Breaking News
recent

ಊಹಾಪೋಹಕ್ಕೆ ತೆರೆ ಒಡೆಯರ್ ತೂಕ ಇಳಿಸಿದ ಅಭಿಮಾನಿಗಳು!

‘ನಟರಾಜ ಸರ್ವೀಸ್’ ಚಿತ್ರ ನಾಡಿದ್ದು ಭಾನುವಾರ (ಅಕ್ಟೋಬರ್ 16) ತೆರೆಕಾಣುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದ್ದ ಊಹಾಪೋಹಕ್ಕೆ ಚಿತ್ರತಂಡ ತೆರೆ ಎಳೆದಿದೆ. ಯಾರೋ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ‘ನಟರಾಜ ಸರ್ವೀಸ್’ ಭಾನುವಾರ ತೆರೆಕಾಣುತ್ತಿದೆ ಎಂಬ ಬರಹವಿರುವ ಪೋಸ್ಟರ್‌ಗಳನ್ನು ಲಗತ್ತಿಸಿದ್ದರು. ಆದರೆ ಅದು ಸುಳ್ಳು, ಚಿತ್ರ ಮುಂದಿನ ವಾರ – ಅಂದರೆ, ಅ.21ರಂದು ರಾಜ್ಯದಾದ್ಯಂತ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಪ್ರಕಟಿಸಿದೆ.[Download Nataraja Service Kannada Songs] 
Pawan Wadeyar
Pawan Wadeyar

‘ನಟರಾಜ ಸರ್ವೀಸ್’ ಚಿತ್ರ ನಾಡಿದ್ದು ಭಾನುವಾರ (ಅಕ್ಟೋಬರ್ 16) ತೆರೆಕಾಣುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದ್ದ ಊಹಾಪೋಹಕ್ಕೆ ಚಿತ್ರತಂಡ ತೆರೆ ಎಳೆದಿದೆ. ಯಾರೋ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ‘ನಟರಾಜ ಸರ್ವೀಸ್’ ಭಾನುವಾರ ತೆರೆಕಾಣುತ್ತಿದೆ ಎಂಬ ಬರಹವಿರುವ ಪೋಸ್ಟರ್‌ಗಳನ್ನು ಲಗತ್ತಿಸಿದ್ದರು. ಆದರೆ ಅದು ಸುಳ್ಳು, ಚಿತ್ರ ಮುಂದಿನ ವಾರ – ಅಂದರೆ, ಅ.21ರಂದು ರಾಜ್ಯದಾದ್ಯಂತ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಪ್ರಕಟಿಸಿದೆ.[Top 10 Kannada Movie Songs Download]

ಅಭಿಮಾನಿಯೊಬ್ಬರ ಫೇಸ್‌ಬುಕ್ ಪುಟದಲ್ಲಿ ಚಿತ್ರ ಬಿಡುಗಡೆಯ ಪೋಸ್ಟರ್ ಕಂಡು ದಂಗಾದ ನಿರ್ದೇಶಕ ಪವನ್ ಒಡೆಯರ್, ಈ ವಿಚಾರವಾಗಿ ಎಲ್ಲರಿಗೂ ಸಮಜಾಯಿಶಿ ಕೊಡುವ ಕೆಲಸದಲ್ಲೇ ಹತ್ತು ಕಿಲೊ ತೂಕವನ್ನೇ ಕಳೆದುಕೊಂಡುಬಿಟ್ಟಿದ್ದಾರಂತೆ.

ತಾನು ಈ ಚಿತ್ರದ ಬಿಡುಗಡೆಗೂ ಮುನ್ನವೇ ಲಾಭವನ್ನೂ ಗಳಿಸಿದ್ದಾಗಿ ನಿರ್ಮಾಪಕ ಎನ್.ಎಸ್. ರಾಜಕುಮಾರ್ ಹೇಳಿದರು. ಇದೇ ಖುಷಿಯಲ್ಲಿ, ಕಾಲ್‌ಶೀಟ್ ಸಿಕ್ಕರೆ ಶರಣ್ ಮತ್ತು ಮಯೂರಿ ಜೋಡಿಯ ಮತ್ತೊಂದು ಸಿನಿಮಾ ನಿರ್ಮಾಣಕ್ಕೂ ಸಿದ್ಧ ಎಂದಿದ್ದಾರೆ ಅವರು. ನಿರ್ಮಾಪಕರ ಖುಷಿ ಮತ್ತು ಆಶ್ವಾಸನೆ ಕಂಡು ನಾಯಕ ಶರಣ್ ಕೂಡ ಸಂಭ್ರಮದಲ್ಲಿದ್ದಾರೆ.

ಇನ್ನು ಅಂತರ್ಜಾಲದಲ್ಲಿ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಯಿಂದಾಗಿ ನಾಯಕಿ ಮಯೂರಿ ಇನ್ನಿಲ್ಲದ ಖುಷಿಯಿಂದ ಉಬ್ಬಿದ್ದಾರೆ. ‘ಇಷ್ಟೊಂದು ಭರ್ಜರಿ ಪ್ರಚಾರದಿಂದಲೇ ಸಿನಿಮಾ ಅರ್ಧ ಗೆದ್ದಿದೆ’ ಎನ್ನುತ್ತಾರೆ ಮಯೂರಿ. ಅವರಿಲ್ಲಿ ಮೃದು ಸ್ವಭಾವದ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.

ಸಂಗೀತ ಸಂಯೋಜಿಸಿರುವ ಅನೂಪ್ ಸೀಳಿನ್ ಈಗಷ್ಟೇ ಚಿತ್ರಕ್ಕೆ ಹಿನ್ನೆಲೆ ಸಂಗೀತವನ್ನೂ ಪೂರೈಸಿದ್ದಾರೆ. ‘‘ಯಾ ಅಲ್ಲಾ’ ಹಾಡಿನಿಂದಾಗಿ ಈ ಚಿತ್ರಕ್ಕೂ ಗೋವಿಂದಾಯ ನಮಃ ಚಿತ್ರದಲ್ಲಿ ಕಂಡಂಥದ್ದೇ ಕ್ರೇಜ್ ಹುಟ್ಟಿದೆ’ ಎಂದರು ನೃತ್ಯ ನಿರ್ದೇಶಕ ಮುರುಳಿ. ಮುನಿರಾಜು ಅವರು ಚಿತ್ರದ ವಿತರಣೆಯ ಹಕ್ಕು ಪಡೆದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಚಿತ್ರದ ಹೊಸ ಟ್ರೈಲರ್ ಬಿಡುಗಡೆ ಮಾಡಲಾಯಿತು.
Fresh Kannada

Fresh Kannada

No comments:

Post a Comment

Google+ Followers

Powered by Blogger.