Breaking News
recent

ಭುವನ್ - ಸಂಜನಾ ಪ್ರೀತಿ ಸ್ಪಂದನ

ಬಿಗ್ ಬಾಸ್ ಮನೆ ಹಾಗೇ ಆಡಿಸುತ್ತದೋ, ಬಿಗ್ ಬಾಸ್ ಗೆ ಹೋದವರು ಹಾಗೇ ಆಡುತ್ತಾರೋ. ಗೊತ್ತಿಲ್ಲ. ಯಾಕಂದ್ರೆ ನಾವಂತು ಹೋಗಿಲ್ಲ. ಹೋಗಿದ್ರೆ ಗೊತ್ತಾಗಿರೋದು. ಹೋಗೋ ಭಾಗ್ಯವೂ ಸಿಗಲ್ಲ ಬಿಡಿ. ಜನ ಸಾಮಾನ್ಯರಿಗೆ ಬಿಗ್ ಬಾಸ್ ಮನೆ ಭಾಗ್ಯವಿಲ್ಲ. ಹೀಗಾಗಿ ನಾವೇನಿದ್ರೂ ಟಿವಿ ಮುಂದೆ ಕೂರಬೇಕಷ್ಟೇ.ನಾವು ನೀವು ಜನ ಸಾಮಾನ್ಯರು ಹೀಗಾಗಿ ಬಿಗ್ ಬಾಸ್ ಮನೆ ಪ್ರವೇಶ ನಮಗಿಲ್ಲ. ಕಿರಿಕ್, ಒಳ್ಳೆತನ ಅಂದುಕೊಂಡು ಫೇಮಸ್ ಆದವರು ಮಾತ್ರ ಮನೆ ಒಳಗಡೆ ಹೋಗಬಹುದು.ಸುದ್ದಿ ವಾಹಿನಿಯ ವಾಚಕರಾಗಿರಬೇಕು.ಇಲ್ಲಾ ಮಾಡೆಲ್ ಗಳಾಗಿರಬೇಕು. ಸೆಲೆಬ್ರೆಟಿಗಳಿಗೆ ಇಲ್ಲಿ ಅವಕಾಶ. ಜನ ಸಾಮಾನ್ಯ ಕೇವಲ ವೀಕ್ಷಕ. 


sanjana bhuvan
sanjana bhuvan
ನಮ್ಮ ಜನರೋ ಬಿಗ್ ಬಾಸ್ ಕಾರ್ಯಕ್ರಮ ನೋಡೋದು ಮಿಸ್ ಆದ್ರೆ ಬಿಬಿಎಂಟಿಸಿ ಬಸ್ ನಲ್ಲಿ ಪಕ್ಕದವರನ್ನ ಕೇಳಿಯಾಗಿದ್ರು, ಎನಾಯ್ತು ನಿನ್ನೆ ಅನ್ನುವುದನ್ನು ತಿಳಿದುಕೊಳ್ಳುತ್ತಾರೆ. ಇದಕ್ಕೆ ಸಿಂಪಲ್ ಕಾರಣ ಎನ್ ಗೊತ್ತಾ. ನಮ್ಮ ಮನೆ, ಸಮಸ್ಯೆಗಿಂತ ಪಕ್ಷದ ಮನೆಯ ಗಾಸಿಪ್ ಬಗ್ಗೆ ತಲೆ ಕೆಡಿಸಿಕೊಳ್ಳುವುದು.
sanjana bhuvan
sanjana bhuvan
ಇವತ್ತು ಮೊದಲ ಸಲ ಎಲಿಮೇನೇಟ್ ಕಾರ್ಯ ನಡೆಯಲಿದೆ. ನಾಲ್ವರು ನಾಮಿನೇಷನ್ ಪಟ್ಟಿಯಲ್ಲಿದ್ದಾರೆ, ಅದರಲ್ಲಿ ಒಳ್ಳೆ ಹುಡುಗ ಪ್ರಥಮ್ ಮೊದಲ ಬೆಂಚ್ ಸ್ಟೂಡೆಂಟ್.  ಪರಿಸ್ಥಿತಿ ನೋಡಿದ್ರೆ ಮೊದಲ ವಾರ ಎಲಿಮಿನೇಟ್ ಕಾರ್ಯ ಪೋಸ್ಟ್ ಪೋನ್ ಆದ್ರೂ ಅಚ್ಚರಿಯಿಲ್ಲ.ಯಾಕಂದ್ರೆ ಮನೆಗೆ ಹೋಗುವ ಎಲ್ಲಾ ಅರ್ಹತೆ ಹೊಂದಿದವರ ನಡುವೆ ಶುರುವಾಗಿದೆ ಮೊಹಬ್ಬತ್, ಇಸ್ಕ್ , ಪ್ಯಾರ್.
ರಿಯಾಲಿಟಿ ಸ್ಟಾರ್ ಭುವನ್ ಪೊನ್ನಣ್ಣ ಮತ್ತು ಕಿರುತೆರೆ ನಟಿ ಸಂಜನಾ ನಡುವೆ ಸಮ್ ಥಿಂಗ್ ಸಮ್ ಥಿಂಗ್ ಶುರುವಾಗಿದೆ. ಅದು ಬಿಗ್ ಬಾಸ್ ಶುರುವಾದ ಮೊದಲ ದಿನವೇ ಇತ್ತು. ಇತ್ತೀಚೆಗೆ ಸ್ವಲ್ಪ ಜಾಸ್ತಿಯಾಗಿದೆ. Share and Care ಇಬ್ಬರನ್ನೂ ಮತ್ತಷ್ಟು ಹತ್ತಿರ ತಂದಿದೆ.
ನೀವು ಬೇಕಿದ್ರೆ ಒಂದು ವಾರ ರಿ ಕಾಲ್ ಮಾಡಿಕೊಳ್ಳಿ. ಸಂಜನಾ ಭುವನ್ ಒಂದೇ ಫ್ರೇಮಿನಲ್ಲಿ ಕಾಣಿಸಿಕೊಂಡ ದಿನವಿದೆಯೇ. ಖಂಡಿತಾ ಇಲ್ಲ. ಇಬ್ಬರಿಗೂ ಕ್ಯಾಮಾರದ ಭಯವಿದೆ. ಹಾಗಾಗಿ ಅಹಿತರಕರ ಘಟನೆಗಳು ನಡೆದಿಲ್ಲ.
sanjana bhuvan
sanjana bhuvan
ರಾತ್ರಿ ಇಬ್ಬರೂ ಜಂಟಿಯಾಗಿ ಕೂತು ಹರಟಿದ್ದೇನು, ಬೆಡ್ ರೂಂ ನಲ್ಲಿ ಕಷ್ಚ ಸುಖ ಹಂಚಿಕೊಂಡಿದ್ದೇನು. ಐಸ್ ಕ್ರೀಂ ತಿನ್ನಿಸಿದ್ದೇನು. ಪಾದ ಸ್ಪರ್ಶ ಪಡೆದಿದ್ದೇನು. ಭುವನ್ ಟಾಯ್ಲೆಟ್ ನಲ್ಲಿದ್ರೆ ಸಂಜನಾ ಕೀಟಲೆ ಕೊಟ್ಟಿರುವುದನ್ನು ನೋಡಿದಾಗ ಕ್ಯೂಟ್ ಅನ್ನಿಸದೇ ಇರದು. ಹೀಗೆ ಒಂದೇ ಎರಡೇ. ವಾಹಿನಿಯಲ್ಲಿ ಎರಡು ಗಂಟೆ ಗಳ ಕಾಲ ಹೀಗೆ, ಇನ್ನೂ 24 ಗಂಟೆ ಹೇಗೋ. ಪಾಪಾ ಬಿಗ್ ಬಾಸ್ ಮನೆಯ ಕ್ಯಾಮಾರಮೆನ್ ಗಳ ಕಥೆ.
sanjana bhuvan
sanjana bhuvan
ಇಬ್ಬರ ನಡುವೆ ಎನಿಲ್ಲ ಎನಿಲ್ಲ ಅಂದ್ರು ಎನೋ ಇದೆ ಅನ್ನುವುದು ಸ್ಪಷ್ಟ. ಇನ್ನೊಂದಿಷ್ಟು ದಿನ ಕಳೆಯಲ್ಲಿ ಗೊತ್ತಾಗಿಬಿಡುತ್ತದೆ. ಈ ಕಾರಣಕ್ಕಾಗಿ ಇವರಿಬ್ಬರು ಮನೆ ಹೊರಗಡೆ ಹೋಗುವುದಿಲ್ಲ.
ಬಿಗ್ ಬಾಸ್ ಮನೆಯಲ್ಲಿ ಲವ್ ಆಗುವುದೇಕೆ?
ಈ ಪ್ರಶ್ನೆಗೆ ಈವರೆಗೆ ಉತ್ತರ ಸಿಕ್ಕಿಲ್ಲ. ಯಾವ ಲವ್ ಎಕ್ಸ್ ಪರ್ಟ್ ಕೂಡಾ ಉತ್ತರ ಕೊಟ್ಟಿಲ್ಲ, ಮಾನಸಿಕರ ರೋಗ ತಜ್ಞರಿಗೂ ಉತ್ತರ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಬಿಗ್ ಬಾಸ್ ಮನೆಯಲ್ಲಿ ಲವ್ ಅನ್ನುವ ಶಬ್ಧಕ್ಕೆ ಬೆಲೆ ಇಲ್ಲ. ಅದನ್ನು ಆಮೇಲೆ ಹೇಳ್ತಿವಿ.
ಸಂಜನಾ ಬಗ್ಗೆ  ಕೆಲವರಿಗೆ ಉರಿ.
ಸಂಜನಾಳ ಕಲರ್,ಲುಕ್, ಆಕೆಯ ಡ್ರೆಸ್ಸಿಂಗ್  ಸ್ಟೈಲ್, ಎಲ್ಲವೂ ಆಕೆಯನ್ನು ನೋಡಿದ್ರೆ ಮತ್ತೊಮ್ಮೆ ನೋಡಬೇಕು ಅನ್ನುವಂತೆ ಮಾಡಿದೆ. ಈಕಡೆ ಭುವನ್ ನನ್ನು ಕಂಡ್ರೆ ಯಾವ ಹುಡುಗಿಯರು ಬೀಳಲ್ಲ ಹೇಳಿ. ಸಂಜನಾಳನ್ನು ಕಂಡ್ರೆ ಶೀತಲ್, ಕಾವ್ಯ ಅದ್ಯಾಕೆ ಹಾಗೇ ಉರಿದು ಬೀಳುತ್ತಿದ್ದಾರೆ ಅನ್ನುವುದು ಅರ್ಥವಾಗಿಲ್ಲ. ಹಾಗೇ ನೋಡಿದ್ರೆ ಸಂಜನಾ ನೇರ ದಿಟ್ಟ ಹುಡುಗಿ. ತನ್ನ ಡ್ರೆಸ್, ತನ್ನ ಮೇಕಪ್ ಬಗ್ಗೆ ಎಂದಿಗೂ ಆಕೆ ತಲೆ ಕೆಡಿಸಿಕೊಳ್ಳುವುದಿಲ್ಲ.ನಾನಿರುವುದೇ ಹೀಗೆ, ಬೇಕಿದ್ರೆ ನೋಡಿ, ಇಲ್ಲಾ ಅಂದ್ರೆ ಕಣ್ಮುಂಚಿಕೊಳ್ಳಿ ಅನ್ನುವ ಹುಡುಗಿಯಿದು. ಇವರಿಗೆಲ್ಲಾ ಸಂಜನಾ ಬಗ್ಗೆ ಅಸಮಾಧಾನ, ಆದ್ರೆ ಮೋಹನ್ ಅದೆಷ್ಟು ಪ್ರಬುದ್ಧವಾಗಿ ಮಾತನಾಡಿದ್ದಾರೆ.“ಆಕೆ ಆರ್ಟಿಸ್ಟ್ ಮೇಟಿರಿಯಲ್,  ಕಲಾವಿದೆಗೆ ಬೇಕಾದ ಎಲ್ಲಾ ಆರ್ಹತೆ, ಗುಣ ಆಕೆಯಲ್ಲಿ ಇದೆ ಅಂದಿದ್ದಾರೆ” ಆದ್ರೆ ಎನ್ ಮಾಡೋದು ‘ಜಡೆ ಜಗಳ’ ಜಗದ ನಿಯಮವಲ್ಲವೇ.
ಜಡೆ ಜಗಳದಿಂದ ಬೇಸತ್ತ ಸಂಜನಾ ಭುವನ್ ಗೆ ಹತ್ತಿರವಾಗುತ್ತಿದ್ದಾಳೆ. ಈ ಆತ್ಮೀಯತೆ ಇಂದು ಸುದೀಪ್ ಬಾಯಲ್ಲಿ ಪ್ರಶ್ನೆಯಾಗಿ ಖಂಡಿತಾ ಬರಲಿದೆ. ಸಂಜನಾ ಭುವನ್ ಪ್ರೀತಿ ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಮುಂದುವರಿಯುತ್ತದೆ ಎಂದು ನಿರೀಕ್ಷಿಸಬೇಡಿ. ನಿನ್ಯಾರೋ, ನಾನ್ಯರೋ ಅನ್ನೋ ತರ ಇಬ್ಬರು ಬದುಕುತ್ತಾರೆ.
ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ಹೊಸದಲ್ಲ.
ಹಿಂದಿಯ ಬಿಗ್ ಬಾಸ್ ಮನೆಯಲ್ಲಿ ಹುಟ್ಟಿದ ಪ್ರೀತಿಗಳೆಷ್ಚೋ, ಚುಂಬಿಸಿದ ತುಟಿಗಳೆಷ್ಟೋ. ಬಿಗ್ ಬಾಸ್ ಕಾರ್ಯಕ್ರಮ ಮುಗಿದ ಮೇಲೆ ಎಲ್ಲವನ್ನೂ ಮರೆತಿದ್ದಾರೆ. ನಾವು ನಾಟಕದ ಮಂದಿ, ಪ್ರೀತಿಯ ನಾಟಕವಾಡುತ್ತೇವೆ ಅನ್ನುತ್ತಾರೆ ಇವರು. ಬಿಗ್ ಬ್ರದರ್ ಕಾರ್ಯಕ್ರಮದಲ್ಲಿ ಸ್ಪರ್ಧಿಗಳು ಪ್ರೀತಿಯಲ್ಲ, ದೈಹಿಕ ಸಂಪರ್ಕ ಬೆಳೆಸಿಕೊಳ್ಳುತ್ತಾರೆ. ( ಹಾಗೇ ಮಾಡಿದ್ರೆ ಅವರಿಗೆ ಹೆಚ್ಚು ಸಂಭಾವನೆ ಕೊಡಲಾಗುತ್ತದೆ.) ನೂರಾರು ಕ್ಯಾಮಾರಗಳ ಮುಂದೆ ಚಟ ತೀರಿಸಿಕೊಂಡವರು ಕಾರ್ಯಕ್ರಮ ಮುಕ್ತಾಯದ ನಂತ್ರ ಏನು ನಡೆದಿಲ್ಲ ಅನ್ನುವಂತೆ ಇರುತ್ತಾರೆ. ( ಬಿಗ್ ಬಾಸ್ ಮನೆಯೊಳಗಿನ ರಹಸ್ಯ ಮತ್ತೊಂದು ಲೇಖನದಲ್ಲಿ ವಿವರವಾಗಿ ಬರೆಯುತ್ತೇವೆ )
ಇನ್ನು ಕನ್ನಡದ ಬಿಗ್ ಬಾಸ್ ಗೆ ಬರುವುದಾದ್ರೆ ಪೂಜಾ ಗಾಂಧಿ ಮತ್ತು ಅಯ್ಯಪ್ಪ ತಾಳಿ ಕಟ್ಟಿ ಬಿಟ್ಟರೇನೋ ಅಂದುಕೊಳ್ಳಲಾಗಿತ್ತು. ಆದ್ರೆ ಈಗ ಇಬ್ಬರು ಅಪರೂಪಕ್ಕೆ ಪಾರ್ಟಿಗಳಲ್ಲಿ ಕಾಣ ಸಿಗುತ್ತಾರೆ ಬಿಟ್ಟರೆ, ತಮ್ಮ ಪಾಡಿಗೆ ತಾವು ಕೆಲಸದಲ್ಲಿ ನಿರತರಾಗಿದ್ದಾರೆ. ಇದೇ ಸೀಸನ್ ನಲ್ಲಿ ಚುಂಬಿಸಿಕೊಂಡ ಅಯ್ಯಪ್ಪ ಗೌತಮಿ ಕೂಡಾ ಅಷ್ಟೇನು ಕ್ಲೋಸ್ ಆಗಿಲ್ಲ.
pooja ayyapp
pooja ayyapp
ಮೊದಲ ಸೀಸನ್ ನಲ್ಲಿ ತಿಲಕ್ ಮತ್ತು ಶ್ವೇತಾಪಂಡಿತ್ ಆಡಿದ ಆಟವನ್ನು ನೋಡಿದ್ರೆ ಇಷ್ಟು ಹೊತ್ತಿಗೆ ಮನೆಗೊಂದು ಪಾಪು ಬಂದಿರುತ್ತಿತ್ತು. ಇವರು ಕೂಡಾ  ಕೇವಲ ಪಾರ್ಟಿಗೆ ಸೀಮಿತರಾಗಿದ್ದಾರೆ. ಹೊರತು ಬಿಗ್ ಬಾಸ್ ಮನೆಯ ಪ್ರೀತಿ ಪ್ರೇಮಗಳನ್ನು ಜೋಕ್ ಅನ್ನುವಂತೆ ಮರೆತು ಬಿಟ್ಚಿದ್ದಾರೆ.
tilak shweta pandit
tilak shweta pandit
ಬಿಗ್ ಬಾಸ್ ಮನೆ, ಸ್ಪರ್ಧಿಗಳನ್ನು ಸಾಕಷ್ಚು ಬದಲಾಯಿಸುತ್ತದೆ. ಮೊಬೈಲ್ , ಟಿವಿ ಪೇಪರ್ ಇರುವುದಿಲ್ಲ. ಯಾರಾದ್ರೂ ಆತ್ಮೀಯತೆ ತೋರಿಸಿದ್ರೆ ಮನಸ್ಸು ಕರಗಿ ಹೋಗಿ ಬಿಡುತ್ತದೆ. ಹೀಗಾಗಿ ಕ್ಷಣ ಮಾತ್ರದಲ್ಲಿ ಮನಸ್ಸು ಯಾರಿಗಾದ್ರೂ ಹಾತೊರೆಯುತ್ತದೆ. ಈ ಕಾರಣಕ್ಕಾಗಿ ಕ್ಯಾಮಾರ ಕಣ್ಣುಗಳನ್ನು ಮರೆತು ಸ್ಪರ್ಧಿಗಳು ಒಂದಾಗಿಬಿಡುತ್ತಾರೆ. ಪಾರ್ಕ್ ಗಳಲ್ಲಿ ಕಿಸ್ ಕೊಡುವವರಿಗೆ ಗೊತ್ತಿಲ್ಲವೇ, ಹಲವು ಕಣ್ಣುಗಳು ನಮ್ಮನ್ನು ಗಮನಿಸುತ್ತಿದೆ ಎಂದು. ಆದ್ರೂ ಅವರು ಚುಂಬಿಸುವುದಿಲ್ಲವೇ. ಬಯಲು ಪ್ರದೇಶದಲ್ಲಿ ಚುಂಬಿಸುತ್ತಾರೆ ಅಂದ ಮೇಲೆ ಮನೆಯೊಳಗಡೆ ಬಿಗ್ ಬಾಸ್ ಸ್ಪರ್ಧಿಗಳು ಚುಂಬಿಸದೇ ಇರಲು ಸಾಧ್ಯವೇ.
ಸಂಜನಾ, ಭುವನ್ ಆ ಮಟ್ಟಕ್ಕೆ ಹೋಗಿಲ್ಲ.ಒಂದಿಷ್ಚು ದಿನ ಕಳೆಯಲಿ ನಿಮಗೆ ಬಿಟ್ಟಿ ಮನರಂಜನೆ ಗ್ಯಾರಂಟಿ. ಆದ್ರೆ ಇದು ಎಷ್ಟರ ಮಟ್ಟಿಗೆ ಸರಿ ಅನ್ನುವುದನ್ನು ನೀವು ಹೇಳಬೇಕು.
Fresh Kannada

Fresh Kannada

No comments:

Post a Comment

Google+ Followers

Powered by Blogger.