Breaking News
recent

ಕೃಷ್ಣಲೀಲಾ ಮಯೂರಿ ಈಗ 'ಎಂಟಿವಿ ಸುಬ್ಬಲಕ್ಷ್ಮಿ' !

'ಕೃಷ್ಣಲೀಲಾ' ಚಿತ್ರದ ಮೂಲಕ ಪಡ್ಡೆ ಹುಡುಗರ ಹೃದಯದಲ್ಲಿ ಕಿಚ್ಚು ಹಚ್ಚಿಸಿದ ನಟಿ ಮಯೂರಿ ಸದ್ಯ ಸ್ಯಾಂಡಲ್ ವುಡ್‌ನ ಸ್ಟಾರ್‌ ನಟಿ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದಲ್ಲಿ ಮೂಡಿಬಂದ 'ಇಷ್ಟಕಾಮ್ಯ' ಚಿತ್ರದಲ್ಲಿ ಮುದ್ದಾಗಿ ನಟಿಸಿ ಯಶಸ್ಸು ಕಂಡ ಈಕೆ, ಮಾಡಿದ 2 ಚಿತ್ರಗಳಿಂದಲೆ ಅಭಿಮಾನ ಬಳಗವನ್ನ ಹೊಂದಿದ್ದಾರೆ.
mtv subbhalakshmi kannada songs download
ಸದ್ಯ, ಪವನ್‌ ಒಡೆಯರ್‌ ನಿರ್ದೇಶನ ಹಾಗೂ ಶರಣ್ ಅಭಿನಯದ 'ನಟರಾಜ ಸರ್ವೀಸ್' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿರೊ ಮಯೂರಿ, ಮತ್ತೊಂದು ಗೆಲುವಿನ ವಿಶ್ವಾಸದಲ್ಲಿದ್ದಾರೆ. ಇದೆ ತಿಂಗಳು 20ರಂದು ನಟರಾಜ ಸರ್ವೀಸ್ ಪ್ರೇಕ್ಷಕರೆದುರು ಬರಲಿದ್ದು, ಈ ಚಿತ್ರದ ಬಿಡುಗಡೆಗೂ ಮುಂಚೆನೆ ಸಾಲು ಸಾಲು ಪ್ರಾಜೆಕ್ಟ್‌ಗಳು ಮಯೂರಿ ಮನೆ ಬಾಗಿಲಿಗೆ ಬರ್ತಿವೆ.[ಸೆನ್ಸಾರ್ ಪಾಸ್‌ ಆದ ನಟರಾಜ' ಅಕ್ಟೋಬರ್‌ 20ಕ್ಕೆ ಬರ್ತಾವ್ನೆ !]
'ನಟರಾಜ ಸರ್ವೀಸ್' ಚಿತ್ರದ ನಂತರ 'ಗಣಪ' ಖ್ಯಾತಿಯ ಸಂತೋಷ್‌ ಅಭಿನಯದ 'ಕರಿಯ-2' ಚಿತ್ರದಲ್ಲಿ ಮಯೂರಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇದ್ರ ಬೆನ್ನಲ್ಲೆ ಇದೀಗ ಮತ್ತೊಂದು ಹೊಸ ಚಿತ್ರಕ್ಕೆ ಮಯೂರಿ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದು, ಆ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ....

1. 'ಎಂಟಿವಿ ಸುಬ್ಬುಲಕ್ಷ್ಮಿ' ಆದ ಮಯೂರಿ 
ಕೃಷ್ಣಲೀಲಾ ಖ್ಯಾತಿಯ ಮಯೂರಿ ಈಗ 'ಎಂಟಿವಿ ಸುಬ್ಬುಲಕ್ಷ್ಮಿ' ಆಗಿದ್ದಾರೆ. ಹೌದು, ಮಯೂರಿ ಅಭಿನಯಿಸಲಿರೊ ಹೊಸ ಚಿತ್ರಕ್ಕೆ 'ಎಂಟಿವಿ ಸುಬ್ಬುಲಕ್ಷ್ಮಿಗೆ' ಅಂತಾ ಟೈಟಲ್ ಇಟ್ಟಿದ್ದು, ಇತ್ತೀಚಿಗಷ್ಟೆ ಸಿನಿಮಾ ಸೆಟ್ಟೇರಿದೆ.

2. ಫಸ್ಟ್‌ ರ್ಯಾಂಕ್‌ ರಾಜು ಜೊತೆ ಮಯೂರಿ
'ಎಂಟಿವಿ ಸುಬ್ಬುಲಕ್ಷ್ಮಿಗೆ' ಚಿತ್ರದಲ್ಲಿ ಫಸ್ಟ್‌ ರ್ಯಾಂಕ್‌ ರಾಜು ಖ್ಯಾತಿಯ ಗುರುನಂದನ್ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದು, ಸುಬ್ಬುಲಕ್ಷ್ಮಿಗೆ ಜೋಡಿಯಾಗಿದ್ದಾರೆ. ಸದ್ಯ, ಸ್ಮೈಲ್ ಪ್ಲೀಸ್‌ ಚಿತ್ರದಲ್ಲಿ ತೊಡಗಿಕೊಂಡಿರೊ ಗುರುನಂದನ್, ಅದ್ರ ಬೆನ್ನಲ್ಲೆ ಸುಬ್ಬುಲಕ್ಷ್ಮಿಗೆ ಓಕೆ ಅಂದಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಮಯೂರಿ ಹಾಗೂ ಗುರುನಂದನ್ ಚಿತ್ರವೊಂದರಲ್ಲಿ ಒಟ್ಟಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ.

3. ಶಂಕರ್‌ ಚೊಚ್ಚಲ ಚಿತ್ರ 
'ಎಂಟಿವಿ ಸುಬ್ಬುಲಕ್ಷ್ಮಿಗೆ' ಚಿತ್ರಕ್ಕೆ ಆಕ್ಞನ್ ಕಟ್‌ ಹೇಳ್ತಿರೊದು ನಿರ್ದೇಶಕ ಶಂಕರ್‌. ಶಂಕರ್‌ಗೆ ಇದು ಮೊದಲ ಸಿನಿಮಾ. ಈ ಹಿಂದೆ ಪವನ್‌ ಒಡೆಯರ್‌ ನಿರ್ದೇಶನದ ರಣವಿಕ್ರಮ, ಜೆಸ್ಸಿ, ನಟರಾಜ್ ಸರ್ವೀಸ್ ಚಿತ್ರಗಳಲ್ಲಿ ಸಹ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿರುವ ಅನುಭವವಿದೆ. ಈಗ 'ಎಂಟಿವಿ ಸುಬ್ಬುಲಕ್ಷ್ಮಿಗೆ' ಕಥೆ-ಚಿತ್ರಕಥೆ ಬರೆದು ಸ್ವತಂತ್ರವಾಗಿ ನಿರ್ದೇಶನ ಮಾಡಲು ಮುಂದಾಗಿದ್ದಾರೆ.

4. ಪಕ್ಕಾ ಕಾಮಿಡಿ ಎಂಟರ್‌ಟೈನರ್
'ಎಂಟಿವಿ ಸುಬ್ಬುಲಕ್ಷ್ಮಿಗೆ' ಚಿತ್ರದ ಹೆಸ್ರೆ ಹೇಳುವಂತೆ ಇದೊಂದು ಕಾಮಿಡಿ ಎಂಟರ್‌ಟೈನರ್. ಪ್ರತಿನಿತ್ಯ ಜನಸಾಮಾನ್ಯರ ಮಧ್ಯೆ ನಡೆಯುವಂತಹ ಘಟನೆಗಳನ್ನಿಟ್ಟು ಮನೋರಂಜನಾತ್ಮಕವಾಗಿ ಕಥೆ ಮಾಡಲಾಗಿದೆಯಂತೆ.

5. 'ಉಪೇಂದ್ರ' ಚಿತ್ರದಲ್ಲಿತ್ತು 'ಎಂಟಿವಿ ಸುಬ್ಬುಲಕ್ಷ್ಮಿಗೆ' ಹಾಡು
ಅಂದಾಗೆ, ಶಂಕರ್‌ ನಿರ್ದೇಶನ ಮಾಡಲಿರೊ 'ಎಂಟಿವಿ ಸುಬ್ಬುಲಕ್ಷ್ಮಿಗೆ' ಚಿತ್ರದ ಶೀರ್ಷಿಕೆ, ಈ ಹಿಂದೆ 1999ರಲ್ಲಿ ರಿಯಲ್‌ಸ್ಟಾರ್‌ ಉಪೇಂದ್ರ ನಟಿಸಿದ್ದ 'ಉಪೇಂದ್ರ' ಚಿತ್ರದ ಹಾಡಿನ ಸಾಲು. ಉಪೇಂದ್ರ ಸಾಹಿತ್ಯ, ಗುರು ಕಿರಣ್ ಸಂಗೀತವಿದ್ದ ಈ ಹಾಡು ಕನ್ನಡದ ಸೂಪರ್‌ ಹಿಟ್‌ ಸಾಂಗ್ ಎನಿಸಿಕೊಂಡಿದೆ. ಈಗ ಈ ಹಾಡಿನ ಹೆಸ್ರಿನಲ್ಲಿ ಸಿನಿಮಾ ಬರ್ತಿದ್ದು, ನಿರೀಕ್ಷೆ ಹುಟ್ಟುಹಾಕಿದೆ.

6. ಎಂಟಿವಿ ಸುಬ್ಬುಲಕ್ಷ್ಮಿ ಯಾವಾಗ ಶುರು ?
ಸರಳವಾಗಿ ಚಿತ್ರದ ಮುಹೂರ್ತ ಮಾಡಿಕೊಂಡಿರೊ 'ಎಂಟಿವಿ ಸುಬ್ಬುಲಕ್ಷ್ಮಿಗೆ' ಇದೇ ತಿಂಗಳಿಂದ ಚಿತ್ರೀಕರಣ ಶುರು ಮಾಡ್ತಿದೆ. ಮೊದಲ ಹಂತವಾಗಿ ಅಕ್ಟೋಬರ್‌ 12ರಿಂದ ಬೆಂಗಳೂರಿನ ಸುತ್ತಾ ಮುತ್ತಾ ಶೂಟಿಂಗ್ ಮಾಡಲಿದೆ. ಇನ್ನೂ ಚಿತ್ರಕ್ಕೆ ಅನೂಪ್‌ ಸೀಳಿನ್ ಅವರ ಸಂಗೀತವಿದ್ದು, ಅರುಳ್ ಕೆ ಸೋಮಸುಂದರ್‌ ಅವರ ಛಾಯಗ್ರಹಣವಿರಲಿದೆ
Fresh Kannada

Fresh Kannada

No comments:

Post a Comment

Google+ Followers

Powered by Blogger.