾಡಿಕೊಂಡೆ. ಇದರಲ್ಲಿ ಯಾರಿಗೂ ಹರ್ಟ್ ಮಾಡುವ ಉದ್ದೇಶ ನನ್ನದಲ್ಲ''
5. 'ಕನ್ನಡ ರಾಜ್ಯೋತ್ಸವ' ಅಂದ್ರೇನು? 
''ಕನ್ನಡ ರಾಜ್ಯೋತ್ಸವ ಅಂದ್ರೇನು ಗೊತ್ತಾ? ಕನ್ನಡವನ್ನ ಮೊದಲು ಪೂಜಿಸುವುದು... ಕನ್ನಡಿಗರನ್ನು ಪೂಜಿಸುವುದು... ಇನ್ನೊಬ್ಬ ಕನ್ನಡಿಗನಿಗೆ ಮರ್ಯಾದೆ ಕೊಡುವುದು... ಅದೇ ಕನ್ನಡ ರಾಜ್ಯೋತ್ಸವ.!'' - ಕಿಚ್ಚ ಸುದೀಪ್
6. ಬಣ್ಣದ ಮೇಲೆ ಕರ್ನಾಟಕ ನಿಂತಿಲ್ಲ 
''ಎರಡು ಬಣ್ಣದಲ್ಲಿ ನಮ್ಮ ಕರ್ನಾಟಕ ನಿಂತಿಲ್ಲ ಸ್ವಾಮಿ. ಕನ್ನಡಿಗರ ಮೇಲೆ ನಿಂತಿರುವುದು ಕರ್ನಾಟಕ'' - ಕಿಚ್ಚ ಸುದೀಪ್
7. ಕನ್ನಡಿಗರಿಗೆ ಗೌರವ ಕೊಟ್ಟಿಲ್ಲ? 
ಪ್ರಥಮ್ - ''ನಾನು ಕನ್ನಡಿಗರಿಗೆ ಗೌರವ ಕೊಡ್ತಾಯಿದ್ದೀನಿ''
ಸುದೀಪ್ - ''ಎಲ್ಲಿ ಕೊಟ್ರಿ ಗೌರವ ಅವತ್ತು? ಕುಂಕುಮದ ವಿಚಾರ ಬಂದಾಗ, ಅವರು ಹೇಳದೆ ಇರುವುದನ್ನು ಪೋಣಿಸುತ್ತೀರಾ. ನಂತರ ಎಲ್ಲರ ಮೇಲೂ ಗಲಾಟೆ ನಡೆಯುತ್ತೆ. ಇದು ಯಾವ ಕನ್ನಡ ರಾಜ್ಯೋತ್ಸವ? ಕನ್ನಡಿಗರಿಗೆ ನೋವು ಕೊಟ್ಬಿಟ್ಟು''
8. ಯಾವುದು ಕನ್ನಡತನ? 
''ಇಷ್ಟು ವರ್ಷ ಕನ್ನಡಕ್ಕೆ ಹೋರಾಡಿದವರು, ಕನ್ನಡಕ್ಕಾಗಿ ಪ್ರಾಣ ಕೊಟ್ಟವರು, ಎಲ್ಲರೂ ಸುಳ್ಳಾಗೋದರು ನಿಮ್ಮಿಂದ. ಬಾಳಿ ಬದುಕುತ್ತಿರುವುದು ಇಲ್ಲಿ. ದುಡಿತಾಯಿರುವುದು ಕರ್ನಾಟಕದಲ್ಲಿ. ದೇಹ ಹೂಳುವುದು ಕರ್ನಾಟಕದಲ್ಲಿ. ಇದು ಕನ್ನಡತನ. ಮೊದಲು ಇದನ್ನ ಅರ್ಥ ಮಾಡಿಕೊಳ್ಳಿ'' - ಕಿಚ್ಚ ಸುದೀಪ್
9. ನಿಮಗೊಂದು ನ್ಯಾಯ...ಬೇರೆಯವರಿಗೊಂದು ನ್ಯಾಯ ಯಾಕೆ? 
''ಅವತ್ತು ಕಾರುಣ್ಯ ವಿಚಾರದಲ್ಲಿ ನಾವು ನಿಮ್ಮ ಪರ ನಿಂತ್ವಿ, ಯಾಕಂದ್ರೆ ನೀವು ಕರೆಕ್ಟ್ ಇದ್ರಿ. ಸನ್ನಿವೇಶದಲ್ಲಿ ನೀವು ಕರೆಕ್ಟ್ ಇದ್ರಿ ಅನ್ನೋದು ಬಿಟ್ಟರೆ, ಮಾಡಿದ್ದೆಲ್ಲಾ ಚೆಂದ ಅಂತಲ್ಲ. ಶಾಲಿನಿ ವಿಚಾರದಲ್ಲೂ ನಿಮ್ಮ ಪರವಾಗಿ ನಿಂತುಕೊಂಡ್ವಿ. ಯಾಕಂದ್ರೆ ನಿಮ್ಮ ಮಾತಲ್ಲಿ ಸತ್ಯ ಇತ್ತು. ಈಗ ತಪ್ಪು ಮಾಡ್ತಿದ್ದೀರಾ ನೀವು. ಬೇರೆಯವರು ಪ್ರಶ್ನೆ ಕೇಳಿದಾಗ, 'ಬಿಗ್ ಬಾಸ್'ಗೆ ಹೇಳ್ತೀನಿ ಅಂತೀರಾ. ಆದ್ರೆ, ಬೇರೆಯವರ ಉತ್ತರಗಳಿಗೆ ನೀವು ಶನಿವಾರದವರೆಗೂ ಕಾಯುವುದೇ ಇಲ್ಲ. ನಿಮಗೊಂದು ನ್ಯಾಯ, ಬೇರೆಯವರಿಗೊಂದು ನ್ಯಾಯ ಹೆಂಗೆ?'' - ಕಿಚ್ಚ ಸುದೀಪ್
10. ಸರಿ ಇಲ್ಲ ಅಂದಾಗ.... 
ಪ್ರಥಮ್ - ''ಏನಾಗಿದೆ ಅಂತ ಹೇಳ್ತೀನಿ. ನನ್ನದು ಒಂದು ಉತ್ತರ ತಗೊಳ್ಳಿ. ದಯವಿಟ್ಟು''
ಸುದೀಪ್ - ''ನಾಲ್ಕು ವಾರದಿಂದ ನೀವು ಸರಿ ಇದ್ದೀರಾ ಅಂತ ನಾವು ನಿಮ್ಮ ಪರ ನಿಂತುಕೊಂಡ್ವಿ. ಈಗ ಸರಿ ಇಲ್ಲ ಅಂದಾಗಲೂ ನಿಮ್ಮ ಪರ ನಿಂತುಕೊಳ್ಳುವುದು ಇದ್ಯಾ ಪ್ರಥಮ್.?''
Fresh Kannada

Fresh Kannada

No comments:

Post a Comment

Google+ Followers

Powered by Blogger.