Breaking News
recent

26 ದಿನದಲ್ಲಿ 1 ಕೋಟಿ 60 ಲಕ್ಷ ಗ್ರಾಹಕರು: ಇದು ‘ಜಿಯೋ’ ರೆಕಾರ್ಡ್!

ಮುಂಬೈ: ಕಡಿಮೆ ಹಣದಲ್ಲಿ ಅತಿ ವೇಗದ ಇಂಟರ್‍ನೆಟ್ ಸೇವೆ ಎಂಬ ಖ್ಯಾತಿಗೆ ಪಾತ್ರವಾಗಿರುವ ಜಿಯೋ ದಾಖಲೆಯ ಪುಟಕ್ಕೆ ಸೇರ್ಪಡೆಯಾಗಿದೆ. `ಜಿಯೋ ವೆಲ್‍ಕಮ್ ಆಫರ್’ಗೆ 26 ದಿನಗಳಲ್ಲಿ 1 ಕೋಟಿ 60 ಲಕ್ಷ ಚಂದಾದಾರರನ್ನು ಹೊಂದಿರುವುದಾಗಿ ರಿಲಯನ್ಸ್ ಹೇಳಿದೆ. [ಮತ್ತೊಂದು ಜಯ; ಜಿಯೋ ಫ್ರೀ ಕಾಲ್‍ಗೆ ಟ್ರಾಯ್‍ನಿಂದ ಕ್ಲೀನ್ ಚಿಟ್]
Reliance Jio SIM
Reliance Jio SIM

16 ಮಿಲಿಯನ್‍ಗೂ ಹೆಚ್ಚು ಚಂದಾದಾರನ್ನು ಹೊಂದುವ ಮೂಲಕ ತಾನು ವಿಶ್ವದಾಖಲೆ ಸೃಷ್ಟಿಸಿರುವುದಾಗಿ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ (ಜಿಯೋ)ಇಂದು ಘೋಷಿಸಿದೆ. ಜಿಯೋ ಈ ಪ್ರಗತಿಯನ್ನು ವಿಶ್ವದಲ್ಲೇ ಯಾವುದೇ ಟೆಲಿಕಾಂ ಆಪರೇಟರ್ ಅಥವಾ ಫೇಸ್‍ಬುಕ್, ವಾಟ್ಸಪ್ ಮತ್ತು ಸ್ಕೈಪ್‍ನಂತಹ ಸ್ಟಾರ್ಟ್ ಅಪ್‍ಗಿಂತಲೂ ವೇಗವಾಗಿ ಸಾಧಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಡಿ. ಅಂಬಾನಿ, ಜಿಯೋ ವೆಲ್‍ಕಮ್ ಆಫರ್‍ಗೆ ಭಾರತದಾದ್ಯಂತ ವ್ಯಕ್ತವಾಗಿರುವ ಅಭೂತಪೂರ್ವ ಪ್ರತಿಕ್ರಿಯೆ ನೋಡಿ ಸಂತೋಷವಾಗಿದೆ. ಇದಕ್ಕಾಗಿ ನಾವು ಗ್ರಾಹಕರಿಗೆ ಆಭಾರಿಗಳಾಗಿದ್ದೇವೆ. ಪ್ರತಿಯೊಬ್ಬ ಭಾರತೀಯರನ್ನು ಡಾಟಾದ ಶಕ್ತಿಯೊಂದಿಗೆ ಸಶಕ್ತಗೊಳಿಸಲು ಜಿಯೋ ನಿರ್ಮಿಸಲಾಗಿದೆ. ಇದನ್ನು ಜನರು ಗುರುತಿಸಿರುವುದಕ್ಕೆ ಹಾಗೂ ನಮ್ಮ ಸೇವೆಗಳನ್ನು ಪೂರ್ತಿಯಾಗಿ ಉಪಯೋಗಿಸುತ್ತಿರುವುದರಿಂದ ನಮಗೆ ಸಂತೋಷವಾಗಿದೆ, ನಮ್ಮ ಗ್ರಾಹಕರ ನಿರೀಕ್ಷೆಯನ್ನು ಮೀರಲು ಪ್ರತಿದಿನವೂ ಬದ್ಧರಾಗಿರುತ್ತೇವೆ ಎಂದು ಹೇಳಿದರು.

ಜಿಯೋ ಆಧಾರ್-ಆಧಾರಿತ ಕಾಗದ ರಹಿತ ಜಿಯೋ ಸಿಮ್ ಆಕ್ಟಿವೇಶನ್ ವ್ಯವಸ್ಥೆಯನ್ನು 3,100 ನಗರಗಳು ಹಾಗೂ ಪಟ್ಟಣಗಳಾದ್ಯಂತ ಪರಿಚಯಿಸಿದೆ. ಇದರಿಂದಾಗಿ ಗ್ರಾಹಕರು ಕೇವಲ ತಮ್ಮ ಆಧಾರ್ ನಂಬರ್‍ನೊಂದಿಗೆ ಸಿಮ್ ಆಕ್ಟಿವೇಶನ್ ಪ್ರಕ್ರಿಯೆಯನ್ನು ನಿಮಿಷಗಳಲ್ಲಿ ಪೂರ್ಣಗೊಳಿಸಲು ಸಾಧ್ಯವಾಗಿದೆ. ಈ ಪ್ರಕ್ರಿಯೆಯನ್ನು ದೇಶಾದ್ಯಂತ ವಿಸ್ತರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಜಿಯೋ ಭಾರತವನ್ನು ವಿಶ್ವದಲ್ಲೇ ಅತ್ಯಧಿಕ ಗುಣಮಟ್ಟದ, ಅತ್ಯಂತ ಕೈಗೆಟಕುವ ಡಾಟಾ ಮಾರುಕಟ್ಟೆಯನ್ನಾಗಿಸಿದೆ. ಈ ಮೂಲಕ ಪ್ರತಿಯೊಬ್ಬ ಭಾರತೀಯ ಡಾಟಾಗಿರಿ ನಡೆಸಬಹುದು ಎಂದು ಅಂಬಾನಿ ಅವರು ಜಿಯೋ ಲೋಕಾರ್ಪಣೆ ವೇಳೆ ಹೇಳಿದ್ದರು.
Fresh Kannada

Fresh Kannada

No comments:

Post a Comment

Google+ Followers

Powered by Blogger.