Breaking News
recent

ರಮೇಶ್-ಗಣೇಶ್ ಡಬಲ್ ಧಮಾಕ!

ಚಿತ್ರರಂಗದಲ್ಲಿ ತೀರಾ ಅಪರೂಪಕ್ಕೆನ್ನುವಂತೆ ಮಹಾ ಸಂಗಮಗಳಾಗುತ್ತಿರುತ್ತವೆ. ಸದ್ಯ ರಮೇಶ್ ಅರವಿಂದ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ಸೌತ್ ಇಂಡಿಯಾದ ಮೇರು ನಿರ್ಮಾಪಕರಾದ ಧೀರ ರಾಕ್ ಲೈನ್ ವೆಂಕಟೇಶ್ ಮತ್ತ ಅಲ್ಲು ಅರವಿಂದ್ ಒಟ್ಟು ಸೇರಿದ್ದಾರೆ. Trailer
sundaranga jaana kannada songs download
sundaranga jaana kannada songs download
ಈ ಎಲ್ಲ ಖ್ಯಾತನಾಮರು ಒಂದಾದಾಗ ನಿರ್ಮಾಣಗೊಂಡಿರುವ ಚಿತ್ರ `ಸುಂದರಾಂಗ ಜಾಣ’! `ದೂರದಿಂದ ಬಂದಂಥ ಸುಂದರಾಂಗ ಜಾಣ’ ಹಾಡಿನಿಂದ ಸ್ಫೂರ್ತಿಗೊಂಡು ಈ ಚಿತ್ರಕ್ಕೆ ಶೀರ್ಷಿಕೆಯನ್ನು ಇಡಲಾಗಿದೆ. `ಜಾಣ’ ಎನ್ನುವ ಪದ ಈ ಚಿತ್ರಕ್ಕೆ ತೀರಾ ಸೂಕ್ತವಾಗಿರುವುದೂ ಈ ಟೈಟಲ್‌ಗೆ ಕಾರಣವಾಗಿದೆ. ಇದು ಒಬ್ಬ ಜಾಣ ಪೆದ್ದನ ಕಥೆ. ತೆಲುಗಿನಲ್ಲಿ ಬಂದು ಸೂಪರ್ ಹಿಟ್ ಆಗಿದ್ದ `ಭಲೇ ಭಲೇ ಮಗಾಡಿವೋಯ್’ ಚಿತ್ರದ ಎಳೆಯನ್ನು ಬಳಸಿಕೊಂಡು `ಸುಂದರಾಂಗ ಜಾಣ’ನನ್ನು ಸಿದ್ಧಗೊಳಿಸಲಾಗಿದೆ. ರಮೇಶ್ ಅರವಿಂದ್ ರಿಮೇಕ್ ಸಿನಿಮಾವನ್ನು ಮಾಡಿದರೂ, ಯಾವತ್ತೂ ಮೂಲ ಚಿತ್ರವನ್ನು ಯಥಾವತ್ತು ಭಟ್ಟಿ ಇಳಿಸಿದವರಲ್ಲ. ಮೂಲ ಚಿತ್ರದ ಪ್ರಧಾನ ಅಂಶಗಳನ್ನಷ್ಟೇ ಬಳಸಿಕೊಂಡು ತಮ್ಮದೇ ಶೈಲಿಯಲ್ಲಿ ಚಿತ್ರವನ್ನು ಕಟ್ಟಿಕೊಡುವ ಭಿನ್ನ ನಿರ್ದೇಶಕ. ಇದಕ್ಕೆ ರಮೇಶ್ ಅವರೇ ನಿರ್ದೇಶಿಸಿದ್ದ `ರಾಮ ಶಾಮ ಭಾಮ’ ಒಂದೊಳ್ಳೆ ಉದಾಹರಣೆ.
ಇಲ್ಲಿ ಮತ್ತೊಂದು ವಿಶೇಷತೆಯಿದೆ. ರಮೇಶ್ ಅರವಿಂದ್ ಸ್ವತಃ ತಾವೇ ನಟಿಸಿದ ಸಿನಿಮಾವನ್ನಷ್ಟೇ ನಿರ್ದೇಶಿಸುತ್ತಿದ್ದರು. ಆದರೆ ಕನ್ನಡದಲ್ಲಿ ಮೊದಲ ಬಾರಿಗೆ ಮತ್ತೊಬ್ಬ ನಾಯಕನಟನ ಸಿನಿಮಾವನ್ನು ರಮೇಶ್ ಅವರು ನಿರ್ದೇಶಿಸಿದ್ದಾರೆ.  Upcoming Sundaraanga Jaana Kannada Movie
ಇನ್ನು ಈ ಚಿತ್ರದಲ್ಲಿ ಗಣೇಶ್ ಅವರೊಂದಿಗೆ ಶಾನ್ವಿ ಶ್ರೀವಾಸ್ತವ್ ನಾಯಕಿಯಾಗಿ ನಟಿಸಿದ್ದಾರೆ. ದೇವರಾಜ್, ರಂಗಾಯಣ ರಘು, ಸಾಧು ಕೋಕಿಲಾ, ರವಿಶಂಕರ್ ಸೇರಿಂದತೆ ಅನೇಕ ಅನುಭವೀ ನಟರ ತಾರಾಗಣವಿದೆ. ಅಜನೀಶ್ ಲೋಕನಾಥ್ ಅವರ ಸಂಗೀತ, ಮನೋಹರ್ ಜೋಷಿ ಅವರ ಛಾಯಾಗ್ರಹಣ, ಜೋ.ನಿ. ಹರ್ಷ ಸಂಕಲನ ಮತ್ತು `ಪುಷ್ಪಕವಿಮಾನ’ ಚಿತ್ರಕ್ಕೆ ಡೈಲಾಗ್ ಬರೆದಿರುವ ಗುರುಪ್ರಸಾದ್ ಕಶ್ಯಪ್ ಅವರು ಸಂಭಾಷಣೆ ಬರೆದಿದ್ದಾರೆ.
ಸದ್ಯ `ಸುಂದರಾಂಗ ಜಾಣ’ ಚಿತ್ರದ ಚಿತ್ರೀಕರಣ ಸಂಪೂರ್ಣಗೊಂಡಿದ್ದು, ಗ್ರಾಫಿಕ್ಸ್ ಕಾರ್ಯ ಕೂಡಾ ಮುಕ್ತಾಯವಾಗಿದೆ. ಒಟ್ಟಾರೆಯಾಗಿ, ತೆರೆಗೆ ಬರಲು ಸಜ್ಜಾಗಿ ನಿಂತಿರುವ `ಸುಂದರಾಂಗ ಜಾಣ’ನಿಗೆ ಸೆನ್ಸಾರ್ ಮಾತ್ರ ಬಾಕಿ ಉಳಿದಿದೆ. ಸೆನ್ಸಾರ್ ಪ್ರಮಾಣಪತ್ರ ಸಿಕ್ಕ ಕೂಡಲೇ ಶೀಘ್ರದಲ್ಲೇ ತೆರೆಮೇಲೆ ಬರಲಿದೆ.
ರಮೇಶ್ ಅರವಿಂದ್ ನಟನೆ ಮತ್ತು ನಿರ್ದೇಶನ ಎರಡರಲ್ಲೂ ಹೆಸರು ಮಾಡಿರುವವರು. ಗಣೇಶ್ ತಮ್ಮ ಅಭಿನಯದಿಂದಲೇ ಕನ್ನಡದ ಸಿನಿಮಾಸಕ್ತರ ಮನಸೂರೆಗೊಂಡವರು. ಈ ಇಬ್ಬರ ಅಪರೂಪದ ಕಾಂಬಿನೇಷನ್ ಮತ್ತು ನಿರ್ಮಾಣ ಶ್ರೀಮಂತಿಕೆಗೆ ಹೆಸರಾಗಿರುವ ರಾಕ್ ಲೈನ್ ವೆಂಕಟೇಶ್ ಮತ್ತು ಅಲ್ಲು ಅರವಿಂದ್ ಅವರ ನಿರ್ಮಾಣದ `ಸುಂದರಾಂಗ ಜಾಣ’ ಕನ್ನಡದ ಪ್ರೇಕ್ಷಕರ ಪಾಲಿಗೆ ಭರ್ಜರಿ ಮನರಂಜೆ ನೀಡೋದಂತೂ ಖಚಿತ. ಅದರಲ್ಲೂ ಹಾಸ್ಯ ಕಥಾಹಂದರ ಹೊಂದಿರುವ ಸಿನಿಮಾವನ್ನು ರಮೇಶ್ ಅರವಿಂದ್ ನಿರ್ದೇಶಿಸಿದ್ದಾರೆ ಎಂದಮೇಲೆ ನೋಡುಗರ ಪಾಲಿಗೆ ನಿಜಕ್ಕೂ ಹಬ್ಬವಾಗುವುದರಲ್ಲಿ ಸಂದೇಹವಿಲ್ಲ.
Fresh Kannada

Fresh Kannada

No comments:

Post a Comment

Google+ Followers

Powered by Blogger.