Breaking News
recent

ಅಲಾಲಾಲಾ…`ಕೋಡಿ’..ಇದೇನ್ರಪ್ಪಾ ಮೋಡಿ! ರಮ್ಯಾ ಕ್ಯೂಟಿ; ದಿಗಂತ್ ಸೆಟ್ ಪ್ರಾಪರ್ಟಿ !

ನಾಗರಹಾವು ಇಡೀ ಸಿನಿಮಾ ನೋಡಿದ ಮೇಲೆ ನೆನಪಲ್ಲಿ ಉಳಿಯುವುದು ಗ್ರಾಫಿಕ್ ಕೆಲಸ ಮಾತ್ರ. ವಿಷ್ಣುವಿನಿಂದ ಹಿಡಿದು ಹಾವು, ಯುದ್ಧದ ಸನ್ನಿವೇಶಗಳು ನಿಜಕ್ಕೂ ಮೈ ನವಿರೇಳಿಸುತ್ತವೆ. ಕೋಡಿ ರಾಮಕ್ರಷ್ಣ ಅದರಲ್ಲಿ ಗೆದ್ದಿದ್ದಾರೆ. ಅವರು ಇಂಥ ಚಿತ್ರಗಳನ್ನು ಮಾಡುವುದಲ್ಲಿ ಎತ್ತಿದ ಕೈ. ಆದರೆ `ಅರುಂಧತಿ’ಯಂಥ ಚಿತ್ರ ಮಾಡಿದವರು ಇವರೇನಾ ಎನ್ನುವಷ್ಟು ನೀರಸವಾಗಿದೆ ಚಿತ್ರಕತೆ. Download Nagarahavu Songs 
nagarahavu kannada movie review
nagarahavu kannada movie review

ಒಂದು ದೈವ ಕಳಸದ ಸುತ್ತ ಕತೆ ಸಾಗುತ್ತದೆ. ಅದನ್ನು ಪಡೆಯಲು ಹೀರೊ ಮತ್ತು ವಿಲನ್ ನಡುವಿನ ಹೋರಾಟವೇ ಕಥಾ ಹಂದರ. ಆ ಕಳಸ ಕಾಪಾಡಲು ಬರುವುದೇ ನಾಯಕಿ ರಮ್ಯಾ. ಆದರೆ ಇಂಟರ್‍ವಲ್‍ವರೆಗೆ ಕತೆ ಮೇಲೇಳುವುದೇ ಇಲ್ಲ. ವಿರಾಮದ ನಂತರವೇ ಕತೆಗೆ ವೇಗ ದಕ್ಕುತ್ತದೆ. ಆದರೆ ನಗು ಮೂಡಿಸದ ಕಾಮಿಡಿ, ಪೇಲವ ಸೆಂಟಿಮೆಂಟ್, ಭಾವುಕತೆ ಇಲ್ಲದ ರೋಮ್ಯಾನ್ಸ್ ದೃಶ್ಯಗಳನ್ನು ಅರಗಿಸಿಕೊಳ್ಳುವುದು ಕಷ್ಟ ಕಷ್ಟ.

ಕೆಲವೊಮ್ಮೆ ಇದು ಕನ್ನಡ ಸಿನಿಮಾನಾ ತೆಲುಗು ಸಿನಿಮಾನಾ ಎನ್ನುವಷ್ಟು ಪರಭಾಷೆಯ ನಟರಿದ್ದಾರೆ. ಅವರು ಡೈಲಾಗ್ ಹೇಳುತ್ತಿದ್ದರೆ ಲಿಪ್‍ಸಿಂಕ್ ಕೆಲವೊಮ್ಮೆ ಆಗುವುದಿಲ್ಲ. ಆರಂಭದಲ್ಲಿ ದರ್ಶನ್ ಹಾಡು ತುರುಕಿದಂತಿದೆ. ಕೆಲವೊಂದು ದೃಶ್ಯಗಳು ಯಾಕೆ ಬರುತ್ತವೆ ಅನ್ನೋದು ತಿಳಿಯುವುದಿಲ್ಲ. ರಮ್ಯಾ ಮುದ್ದು ಮುದ್ದಾಗಿ ಕಾಣುತ್ತಾರೆ. ಕೊಟ್ಟ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ವಿಲನ್‍ಗಳಿಂದ ಕಳಸ ಕಾಪಾಡುವ ನಾಗಲಿಕ ಪಾತ್ರದ ಫೈಟಿಂಗ್ ಸೀನ್‍ನಲ್ಲಿ ಸೂಪರ್. Watch Nagarahavu Trailer

ದಿಗಂತ್ ಚಿತ್ರರಂಗಕ್ಕೆ ಬಂದು ಇಷ್ಟು ವರ್ಷವಾದರೂ ಸೆಟ್ ಪ್ರಾಪರ್ಟಿ ಥರಾನೇ ಇದ್ದಾರೆ. ಆ ಯಪ್ಪನಿಂದ ರಾಜಮೌಳಿ ಬಂದರೂ ಅಭಿನಯ ತೆಗೆಸಲು ಆಗಲ್ಲ. ಗುಳಿ ಕೆನ್ನೆ ಚೆಲುವ ಅಂತ ಹೇಳಿ ಹೇಳಿ ಮಟ್ಟಸವಾದ ಗುಂಡಿಯನ್ನೇ ಜನರು ತೋರಿಸುತ್ತಾರೆ. ಸಾಧು ಕೋಕಿಲಾ ಬಂದಾಗ ಬೀಳುವ ಶಿಳ್ಳೆಯಲ್ಲಿ ಐದು ಪೈಸೆಯಷ್ಟೂ ಇವರಿಗೆ ಬೀಳುವುದಿಲ್ಲ. ಗಾಳಿ ಅಂಜನೇಯ ಇವರನ್ನಲ್ಲ…ಈ ಚಿತ್ರರಂಗವನ್ನು ಕಾಪಾಡಲಿ. ಒಟ್ಟಿನಲ್ಲಿ ಇದು ವಿಷ್ಣು ಅಭಿಮಾನಿಗಳಿಗೆ ಹಬ್ಬ ಮಾಡಿದಷ್ಟು ಸಂಭ್ರಮ ನೀಡಿದೆ. ಅವರಿಂದಲೇ ಈ ಚಿತ್ರಕ್ಕೊಂದು ಖದರ್ ದಕ್ಕಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.