Breaking News
recent

ಕಿಚ್ಚನ ರಾಕ್ ಸ್ಟಾರ್ಸ್ ವಿರುದ್ಧ ಮೈಸೂರು ಹುಡುಗರ ಆರ್ಭಟ

ಹುಬ್ಬಳ್ಳಿ, ಸೆ. 18: ಕರ್ನಾಟಕ ಪ್ರೀಮಿಯರ್ ಲೀಗ್ (ಕೆ ಪಿಎಲ್ ) 5ನೇ ಆವೃತ್ತಿಯ ಎರಡನೇ ದಿನದ ಪಂದ್ಯದಲ್ಲಿ ಕಿಚ್ಚ ಸುದೀಪ ನಾಯಕತ್ವದ ಸಿನಿಮಾ ನಟರನ್ನುಳ್ಳ ರಾಕ್ ಸ್ಟಾರ್ಸ್ ತಂಡದ ವಿರುದ್ಧ ಮೈಸೂರು ವಾರಿಯರ್ಸ್ ತಂಡ ಭರ್ಜರಿ ಆಟ ಪ್ರದರ್ಶಿಸಿದೆ. ರಾಕ್ ಸ್ಟಾರ್ಸ್ ತಂಡಕ್ಕೆ ಮೈಸೂರು ತಂಡ 220 ರನ್ ಗಳ ಟಾರ್ಗೆಟ್ ನೀಡಿದೆ.
kpl sudeep and pandey

ಆರಂಭಿಕ ಆಟಗಾರರಾದ ರಾಜು ಭಟ್ಕಳ ಹಾಗೂ ಅರ್ಜುನ್ ಹೊಯ್ಸಳ ಅವರ ಉತ್ತಮ ಆರಂಭದ ಅಡಿಪಾಯದ ಮೇಲೆ ಮೈಸೂರು ಬೃಹತ್ ಮೊತ್ತ(219/4, 20 ಓವರ್ಸ್) ಕಲೆ ಹಾಕಿದೆ. ಅರ್ಜುನ್ ಹೊಯ್ಸಳ 62 ಎಸೆತಗಳಲ್ಲಿ 89 ರನ್ ಗಳಿಸಿ ಔಟಾಗದೆ ಉಳಿದರು.
ಪಂದ್ಯದ 13ನೇ ಓವರ್ ತನಕ ರಾಜು ಭಟ್ಕಳ ಹಾಗೂ ಅರ್ಜುನ್ ಅವರು ಮುರಿಯದ ಜೊತೆಯಾಟ ಪ್ರದರ್ಶಿಸಿದರು. ರಾಜು 46ರನ್ ಗಳಿಸಿ ಔಟಾದರು. ನಂತರ ಬಂದ ಕೆ ಗೌತಮ್ ಅವರು 13 ಎಸೆತಗಳಲ್ಲಿ 33ರನ್ ಗಳಿಸಿ ಎನ್ ಸಿ ಅಯ್ಯಪ್ಪ ಅವರಿಗೆ ವಿಕೆಟ್ ಒಪ್ಪಿಸಿದರು. ಗೌತಮ್ ಔಟಾದಾಗ ತಂಡದ ಮೊತ್ತ ಸ್ಕೋರ್ 179/2.


ಜೊನಾಥನ್ ಅವರು ಕ್ರೀಸ್ ಗೆ ಬಂದ ಕೂಡಲೇ ಒಂದು ರನ್ ಕದಿಯಲು ಯತ್ನಿಸಿ ಔಟಾದರು. ವಿಕೆಟ್ ಕೀಪರ್ ಕಿಚ್ಚ ಸುದೀಪ್ ಅವರು ರನ್ ಔಟ್ ಮಾಡಿದರು. 8 ಎಸೆತಗಳಲ್ಲಿ 27ರನ್ ಚೆಚ್ಚಿ ಅನಿರುದ್ಧ್ ರನ್ ಗತಿ ಹೆಚ್ಚಿಸಿದರು.
ಸುದೀಪ್ ಗೆ ಪೆಟ್ಟು: ಇನ್ನೊಂದೆಡೆ ಅರ್ಜುನ್ ಹೊಯ್ಸಳ ಅವರು ಸಿಕ್ಸ್ ಮೇಲೆ ಸಿಕ್ಸ್ ಸಿಡಿಸುತ್ತಾ ತಂಡದ ಮೊತ್ತ ಏರಿಸಿದರು. ರಾಕ್ ಸ್ಟಾರ್ಸ್ ತಂಡದ ವೇಗಿ ಅಕ್ಷಯ್ ಅವರ ಎಸೆತವನ್ನು ಹಿಡಿಯಲು ಯತ್ನಿಸಿದ ವಿಫಲರಾದ ಸುದೀಪ್ ಅವರ ಎದೆಗೆ ಚೆಂಡು ಬಡಿದು ಪೆಟ್ಟಾಯಿತು. ಆದರೆ, ತಕ್ಷಣವೇ ಅವರನ್ನು ಪೆವಿಲಿಯನ್ ಗೆ ಕರೆಸಿಕೊಂಡು ಚಿಕಿತ್ಸೆ ನೀಡಲಾಯಿತು.
Fresh Kannada

Fresh Kannada

No comments:

Post a Comment

Google+ Followers

Powered by Blogger.