Breaking News
recent

'ಕನ್ನಡದ ಅರುಂಧತಿ' ಆದ್ರಾ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ !

ಡಾ.ವಿಷ್ಣುವರ್ಧನ್ ಅವರ 201ನೇ ಚಿತ್ರ 'ನಾಗರಹಾವು' ಬಿಡುಗಡೆಗೆ ದಿನಗಣನೆ ಶುರುವಾಗಿದೆ. ರಿಲೀಸ್ ಗೂ ಮೂರು ದಿನಗಳ ಮುಂಚೆಯೆ ಟಿಕೆಟ್ ಬುಕ್ಕಿಂಗ್ ಆಗ್ತಿದ್ದು, ಮೊದಲ ದಿನದ ಶೋಗಳು ಸೋಲ್ಡ್ ಔಟ್ ಆಗಿದೆ. ಚಿತ್ರದ ಆರಂಭದಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಕುತೂಹಲ ಹೆಚ್ಚಿಸುತ್ತಾ ಬಂದಿರೊ ನಾಗರಹಾವು ಕನ್ನಡ, ತೆಲುಗು, ತಮಿಳು ಸೇರಿದಂತೆ ನಾಲ್ಕು ಭಾಷೆಯಲ್ಲಿ ಜಗತ್ತಿನಾದ್ಯಂತ ಇದೇ ತಿಂಗಳ 14 ರಂದು ತೆರೆಕಾಣುತ್ತಿದೆ.
Nagarahavu kannada movie
Nagarahavu kannada movie
ವಿಷ್ಣುವರ್ಧನ್ ಅವರು ನಮ್ಮನ್ನ ಅಗಲಿ ಆರು ವರ್ಷದ ಬಳಿಕ ಹೆಡ್ ರಿಪ್ಲೇಸ್ ಮೆಂಟ್ ತಂತ್ರಜ್ಞಾನದ ಮೂಲಕ ಮತ್ತೆ ಬೆಳ್ಳಿ ತೆರೆಯಲ್ಲಿ ಘರ್ಜಿಸುತ್ತಿದ್ದಾರೆ. ನಟ ದಿಗಂತ್ ಕೂಡ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನೂ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ನಾಗಿಣಿ ಪಾತ್ರದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಈಗಾಗಲೆ ರಿಲೀಸ್ ಆಗಿರೊ ರಮ್ಯಾ ಗೆಟಪ್ ನ ಪೋಸ್ಟರ್ ಗಳು, ನಾಗರಹಾವು ಚಿತ್ರದ ಬಗ್ಗೆ ನಿರೀಕ್ಷೆ ಡಬಲ್ ಮಾಡಿದೆ.
ತೆಲುಗಿನ ಖ್ಯಾತ ನಿರ್ದೇಶಕ ಕೋಡಿ ರಾಮಕೃಷ್ಣ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಸಾಜೀದ್ ಖುರೇಷಿ ನಿರ್ಮಾಣ ಮಾಡಿದ್ದಾರೆ. ನಾಗರಹಾವು ಚಿತ್ರದ ಟೀಸರ್, ಟ್ರೇಲರ್, ಹಾಗೂ ಹಾಡುಗಳು ಸಖತ್ ಸೌಂಡ್ ಮಾಡ್ತಿದ್ದು, ಈಗ ರಮ್ಯಾ ಕಾಣಿಸಿಕೊಂಡಿರೊ ಎರಡು ಹೊಸ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಈ ಹಾಡುಗಳು ಈಗ ಬಾರಿ ಚರ್ಚೆಯಾಗ್ತಿದ್ದು, ರಮ್ಯಾ 'ಕನ್ನಡದ ಅರುಂಧತಿ'ಯಾದ್ರಾ ಅನ್ನೊ ಹೊಸ ಪ್ರಶ್ನೆ ಉದ್ಬವವಾಗಿದೆ. ಇದಕ್ಕೆ ಕಾರಣ ನಾಗರಹಾವು ಚಿತ್ರದ ಈ ಹೊಸ ಹಾಡುಗಳು. ಮುಂದೆ ಓದಿ....

1. ರಮ್ಯಾ 'ಕನ್ನಡದ ಅರುಂಧತಿ' !
ತೆಲುಗಿನಲ್ಲಿ ಅನುಷ್ಕ ಶೆಟ್ಟಿ ಅಭಿನಯಿಸಿದ್ದ ಸೂಪರ್ ಹಿಟ್ ಸಿನಿಮಾ 'ಅರುಂಧತಿ'ಯನ್ನ, ನಾಗರಹಾವು ಚಿತ್ರದ ನಿರ್ದೇಶಕ ಕೋಡಿ ರಾಮಕೃಷ್ಣ ನಿರ್ದೇಶನ ಮಾಡಿದ್ರು. ಹೀಗಾಗಿ ಆ ಚಿತ್ರಕ್ಕೆ ಹೋಲಿಸಿದ್ರೆ, ಅರುಂಧತಿ ಚಿತ್ರದ ಅನುಷ್ಕ ಪಾತ್ರಕ್ಕೂ ಹಾಗೂ ನಾಗರಹಾವು ಚಿತ್ರದಲ್ಲಿ ರಮ್ಯಾ ಪಾತ್ರಕ್ಕೂ ತುಂಬಾ ಸಾಮ್ಯತೆ ಇದೆ ಅನ್ಸುತ್ತೆ. ಇದು ಈಗ ಬಿಡುಗಡೆಯಾಗಿರೊ ಹಾಡಿನ ಟೀಸರ್ ನಲ್ಲೂ ಪ್ರೂವ್ ಆಗಿದೆ. ಅದು ಹೇಗೆ ಅಂತಾ ಮುಂದೆ ನೋಡಿ.
2. ಜೇಜಮ್ಮನಂತೆ ಕಾಣ್ತರೆ ರಮ್ಯಾ
ನಾಗರಹಾವು ಚಿತ್ರದಲ್ಲಿ ರಮ್ಯಾ ಗೆಟೆಪ್ ಗಮನಿದ್ರೆ, ಅರುಂಧತಿ ಚಿತ್ರದ ಜೇಜಮ್ಮನ ಪಾತ್ರ ಕಣ್ಮುಂದೆ ಬಂದು ಹೋಗುತ್ತೆ. ಯಾಕಂದ್ರೆ, ರಮ್ಯಾ ವೇಷಭೂಷಣ, ಹಣೆಯ ಮೇಲಿನ ಬಿಂದಿ, ರಮ್ಯಾ ತೊಟ್ಟಿರೊ ಸೀರೆ ಹಾಗೂ ಮೈಮೇಲಿನ ಆಭರಣಗಳು ಎಲ್ಲವೂ ಅರುಂಧತಿ ಚಿತ್ರದಲ್ಲಿ ಅನುಷ್ಕ ಅವರನ್ನೆ ಹೋಲುವಂತಿದೆ. ಅಷ್ಟೇ ಅಲ್ಲದೆ ರಮ್ಯಾ ಮ್ಯಾನರಿಸಂ ಹಾಗೂ ಅನುಷ್ಕ ಮ್ಯಾನರಿಸಂ ಕೂಡ ಬಹುತೇಕ ಒಂದೆ ತರ ಇದೆ.
3. ಅದ್ಧೂರಿ 'ಆಕ್ಟನ್'
ಅರುಂಧತಿ ಚಿತ್ರದಲ್ಲಿ ಅನುಷ್ಕ ಸಖತ್ ಆಕ್ಷನ್ ಮಾಡಿದ್ರು. ಈಗ ನಾಗರಹಾವು ಚಿತ್ರದಲ್ಲಿ ರಮ್ಯಾ ಅದೇ ತರ ಆಕ್ಷನ್ ಮಾಡಿದ್ದಾರೆ. ಒಂದು ಕಡೆ ನಾಗಿಣಿಯಾಗಿ ಹಾವಿನ ರೂಪದಲ್ಲಿ ಆರ್ಭಟಿಸಿದ್ರೆ, ಮತ್ತೊಂದೆಡೆ ಜನರ ಮಧ್ಯೆ ಜನನಾಯಕಿಯಾಗಿ ಮಿಂಚಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರೊ ಮೋಹಕತಾರೆ ಫೈಟಿಂಗ್ ಮಾಡಿ ತಮ್ಮ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ.
4. 'ಕತ್ತಿವರಸೆ'
ಅರುಂಧತಿ ಚಿತ್ರದಲ್ಲಿ ಅನುಷ್ಕ ಕತ್ತಿವರೆಸೆ, ಸೇರಿದಂತೆ ಹಲವು ರೀತಿಯ ಸಾಹಸ ಮಾಡಿದ್ರು. ನಾಗರಹಾವು ಚಿತ್ರದಲ್ಲಿ ರಮ್ಯಾ ಕೂಡ ಕತ್ತಿವರೆಸೆಯನ್ನ ತೋರಿಸಿದ್ದು ಅರುಂಧತಿಯಂತೆ ಕಮಾಲ್ ಮಾಡಿದ್ದಾರೆ.
5. ಖಡಕ್ ಡೈಲಾಗ್ಸ್
ಕತ್ತಿವರಸೆ, ಆಕ್ಷನ್ ಅಂದ್ಮೆಲೆ ಅದಕ್ಕೆ ತಕ್ಕಂತೆ ಡೈಲಾಗ್ ಗಳು ಇರಬೇಕಲ್ವಾ. ಎಸ್, ಈ ಚಿತ್ರದಲ್ಲಿ ರಮ್ಯಾ ಅವರಿಂದ ಭರ್ಜರಿ ಡೈಲಾಗ್ ಗಳು ಹೊರಹೊಮ್ಮಿವೆ. ಇಷ್ಟು ದಿನ ಬರಿ ರೊಮ್ಯಾಂಟಿಕ್ ಪಾತ್ರಗಳಿಗೆ ಸೀಮಿತವಾಗಿದ್ದ ರಮ್ಯಾ, ನಾಗರಹಾವು ಚಿತ್ರದ ಮೂಲಕ ಮಾಸ್ ಪ್ರಿಯರಿಗೂ ಇಷ್ಟವಾಗುತ್ತಾರೆ ಅನ್ನೊದ್ರಲ್ಲಿ ನೋ ಡೌಟ್.
6. ನ್ಯಾಯದೇವತೆ ರಮ್ಯಾ
ಅರುಂಧತಿ ಚಿತ್ರದಲ್ಲಿ ಜೇಜಮ್ಮನ ಪಾತ್ರ ದಂತೆ ಇಲ್ಲಿ ರಮ್ಯ ಪಾತ್ರವೂ ಆಕರ್ಷಣೆಯಾಗಿದೆ. ಸುತ್ತಾ ಮುತ್ತಾ ಹತ್ತೂರಿಗೆ ನ್ಯಾಯದೇವತೆ ಹಾಗೂ ಭಾಗ್ಯದೇವತೆಯಾಗಿ ರಮ್ಯಾರನ್ನ ಬಿಂಬಿಸಲಾಗಿದೆ.
7. ಕೋಡಿರಾಮಕೃಷ್ಣರ ಕೈಚಳಕ
ರಮ್ಯಾ ಹಾಗೂ ಅರುಂಧತಿಯ ಮಧ್ಯೆ ಇಷ್ಟೆಲ್ಲ ಸಾಮ್ಯತೆಗಳು ಇರೋದಕ್ಕೆ ಕಾರಣ ನಿರ್ದೇಶಕ ಕೋಡಿ ರಾಮಕೃಷ್ಣ. ಯಾಕಂದ್ರೆ, ಅರುಂಧತಿ ಚಿತ್ರದಲ್ಲೂ ಅನುಷ್ಕಗೆ ಮೇಕ್ ಓವರ್‌ ಮಾಡಿದ್ದು ಇದೆ ನಿರ್ದೇಶಕ. ಹೀಗಾಗಿ ರಮ್ಯಾ ವಿಷ್ಯದಲ್ಲೂ ಕೋಡಿ ರಾಮಕೃಷ್ಣ ಇಂತಾಹದ್ದೊಂದು ಸಾಹಸಕ್ಕೆ ಕೈಹಾಕಿದ್ದಾರೆ. ಇದು ಎಷ್ಟರ ಮಟ್ಟಿಗೆ ವರ್ಕ್ಔಟ್ ಆಗುತ್ತೆ ಅಂತಾ ಕೆಲವೆ ಕೆಲವು ದಿನಗಳಲ್ಲಿ ಗೊತ್ತಾಗಲಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.