Breaking News
recent

ಕನ್ನಡಕ್ಕೆ ಬಂದ 'ಸೈರತ್' ಬೆಡಗಿ ರಿಂಕುಗೆ ನಾಯಕ ಸಿಕ್ಕಾಯ್ತು!

ಮರಾಠಿ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ 'ಸೈರತ್' (ಸೈರಟ್) ಕನ್ನಡಕ್ಕೆ ರೀಮೇಕ್ ಆಗುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಮಾತ್ರವಲ್ಲದೇ ಮರಾಠಿಯಲ್ಲಿ ನಾಯಕಿ ಪಾತ್ರ ವಹಿಸಿದ್ದ ಆರ್ಚಿ ಅಲಿಯಾಸ್ ರಿಂಕು ರಾಜ್ ಗುರು ಅವರೇ ಕನ್ನಡದಲ್ಲೂ ನಾಯಕಿಯಾಗಿದ್ದಾರೆ.
Rinku Rajguru

ಇನ್ನು ನಾಯಕ ಯಾರಾಗಬಹುದು ಅಂತ ಎಲ್ಲರಿಗೂ ಭಾರಿ ಕುತೂಹಲ ಇತ್ತು. ಇದೀಗ ಆ ಕುತೂಹಲಕ್ಕೂ ತೆರೆ ಬಿದ್ದಿದೆ. ಬಹುಭಾಷಾ ನಟ ಕಮ್ ಹೆಚ್ಚಾಗಿ ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ, ಸತ್ಯ ಪ್ರಕಾಶ್ ಅವರ ಮಗ ಇದೀಗ 'ಸೈರತ್' ರೀಮೇಕ್ ಗೆ ನಾಯಕನಾಗಿ ಆಯ್ಕೆ ಆಗಿದ್ದಾರೆ.

ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ಈ ಚಿತ್ರದ ರೀಮೇಕ್ ಹಕ್ಕನ್ನು ಖರೀದಿ ಮಾಡಿದ್ದು, ಎಸ್ ನಾರಾಯಣ ಅವರು ಬಹಳ ದಿನಗಳ ಬಳಿಕ ಇನ್ನೂ ಹೆಸರಿಡದ ಈ ಚಿತ್ರದ ಮೂಲಕ ನಿರ್ದೇಶನಕ್ಕೆ ಧುಮುಕಿದ್ದಾರೆ.
ಈಗಾಗಲೇ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದ್ದು, ನಾಯಕ ಮತ್ತು ನಾಯಕಿಯ ಫೋಟೋಶೂಟ್ ಕೂಡ ನಡೆಸಲಾಗಿದೆ. ನವರಾತ್ರಿ ಹಬ್ಬದ ಸಂಭ್ರಮದ ಜೊತೆ-ಜೊತೆಗೆ ಕಳೆದ ಗುರುವಾರ (ಅಕ್ಟೋಬರ್ 6) ರಂದು ಚಿತ್ರದ ಮುಹೂರ್ತ ನೆರವೇರಿಸಿ, ಚಿತ್ರೀಕರಣಕ್ಕೆ ಚಾಲನೆ ನೀಡಿದ್ದಾರೆ.

ಸದ್ಯಕ್ಕೆ ಕೇವಲ ಮೂರು ದಿನಗಳ ಶೂಟಿಂಗ್ ಮುಗಿಸಿ ತದನಂತರ ದೀಪಾವಳಿ ಹಬ್ಬದ ಸಮಯದಲ್ಲಿ ಶೂಟಿಂಗ್ ಮುಂದುವರೆಸಲು ಎಸ್ ನಾರಾಯಣ್ ಮತ್ತು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ಪ್ಲ್ಯಾನ್ ಮಾಡಿದ್ದಾರೆ.
ಖಳನಟ ಸತ್ಯ ಪ್ರಕಾಶ್ ಅವರ ಪುತ್ರನ ಹೆಸರನ್ನು ಬದಲಾಯಿಸಲು ನಿರ್ದೇಶಕ ಎಸ್ ನಾರಾಯಣ್ ಅವರು ನಿರ್ಧರಿಸಿದ್ದು, ಹೊಸ ಹೆಸರಿನ ಜೊತೆಗೆ ಸತ್ಯ ಪ್ರಕಾಶ್ ಅವರ ಮಗ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.
ಮರಾಠಿಯಲ್ಲಿ ಸೂಪರ್-ಡೂಪರ್ ಹಿಟ್ ಆದ ಈ ಸಿನಿಮಾ ಕನ್ನಡದಲ್ಲಿ ಎಷ್ಟರಮಟ್ಟಿಗೆ ಹಿಟ್ ಆಗುತ್ತೆ ಅನ್ನೋದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.