Breaking News
recent

ನಾಲ್ಕು ರಾಜ್ಯಗಳಲ್ಲಿ ‘ಏ ದಿಲ್‌ ಹೈ ಮುಷ್ಕಿಲ್‌’ ನಿಷೇಧ

ಪಾಕಿಸ್ತಾನದ ನಟ ಫವಾದ್‌ ಖಾನ್‌ ನಟಿಸಿರುವ ‘ಏ ದಿಲ್ ಹೈ ಮುಷ್ಕಿಲ್’ ಚಿತ್ರದ ಪ್ರದರ್ಶನವನ್ನು ಭಾರತೀಯ ಸಿನಿಮಾ ಮಾಲೀಕರು ಮತ್ತು ಪ್ರದರ್ಶಕರ ಸಂಘಟನೆಯು (ಸಿಒಇಎಐ) ನಿಷೇಧಿಸಿದೆ. [18 ವರ್ಷಗಳ ಹಿಂದೆ ಐಶ್-ರಣಬೀರ್ ಕಪೂರ್ ಹೇಗಿದ್ರು ಗೊತ್ತಾ?] 
ನವದೆಹಲಿ: ಪಾಕಿಸ್ತಾನದ ನಟ ಫವಾದ್‌ ಖಾನ್‌ ನಟಿಸಿರುವ ‘ಏ ದಿಲ್ ಹೈ ಮುಷ್ಕಿಲ್’ ಚಿತ್ರದ ಪ್ರದರ್ಶನವನ್ನು ಭಾರತೀಯ ಸಿನಿಮಾ ಮಾಲೀಕರು ಮತ್ತು ಪ್ರದರ್ಶಕರ ಸಂಘಟನೆಯು (ಸಿಒಇಎಐ) ನಿಷೇಧಿಸಿದೆ.
ae dil hai mushkil hinid movie

ಕರಣ್‌ ಜೋಹರ್‌ ನಿರ್ದೇಶನದ ಈ ಚಿತ್ರವನ್ನು ದೀಪಾವಳಿಯ ಮುನ್ನಾ ದಿನವಾದ ಮುಂದಿನ ಶುಕ್ರವಾರ (ಅ.28) ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿತ್ತು. ಆದರೆ, ಫವಾದ್‌ ಖಾನ್‌ ನಟಿಸಿರುವ ಕಾರಣಕ್ಕೆ ಈಗ ಚಿತ್ರ ಪ್ರದರ್ಶನದ ಮೇಲೆ ನಿಷೇಧ ಹೇರಲಾಗಿದೆ.

‘ಪಾಕಿಸ್ತಾನದ ಕಲಾವಿದರು, ತಂತ್ರಜ್ಞರು, ನಿರ್ದೇಶಕರು, ಸಂಗೀತ ನಿರ್ದೇಶಕರು ಸೇರಿದಂತೆ ಪಾಕಿಸ್ತಾನಿಯರನ್ನು ಒಳಗೊಂಡಿರುವ ಯಾವುದೇ ಚಿತ್ರವನ್ನು ಭಾರತದಲ್ಲಿ ಪ್ರದರ್ಶಿಸದಿರಲು ತೀರ್ಮಾನಿಸಲಾಗಿದೆ. ದೇಶಭಕ್ತಿ ಹಾಗೂ ರಾಷ್ಟ್ರೀಯ ಏಕತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬರಲಾಗಿದೆ’ ಎಂದು ಸಿಒಇಎಐ ಅಧ್ಯಕ್ಷ ನಿತಿನ್‌ ದಾತಾರ್‌ ತಿಳಿಸಿದ್ದಾರೆ.

ಕರ್ನಾಟಕ, ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಈ ಚಿತ್ರದ ಪ್ರದರ್ಶನದ ಮೇಲೆ ನಿಷೇಧ ಹೇರಲಾಗಿದೆ. ಇತರೆ ರಾಜ್ಯಗಳ ಪ್ರದರ್ಶಕರಿಗೂ ಚಿತ್ರ ಪ್ರದರ್ಶಿಸದಂತೆ ತಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.