Breaking News
recent

ಬಿಗ್ ಬಾಸ್ ಮನೇಲಿ ಭೂತದ ಕಾಟಕ್ಕೆ ಬೆಚ್ಚಿಬಿದ್ದ ಸ್ಪರ್ಧಿಗಳು- ನಿಜಾನಾ, ಸುಳ್ಳಾ ಶುರುವಾಗಿದೆ ಚರ್ಚೆ

ಬಿಗ್ ಬಾಸ್ ಮನೇಲಿ ಭೂತದ ಕಾಟಕ್ಕೆ ಬೆಚ್ಚಿಬಿದ್ದ ಸ್ಪರ್ಧಿಗಳು- ನಿಜಾನಾ, ಸುಳ್ಳಾ ಶುರುವಾಗಿದೆ ಚರ್ಚೆ
bbkಬೆಂಗಳೂರು: ಕನ್ನಡದ ಬಿಗ್‍ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ವಿಚಿತ್ರ ಅನುಭವವಾಗಿದೆ. ಕನ್ನಡಿಯಲ್ಲಿ ವಿಚಿತ್ರ ಆಕೃತಿ ಗೋಚರಿಸ್ತು ಅಂತ ಹೇಳಿ ಸ್ಪರ್ಧಿಗಳಾದ ಕಾರುಣ್ಯಾ ಮತ್ತು ಸಂಜನಾ ಕಿರುಚಿಕೊಂಡು ಕೆಳಕ್ಕೆ ಬಿದ್ದು ಒದ್ದಾಡಿದ್ದಾರೆ. ಇದರಿಂದ ಇತರೆ ಸ್ಪರ್ಧಿಗಳು ಕೂಡ ಆತಂಕಕ್ಕೀಡಾಗಿದ್ದಾರೆ.
bbks4ಶನಿವಾರದಂದು ಶಾಲಿನಿ ಹಾಗೂ ಶೀತಲ್ ಎಲಿಮಿನೇಟ್ ಆದ ನಂತರ ಈ ಘಟನೆ ನಡೆದಿದೆ. ಸಂಜನಾ ಹಾಗೂ ಕಾರುಣ್ಯ ಫೇಸ್‍ವಾಶ್ ಮಾಡುತ್ತಿದ್ದಾಗ ಕನ್ನಡಿಯಲ್ಲಿ ವಿಚಿತ್ರ ಆಕೃತಿ ನೋಡಿ ಕಿರುಚಾಡಿದ್ದಾರೆ. ಇವರ ಕಿರುಚಾಟ ಕೇಳಿ ಇತರೆ ಸ್ಪರ್ಧಿಗಳು ಅಲ್ಲಿಗೆ ಬಂದಾಗ, ನನಗೆ ಸೊಳ್ಳೆ ಕಚ್ಚಿದೆ ಎಂದು ನೋಡಿಕೊಳ್ತಿದ್ದೆ. ಆಗ ಯಾರೋ ಚಲಿಸಿದಂತಾಯ್ತು. ಬಿಳಿ ಬಣ್ಣದ ಬಟ್ಟೆಯೊಂದಿಗೆ ರಕ್ತವನ್ನ ನೋಡಿದ್ವಿ ಅಂತ ಕಾರುಣ್ಯಾ ಇತರೆ ಸ್ಪರ್ಧಿಗಳಿಗೆ ಹೇಳಿರೋದು ವಿಡಿಯೋದಲ್ಲಿ ಸೆರೆಯಾಗಿದೆ. ಆದ್ರೆ, ಅದು ನಿಜಾನಾ ಅಥವಾ ಟಿಆರ್‍ಪಿ ಗಿಮಿಕ್ಕಾ ಅನ್ನೋ ಚರ್ಚೆ ಎದ್ದಿದೆ.
bbks4


ಬಿಡದಿ ಬಳಿ ಇರುವ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಿರ್ಮಾಣವಾಗಿರುವ ಬಿಗ್‍ಬಾಸ್ ಮನೆಯಲ್ಲಿ ಸ್ಪರ್ಧಿಗಳು ಇದ್ದಾರೆ. ಕಳೆದ ವರ್ಷದ ಮನೆಯನ್ನು ಸಂಪೂರ್ಣವಾಗಿ ಒಡೆದು ಹೊಸದಾಗಿ ನಿರ್ಮಿಸಲಾಗಿದೆ. 20 ಸಾವಿರ ಚದರ ಅಡಿ ವಿಸ್ತೀರ್ಣದ ಜಾಗದಲ್ಲಿ ಈ ಮನೆಯನ್ನು ಒಟ್ಟು 1.3 ಕೋಟಿ ರೂ. ವೆಚ್ಚದಲ್ಲಿ ಸುಂದರವಾಗಿ ನಿರ್ಮಿಸಲಾಗಿದೆ.
bbks4


loading...
Fresh Kannada

Fresh Kannada

No comments:

Post a Comment

Google+ Followers

Powered by Blogger.