Breaking News
recent

ಮುಂಬೈ ದಾಳಿಯ ಕೊನೆಯ ಹೀರೋ ‘ಸೀಸರ್’ ನಾಯಿ ಸಾವು

ಮುಂಬೈ: 2011ರ ಮುಂಬೈನಲ್ಲಿ ನಡೆದ ಭಯೋತ್ಪಾಕರ ದಾಳಿ ವೇಳೆ ನೂರಾರು ಜನರ ಪ್ರಾಣ ಉಳಿಸಿದ್ದ 4 ಪೊಲೀಸ್ ನಾಯಿಗಳಲ್ಲಿ ಬದುಕುಳಿದಿದ್ದ ಕೊನೆಯ ನಾಯಿ ಸೀಸರ್ ಗುರುವಾರದಂದು ಸಾವನ್ನಪ್ಪಿದೆ.
ceaser hero
ceaser hero

ವಿರಾರ್‍ನ ರಿಟೈರ್‍ಮೆಂಟ್ ಅನಿಮಲ್ ಹೋಮ್‍ನಲ್ಲಿ ಕೊನೆಯುಸಿರೆಳೆದ ಸೀಸರ್ ಮೇಲೆ ರಾಷ್ಟ್ರಧ್ವಜ ಹೊದಿಸಿ ಗೌರವ ಸಲ್ಲಿಸಿದ ಬಳಿಕ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಮುಂಬೈ ದಾಳಿಯ ಹೀರೋ ಶ್ವಾನಗಳಾದ ಮ್ಯಾಕ್ಸ್, ಟೈಗರ್ ಹಾಗೂ ಸುಲ್ತಾನ್ ಸಾವನ್ನಪ್ಪಿದ್ದರಿಂದ ಸೀಸರ್ ಖಿನ್ನತೆಗೆ ಒಳಗಾಗಿತ್ತು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸೀಸರ್‍ನನ್ನು ಪರೇಲ್‍ನ ಪಶು ಚಿಕಿತ್ಸಾಲಯದಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸಿದ ನಾಯಿ ಸೀಸರ್ ಪವಾಡಸದೃಶವಾಗಿ ಚೇತರಿಸಿಕೊಂಡಿತ್ತು. ಆದರೆ ಕಳೆದ ವಾರದಿಂದ ಶಕ್ತಿಹೀನವಾಗಿದ್ದ ಸೀಸರ್ ನಡೆದಾಡಲು ಕೂಡ ಸಾಧ್ಯವಾಗದ ಪರಿಸ್ಥಿತಿಯಲ್ಲಿತ್ತು.

#ceaser ಬಾಂಬ್ ಡಿಟೆಕ್ಷನ್ ಅಂಡ್ ಡಿಸ್ಪೋಸಲ್ ಸ್ಕ್ವಾಡ್(ಬಿಡಿಡಿಎಸ್)ನ ಭಾಗವಾಗಿದ್ದ ಮ್ಯಾಕ್ಸ್, ಟೈಗರ್, ಸುಲ್ತಾನ್ ಹಾಗೂ ಸೀಝರ್‍ನನ್ನು ನವೆಂಬರ್ 26, 2011ರಲ್ಲಿ ನಡೆದಿದ್ದ ಮುಂಬೈ ದಾಳಿಯ ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು. 2006ರಲ್ಲಿ ಝಾವೇರಿ ಬಜಾರ್‍ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಸೇರಿದಂತೆ ಕಳೆದ 12 ವರ್ಷಗಳಲ್ಲಾದ ಪ್ರಮುಖ ಬಾಂಬ್ ಸ್ಫೋಟದ ಕಾರ್ಯಾಚರಣೆಗಳಲ್ಲಿ ಈ ನಾಲ್ಕು ನಾಯಿಗಳು ಭಾಗಿಯಾಗಿದ್ದವು. ಅದರಲ್ಲೂ ಸೀಸರ್ 2008ರಲ್ಲಿ ನಡೆದ ಉಗ್ರರ ದಾಳಿ ವೇಳೆ ತಾಜ್ ಹೋಟೆಲ್‍ನಲ್ಲಿ 8 ಕೆಜಿ ಆರ್‍ಡಿಎಕ್ಸ್ ಪತ್ತೆ ಹಚ್ಚಲು ಸಹಕರಿಸಿತ್ತು. ಅಲ್ಲದೆ ಸಿಎಸ್‍ಟಿ ನಿಲ್ದಾಣದಲ್ಲೂ ಬಾಂಬ್ ಪತ್ತೆ ಹಚ್ಚಿತ್ತು.

ಪಶು ಚಿಕಿತ್ಸಾಲಯಕ್ಕೆ ಕರೆದುಕೊಂಡು ಬಂದ ಸೀಸರ್ ಮೃತದೇಹವನ್ನು ಮುಂಬೈ ಪೊಲೀಸ್ ಪ್ರತಿನಿಧಿ ಸಂತೋಷ್ ಸಮ್ಮುಖದಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು.
Fresh Kannada

Fresh Kannada

No comments:

Post a Comment

Google+ Followers

Powered by Blogger.