Breaking News
recent

ದೀಪಾವಳಿಗೆ 'ಮುಕುಂದ ಮುರಾರಿ'ಯ ದರ್ಶನ

ಇದೇ ಮೊದಲ ಬಾರಿಗೆ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಒಟ್ಟಾಗಿ ಅಭಿನಯಿಸಿರೊ 'ಮುಕುಂದ ಮುರಾರಿ' ಚಿತ್ರ ನಿರೀಕ್ಷೆಗಳ ಮಹಾಪೂರವನ್ನೆ ಹುಟ್ಟುಹಾಕಿದೆ. ಯಾಕಂದ್ರೆ ಕನ್ನಡದ ಇಬ್ಬರು ಸೂಪರ್ ಸ್ಟಾರ್ ಗಳು ಒಂದೆ ಪರದೆ ಮೇಲೆ ಕಾಣಿಸಿಕೊಂಡಿರೊದು ಇದಕ್ಕೆ ಮುಖ್ಯ ಕಾರಣ.
ಈ ನಿರೀಕ್ಷೆಗೆ ತಕ್ಕಂತೆ ಈಗಾಗ್ಲೆ ಚಿತ್ರತಂಡದಿಂದ ಹಲವು ಸರ್ಪ್ರೈಸ್ ಕೂಡ ಹೊರ ಬಿದ್ದಿದೆ. ಇದೆನ್ನಲ್ಲ ನೋಡಿ ಚಿತ್ರದ ಬಗ್ಗೆ ಇದ್ದ ಕುತೂಹಲ ಮತ್ತಷ್ಟು ಹೆಚ್ಚಾಗಿರೊದಂತೂ ಸುಳ್ಳಾಲ್ಲ. ಹೀಗಾಗಿ 'ಮುಕುಂದ ಮುರಾರಿ' ಯಾವಾಗ ತೆರೆಮೇಲೆ ಬರುತ್ತೆ, ಆಡಿಯೋ ಯಾವಾಗ ರಿಲೀಸ್ ಆಗುತ್ತೆ ಅಂತ ಸ್ಯಾಂಡಲ್ ವುಡ್ ಭಕ್ತರು ಕಾದು ಕುಂತಿದ್ದಾರೆ.
ಈ ಎಲ್ಲಾ ಕುತೂಹಲಗಳಿಗೆ ಈಗ ತೆರೆಬಿದ್ದಿದ್ದು, 'ಮುಕುಂದ ಮುರಾರಿ' ಟೀಮ್ ನಿಂದ ಎಕ್ಸ್ ಕ್ಲೂಸೀವ್ ಸುದ್ದಿ ಹೊರಬಿದ್ದಿದೆ. ಹೌದು, ಚಿತ್ರದ ರಿಲೀಸ್ ಡೇಟ್ ಜೊತೆಗೆ ಕೆಲವು ಸ್ಪೆಷಾಲಿಟಿಗಳನ್ನ ಚಿತ್ರತಂಡ ರಿವಿಲ್ ಮಾಡಿದೆ. ಹಾಗಾದ್ರೆ, 'ಮುಕುಂದ ಮುರಾರಿಯ' ದರ್ಶನ ಯಾವಾಗ ಅಂತಾ ಇಲ್ಲಿದೆ ನೋಡಿ.[Upcoming Mukunda Murari Kannada Movie Trailer]

1. ಫಿಕ್ಸ್ ಆಯ್ತು ಆಡಿಯೋ ರಿಲೀಸ್ ಗೆ ಮುಹೂರ್ತ
ಚಿತ್ರದ ಆಡಿಯೋ ರಿಲೀಸ್ ಗೆ ಎಲ್ಲಾ ಸಿದ್ದತೆಗಳನ್ನ ಮಾಡಿಕೊಂಡಿದ್ದು ಇನ್ನೊಂದು ವಾರದಲ್ಲಿ 'ಮುಕುಂದ ಮುರಾರಿ' ಚಿತ್ರದ ಆಡಿಯೋ ಬಿಡುಗಡೆ ಮಾಡಲಿದ್ದಾರಂತೆ. ಚಿತ್ರಕ್ಕೆ ಅರ್ಜುನ ಜನ್ಯ ಸಂಗೀತ ಸಂಯೋಜನೆ ಮಾಡಿದ್ದು, 'ಮುಕುಂದ ಮುರಾರಿ'ಯ ಗಾನಸುಧೆ ಹೇಗಿರುತ್ತೆ ಅನ್ನೊ ಕುತೂಹಲ ಕಾಡುತ್ತಿದೆ.

2. ಇಬ್ಬರು ಸಂಗೀತ ಮಾಂತ್ರಿಕರ ಸಮ್ಮಿಲನ
ಈ ಚಿತ್ರದ ವಿಶೇಷ ಏನಪ್ಪಾ ಅಂದ್ರೆ ಒಬ್ಬ ಸಂಗೀತ ನಿರ್ದೇಶಕನ ಹಾಡು ಮತ್ತೊಬ್ಬ ಸಂಗೀತ ನಿರ್ದೇಶಕ ಖರೀದಿ ಮಾಡ್ತಿದ್ದಾರೆ. ಹೌದು, ಅರ್ಜುನ ಜನ್ಯ ಸಂಗೀತದ ಹಾಡುಗಳನ್ನ ಹರೀಕೃಷ್ಣ ಅವರ 'ಡಿ ಬೀಟ್ಸ್' ಆಡಿಯೋ ಸಂಸ್ಥೆಯ ಮೂಲಕ ಹೊರ ತರುತ್ತಿದ್ದಾರೆ. ಇದು ಕನ್ನಡ ಚಿತ್ರರಂಗದಲ್ಲಿ ಉತ್ತಮ ಬೆಳವಣಿಗೆಯಾಗಿದೆ.

3. ಸುದೀಪ್ - ಉಪೇಂದ್ರ ಜುಗಲ್ ಬಂದಿ
ನಂದಕೀಶೊರ್ ನಿರ್ದೇಶನದ ಈ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಅವರು ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಇದ್ರಿಂದ ಸಾಮಾನ್ಯವಾಗಿ ಸಿನಿ ಅಭಿಮಾನಿಗಳಲ್ಲಿ ಕಾತುರ, ಕುತೂಹಲ ಹೆಚ್ಚಾಗಿದ್ದು, ಒಂದ್ಕೆಡೆ ಉಪ್ಪಿ ಫ್ಯಾನ್ಸ್, ಮತ್ತೊಂದೆಡೆ ಕಿಚ್ಚ ಫ್ಯಾನ್ಸ್ 'ಮುಕುಂದ ಮುರಾರಿ'ಯ ಜಪ ಮಾಡ್ತಿದ್ದಾರೆ.

4. ಕೃಷ್ಣನ ಅವತಾರದಲ್ಲಿ ಕಿಚ್ಚ
ಈ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಶ್ರೀಕೃಷ್ಣನ ಅವತಾರದಲ್ಲಿ ಪ್ರತ್ಯಕ್ಚವಾಗಿದ್ದಾರೆ. ಈಗಾಗಲೇ ಕಿಚ್ಚನ ಕೃಷ್ಣ ಪರಮಾತ್ಮನ ಅವತಾರದ ಪೋಸ್ಟರ್ ಗಳು ರಿಲೀಸ್ ಆಗಿದ್ದು, ಎಲ್ಲರ ಮೆಚ್ಚುಗೆ ಗಳಿಸಿಕೊಂಡಿದೆ.

5. ಗೋಪಿಕೆಯರಾಗಿ ಭಾವನ, ರಚಿತಾ ರಾಮ್
ಶ್ರೀ ಕೃಷ್ಣ ಪರಮಾತ್ಮನಾಗಿ ಕಾಣಿಸಿಕೊಂಡಿರೊ ಕಿಚ್ಚ ಸುದೀಪ್ ಗೆ ಚಿತ್ರದಲ್ಲಿ ವಿಶೇಷ ಹಾಡೊಂದಿದೆ. ಈ ಹಾಡಿನಲ್ಲಿ ನಟಿ ಭಾವನ ಹಾಗೂ ಬುಲ್ ಬುಲ್ ಬೆಡಗಿ ರಚಿತಾ ರಾಮ್ ಗೋಪಿಕೆಯರಾಗಿ ಕಿಚ್ಚನ ಜೊತೆ ಹೆಜ್ಜೆ ಹಾಕಿದ್ದಾರೆ.

6. 'ಓ ಮೈ ಗಾಡ್' ರಿಮೇಕ್
ಅಂದಾಗೆ, ಕನ್ನಡದ 'ಮುಕುಂದ ಮುರಾರಿ' ಹಿಂದಿಯ 'ಓ ಮೈ ಗಾಡ್' ಚಿತ್ರದ ರೀಮೇಕ್. ನಟ ಅಕ್ಷಯ್ ಕುಮಾರ್ ಮತ್ತು ಪರೇಶ್ ರಾವಲ್ ಅವರು ಕಾಣಿಸಿಕೊಂಡಿದ್ದ ಈ ಚಿತ್ರ, ಆಸ್ತಿಕ ಮತ್ತು ನಾಸ್ತಿಕನ ನಡುವೆ ನಡೆಯುವ ಕಥೆ. ಈ ಚಿತ್ರ ಈಗ ಕನ್ನಡದಲ್ಲಿ 'ಮುಕುಂದ ಮುರಾರಿ'ಯಾಗಿದ್ದು, ಅಕ್ಷಯ್ ಕುಮಾರ್ ಪಾತ್ರದಲ್ಲಿ ಕಿಚ್ಚ, ಪರೇಶ್ ರಾವಲ್ ಪಾತ್ರದಲ್ಲಿ ಉಪೇಂದ್ರ ಬಣ್ಣ ಹಚ್ಚಿದ್ದಾರೆ.

7. ದೀಪಾವಳಿಗೆ 'ಮುಕುಂದ ಮುರಾರಿ'
ಸದ್ಯದಲ್ಲೇ ಆಡಿಯೋ ರಿಲೀಸ್ ಮಾಡಲಿರೊ 'ಮುಕುಂದ ಮುರಾರಿ' ದೀಪಾವಳಿ ಹಬ್ಬದ ಪ್ರಯುಕ್ತ ತೆರೆ ಮೇಲೆ ಬರಲಿದೆ. ಹೌದು, ಅಕ್ಟೋಬರ್ 30ರಂದು ದೀಪಾವಳಿ ಹಬ್ಬವಿದ್ದು, ಎರಡು ದಿನ ಮುಂಚೆ ಅಂದ್ರೆ ಅಕ್ಟೋಬರ್ 28 ರಂದು ಚಿತ್ರಮಂದಿರಕ್ಕೆ ಬರ್ತಿದೆ.

8. ಕಿಚ್ಚ-ಉಪ್ಪಿ ಫ್ಯಾನ್ಸ್ ಗೆ ಪಟಾಕಿ ಹಬ್ಬ ಜೋರು
ಜಯಶ್ರೀ ದೇವಿ ಮತ್ತು ಎಂ.ಎನ್ ಕುಮಾರ್ ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಉಪೇಂದ್ರ ಜೊತೆ ನಿಖಿತಾ ತುಕ್ರಾಲ್ ಡ್ಯುಯೆಟ್ ಹಾಡುತ್ತಿದ್ದು, ನಟ ರವಿಶಂಕರ್ ಲೀಲಾನಂದ ಸ್ವಾಮೀಜಿಯಾಗಿ ಮಿಂಚಿದ್ದಾರೆ. ಹೀಗಾಗಿ ಈ ಬಾರಿಯ ದೀಪಾವಳಿ ಈ ಇಬ್ಬರು ಸೂಪರ್ ಸ್ಟಾರ್ ಅಭಿಮಾನಿಗಳಿಗೂ ಸಂಭ್ರಮ ಜೋರಾಗಿರಲಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.