Breaking News
recent

ಮತ್ತೊಂದು ಜಯ; ಜಿಯೋ ಫ್ರೀ ಕಾಲ್‍ಗೆ ಟ್ರಾಯ್‍ನಿಂದ ಕ್ಲೀನ್ ಚಿಟ್

ನವದೆಹಲಿ: ಜಿಯೋ ತನ್ನ ಯಾವುದೇ ನಿಯಮವನ್ನು ಉಲ್ಲಂಘಿಸಿಲ್ಲ ಎಂದು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ(ಟ್ರಾಯ್) ಹೇಳಿದ್ದು ಉಳಿದ ಟೆಲಿಕಾಂ ಕಂಪೆನಿಗಳಿಗೆ ಹಿನ್ನಡೆಯಾಗಿದೆ. [26 ದಿನದಲ್ಲಿ 1 ಕೋಟಿ 60 ಲಕ್ಷ ಗ್ರಾಹಕರು: ಇದು ‘ಜಿಯೋ’ ರೆಕಾರ್ಡ್!]

ಜಿಯೋ ಉಚಿತ ಕರೆಯನ್ನು ನೀಡುವ ಮೂಲಕ ಟ್ರಾಯ್ ನಿಯಮವನ್ನು ಉಲ್ಲಂಘಿಸುತ್ತಿದೆ ಎಂದು ಏರ್‍ಟೆಲ್, ವೋಡಾಫೋನ್ ಕಂಪೆನಿಗಳು ದೂರು ನೀಡಿದ್ದವು. ಈ ದೂರಿನ ಬಗ್ಗೆ ಟೆಲಿಕಾಂ ಕಂಪೆನಿಗಳಿಗೆ ಪತ್ರದ ಮೂಲಕ ಪ್ರತಿಕ್ರಿಯಿಸಿದ ಟ್ರಾಯ್ ಜಿಯೋದ 90 ದಿನಗಳ ಪ್ರಮೋಷನಲ್ ಆಫರ್ ಡಿಸೆಂಬರ್ 3ಕ್ಕೆ ಮುಕ್ತಾಯಗೊಳ್ಳಲಿದ್ದು, ಇದು ಟ್ರಾಯ್ ನಿಯಮಕ್ಕೆ ಅನುಗಣವಾಗಿದೆ ಎಂದು ಸ್ಟಷ್ಟಪಡಿಸಿದೆ.
Reliance Jio SIM
Reliance Jio SIM

ಟೆಲಿಕಾಂ ಕಂಪೆನಿಗಳು ಒಂದು ನಿಮಿಷದ ಒಂದು ಕರೆಗೆ 14 ಪೈಸೆ ಆಗುತ್ತದೆ. ಆದರೆ ಜಿಯೋ ಈ ನಿಯಮವನ್ನೇ ಉಲ್ಲಂಘಿಸಿ ಕರೆಯನ್ನೇ ಉಚಿತ ನೀಡುತ್ತಿದೆ ಎಂದು ಆರೋಪಿಸಿತ್ತು.

ಟ್ರಾಯ್ ಪ್ರತಿಕ್ರಿಯೆಯ ಬಗ್ಗೆ ಜಿಯೋ ಸ್ಪಷ್ಟನೆ ನೀಡಿದ್ದು, ಟ್ರಾಯ್ ನಿಯಮಕ್ಕೆ ಅನುಗುಣವಾಗಿ ಜಿಯೋ ಪ್ಲಾನ್‍ಗಳಿವೆ. ಸ್ಥಳೀಯ, ಎಸ್‍ಟಿಡಿ, ಮತ್ತು ರಾಷ್ಟ್ರೀಯ ರೋಮಿಂಗ್ ಕರೆಗಳು ಜಿಯೋದಲ್ಲಿ ಉಚಿತವಾಗಿರುತ್ತದೆ ಎಂದು ತಿಳಿಸಿದೆ.

ಜಿಯೋ ಸೇವೆಯನ್ನು ಉದ್ಘಾಟಿಸುವ ಸಂದರ್ಭದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿ, ಜಿಯೋ ಸೇವೆಯಲ್ಲಿ ಡಿಸೆಂಬರ್ 31 ರವರೆಗೆ ಡೇಟಾವನ್ನು ಉಚಿತವಾಗಿ ನೀಡುತ್ತೇವೆ. ಅಷ್ಟೇ ಅಲ್ಲದೇ ಜಿಯೋದಲ್ಲಿ ಜೀವನ ಪರ್ಯಂತ ಕರೆಗೆ ಯಾವುದೇ ದರವನ್ನು ವಿಧಿಸುವುದಿಲ್ಲ. ಡೇಟಾಗೆ ಮಾತ್ರ ಹಣವನ್ನು ಪಾವತಿ ಮಾಡಿದರೆ ಸಾಕು ಎಂದು ಭಾಷಣ ಮಾಡಿದ್ದರು.

ಏನಿದು ವಾಯ್ಸ್ ಓವರ್ ಎಲ್‍ಟಿಇ?
ಇಲ್ಲಿಯವರೆಗೆ ಟೆಲಿಕಾಂ ಕಂಪೆನಿಗಳು ಕರೆ ಮತ್ತು ಡೇಟಾ ಸೇವೆಗಳನ್ನು ಪ್ರತ್ಯೇಕವಾಗಿ ನಿಭಾಯಿಸುತಿತ್ತು. ಆದರೆ ಜಿಯೋ ಈ ಎರಡನ್ನೂ ಒಟ್ಟಿಗೆ ನಿಭಾಯಿಸುತ್ತದೆ. ಇದರಿಂದಾಗಿ ಖರ್ಚು ಕಡಿಮೆ ಆಗುತ್ತದೆ. ಡೇಟಾವನ್ನು ಬಳಸಿಕೊಂಡು ಕರೆ ಮಾಡುವ ತಂತ್ರಜ್ಞಾನವೇ ವಾಯ್ಸ್ ಓವರ್ ಲಾಂಗ್ ಟರ್ಮ್ ಎವಲ್ಯೂಶನ್(ಎಲ್‍ಟಿಇ). ಇದರಲ್ಲಿ ಕರೆಗೆ ಬೇರೆ, ಡೇಟಾಗೆ ಬೇರೆ ಎಂದು ಹಣ ನೀಡಬೇಕಿಲ್ಲ. ಡೇಟಾಗೆ ನೀಡಿದ ಹಣದಲ್ಲೇ ಕರೆಯನ್ನೂ ಉಚಿತವಾಗಿ ಮಾಡಬಹುದು. ವೇಗದ ಇಂಟರ್‍ನೆಟ್ ಇದ್ದರೆ ಮಾತ್ರ ಈ ಸೇವೆಯನ್ನು ಗ್ರಾಹಕರು ಯಶಸ್ವಿಯಾಗಿ ಬಳಸಿಕೊಳ್ಳಬಹುದು. ಭಾರತದಲ್ಲಿ 2ಜಿ, 3ಜಿ ಫೋನ್ ಗಳಿದ್ದರೂ ಎಲ್‍ಟಿಇ ತಂತ್ರಜ್ಞಾನ ಹೊಂದಿರುವ ಫೋನ್ ಗಳ  ಸಂಖ್ಯೆ ಕಡಿಮೆ ಇದೆ. ಈ ಕಾರಣಕ್ಕಾಗಿ ಹಲವು ಫೋನ್‍ಗಳು ಜಿಯೋ ಸಿಮ್ ಸಪೋರ್ಟ್ ಮಾಡುತ್ತಿಲ್ಲ.
Fresh Kannada

Fresh Kannada

No comments:

Post a Comment

Google+ Followers

Powered by Blogger.