Breaking News
recent

ಸ್ಯಾಂಡಲ್ ವುಡ್ ನಲ್ಲಿ 'ಲೈಂಗಿಕ ಕಿರುಕುಳ' ಬಗ್ಗೆ ಕವಿತಾ ಲಂಕೇಶ್ ಪ್ರತಿಕ್ರಿಯೆ

ಸಿನಿಮಾಗಳಲ್ಲಿ ನಾಯಕಿ ಪಾತ್ರ ಕೊಡಿಸುತ್ತೇನೆ, ನನ್ನ ಜೊತೆ ಬಾ, ನನ್ನ ಜೊತೆ 'ಕಾಂಪ್ರೊಮೈಸ್' ಮಾಡ್ಕೋ, ಹೀಗೆ ಹಲವು ಸಮಸ್ಯೆಗಳು, ಆಗಷ್ಟೇ ಸಿನಿಮಾ ಜಗತ್ತಿಗೆ ಕಾಲಿಡಲು ಸಜ್ಜಾಗುತ್ತಿರುವ ಹೊಸ ಪ್ರತಿಭೆಗಳಿಗೆ ಎದುರಾಗುತ್ತದೆ.
ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡು ತಮ್ಮ ಪ್ರತಿಭೆಯನ್ನು ಅನಾವರಣ ಮಾಡಬೇಕು, ಎಲ್ಲರೆದುರು ಕಲರ್ ಫುಲ್ ಆಗಿ ಮಿಂಚಬೇಕು ಎಂಬಿತ್ಯಾದಿ ಬಣ್ಣ-ಬಣ್ಣದ ಕನಸುಗಳನ್ನು ಕಟ್ಟಿಕೊಂಡು ಬರುವ ಜಾಣೆಯರಿಗೆ, ಸಿನಿಮಾ ಎಂಬ ಕಲರ್ ಫುಲ್ ದುನಿಯಾದಲ್ಲಿ ಶಾಕಿಂಗ್ ಕಾದಿರುತ್ತದೆ.
kavitha lankesh
ಲೈಂಗಿಕ ಕಿರುಕುಳ ಅನ್ನೋ ಪೆಡಂಭೂತ ಬರೀ ಬಾಲಿವುಡ್ ನಲ್ಲಿ ಮಾತ್ರವಲ್ಲದೇ, ಇದೀಗ ಸ್ಯಾಂಡಲ್ ವುಡ್ ನಲ್ಲಿ ಕಡಿಮೆ ಏನು ಇಲ್ಲ. ಈ ಬಗ್ಗೆ ಮೊನ್ನೆ-ಮೊನ್ನೆ 'ಗೋಲಿಸೋಡ' ಚಿತ್ರದ ನಾಯಕಿ ಐಶ್ವರ್ಯ ಜೈನ್ ಬಾಯಿ ಬಿಟ್ಟಿದ್ದರು.
ಇದೀಗ ಈ ಬಗ್ಗೆ ಖ್ಯಾತ ನಿರ್ದೇಶಕಿ ಕವಿತಾ ಲಂಕೇಶ್ ಅವರು ತಮ್ಮ ಫೇಸ್ ಬುಕ್ಕಿನಲ್ಲಿ ಉದ್ದಕ್ಕೆ ಬರೆದುಕೊಂಡಿದ್ದಾರೆ. ಜೊತೆಗೆ ಈ ಬಗ್ಗೆ ನಿರ್ದೇಶಕ ಬಿ.ಎಸ್ ಲಿಂಗದೇವರು ಕೂಡ ಚರ್ಚಿಸಿದ್ದಾರೆ. ಹೊಸ ಪ್ರತಿಭೆಯೊಂದು ಅವಕಾಶ ಕೇಳಿ, ಕ್ಯಾಸ್ಟಿಂಗ್ ಕೌಚ್ ಬಗ್ಗೆ ತಮಗಾದ ಅಸಹ್ಯ ಅನುಭವನ್ನು ಕವಿತಾ ಅವರ ಜೊತೆ ಹಂಚಿಕೊಂಡಿದ್ದಾರೆ. ಮುಂದೆ ಓದಿ....

ಅನಾಮಿಕ ಪ್ರತಿಭೆ ಬರೆದ ಪತ್ರ
''ಹಲೋ....ನನಗೆ ಕೆಲವು ವಿಚಾರಗಳ ಬಗ್ಗೆ ತಿಳಿಯಬೇಕಾಗಿತ್ತು. ನಾನೊಬ್ಬಳು ಮಾಡೆಲ್, ಬೆಂಗಳೂರಿಗೂ ಹೊರಗಿನವಳು. ನಾನು ಕನ್ನಡ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ತುಂಬಾ ಪ್ರಯತ್ನಪಟ್ಟೆ. ಆದರೆ ಎಲ್ಲರೂ ನನ್ನ ಬಳಿ, ಕ್ಯಾಸ್ಟಿಂಗ್ ಕೌಚ್ (ಲೈಗಿಂಕವಾಗಿ ಬಳಕೆ ಮಾಡಿಕೊಳ್ಳೋದು) ಬಗ್ಗೆ 'ಕಾಂಪ್ರೊಮೈಸ್' ಆಗಲು ಹೇಳುತ್ತಿದ್ದಾರೆ'. ನೊಂದ ಹುಡುಗಿ.

ಅಳಲು ತೋಡಿಕೊಂಡ ನೊಂದ ಹುಡುಗಿ
'ನಾವಂದುಕೊಂಡಿದ್ದಕ್ಕಿಂತಲೂ ಇಲ್ಲಿ ಜಾಸ್ತಿ ಕಾಂಪ್ರೊಮೈಸ್ ಆಗಬೇಕು. ಹಾಗಾಗಿ ನಾನು ನಟಿಸುವ ಆಸೆ ಬಿಟ್ಟು ಲಾಂಗ್ ಬ್ರೇಕ್ ತೆಗೆದುಕೊಂಡು, ಮತ್ತೆ ಫ್ಯಾಶನ್ ಲೋಕಕ್ಕೆ ಕಾಲಿಟ್ಟೆ. ಇದೀಗ ನನಗೆ ನಿಮ್ಮ ಬಳಿ ಅವಕಾಶ ಇದ್ದರೆ ದಯವಿಟ್ಟು ಕೊಡಿ. ನಾನು ಅರ್ಹಳಾಗಿದ್ದರೆ ಮಾತ್ರ ಅವಕಾಶ ಕೊಡಿ'. ಹೀಗೆ ಕಾಮುಕರ ಕೈಗೆ ಸಿಕ್ಕಿ ಬಚವಾದ ಹುಡುಗಿ ಕವಿತಾ ಲಂಕೇಶ್ ಅವರಿಗೆ ಪತ್ರ ಬರೆದಿದ್ದಳು.

ಕವಿತಾ ಅವರ ರಿಪ್ಲೈ 
'ನೀನು ಯಾವುದೇ ಕಾರಣಕ್ಕೂ 'ಕಾಂಪ್ರೊಮೈಸ್' ಆಗಬೇಡಿ, ಅದರ ಅಗತ್ಯ ಕೂಡ ಕಂಡಿತ ಇಲ್ಲ. ಇನ್ನು ಈ ಬಗ್ಗೆ ಯಾರೂ ಕೂಡ 'ಕಾಂಪ್ರೊಮೈಸ್' ಆಗಬಾರದು. ಯಾವಾಗಲೂ ಆತ್ಮವಿಶ್ವಾಸದಿಂದಿರಿ, ಧೈರ್ಯವಾಗಿರಿ. ನಾನು ನಿಮ್ಮನ್ನು ಆದಷ್ಟು ಬೇಗ ಕಾಂಟಾಕ್ಟ್ ಮಾಡುತ್ತೇನೆ. ನನ್ನ ಮುಂದಿನ ಪ್ರಾಜೆಕ್ಟ್ ಸದ್ಯದಲ್ಲೇ ಶುರು ಆಗುತ್ತೆ ಅನ್ನೋ ನಂಬಿಕೆಯಲ್ಲಿ ನಾನಿದ್ದೇನೆ.' ಹೀಗೆ ಕವಿತಾ ಲಂಕೇಶ್ ಅವರು ನೊಂದ ಹುಡುಗಿಗೆ ಸಮಾಧಾನ ಹೇಳಿದ್ದಾರೆ.

ನಿರ್ದೇಶಕ ಬಿ.ಎಸ್ ಲಿಂಗದೇವರು
ಕವಿತಾ ಲಂಕೇಶ್ ಅವರು ಹಾಕಿರುವ ಪೋಸ್ಟ್ ಗೆ 'ನಾನು ಅವನಲ್ಲ ಅವಳು' ಖ್ಯಾತಿಯ ನಿರ್ದೇಶಕ ಬಿ.ಎಸ್ ಲಿಂಗದೇವರು ಹೀಗನ್ನುತ್ತಾರೆ, 'ನಿಮಗೆ ಪತ್ರ ಬರೆದ ಹುಡುಗಿ ತುಂಬಾ ನೊಂದಿರಬೇಕು. ಹಾಗಂತ ಅವಳು ಕನ್ನಡ ಚಿತ್ರರಂಗದ ಎಲ್ಲರನ್ನು ಸರಿ ಇಲ್ಲ ಅಂತ ಜರಿಯಬಾರದು. ನನಗನ್ನಿಸೋ ಮಟ್ಟಿಗೆ ಇದು ಪಬ್ಲಿಸಿಟಿ ಗಿಮಿಕ್ ಇರಬಹುದು. ಮಾತ್ರವಲ್ಲದೇ ಇದು ನಮ್ಮ ಚಿತ್ರರಂಗದ ಇನ್ನಿತರೇ ನಾಯಕಿಯರಿಗೆ ಕೆಟ್ಟ ಹೆಸರನ್ನು ತಂದುಕೊಡುತ್ತದೆ'-ಬಿ.ಎಸ್ ಲಿಂಗದೇವರು ಅಭಿಪ್ರಾಯ.

ನಿರ್ದೇಶಕಿ ಕವಿತಾ ಲಂಕೇಶ್
'ಅವಳು ಎಲ್ಲರನ್ನೂ ಬ್ಲೇಮ್ ಮಾಡ್ತಾ ಇಲ್ಲ. ನಿಮಗೆ ಗೊತ್ತು, ನೀವು ಕೂಡ 'ನಾನು ಅವನಲ್ಲ ಅವಳು' ಸಿನಿಮಾ ಮಾಡಿದ್ದೀರಿ, ಅದರಲ್ಲೆ ಎಲ್ಲವನ್ನೂ ಹೇಳಿದ್ದೀರಿ. ಇದು ಪಬ್ಲಿಸಿಟಿ ಗಿಮಿಕ್ ಅಲ್ಲ. ತರುಣಿ, ಮುದುಕಿ, ಸುಂದರಿ ಅಥವಾ ಕೊಳಕು ಯಾವುದೇ ಮಹಿಳೆ ಆಗಿರಲಿ, ಈ ವಿಚಾರದಲ್ಲಿ ಅವಳು ಸಮಸ್ಯೆ ಎದುರಿಸಿಯೇ ಎದುರಿಸುತ್ತಾಳೆ'.-ಕವಿತಾ ಲಂಕೇಶ್ ತಿರುಗೇಟು.

ವಿಜಯ್ ಪ್ರಸಾದ್ ಗೆ ಲಿಂಗದೇವರ ಪ್ರಶ್ನೆ 
'ವಿಜಯ್ ಪ್ರಸಾದ್ ಎಂ.ಸಿ ಮತ್ತು ಆಸಿಫ್ ಕೆ ಫಾರುಕಿ, ನಿಮಗೆ ಯಾವಾಗ್ಲಾದರೂ ಇಂತಹ ಸಂದರ್ಭ ಬಂದೊದಗಿದೆಯಾ, ನೀವು ಸಿನಿಮಾ ಮಾಡುವಾಗ?.

ಫಾರುಕಿ ಅವರ ಉತ್ತರ:
ಹೌದು ಲಿಂಗದೇವರು, ಕೆಲವು ಸಮಯಗಳ ಹಿಂದೆ ನನಗೊಬ್ಬಳು ಹುಡುಗಿ ಸುಖಾ-ಸುಮ್ಮನೆ ಹತ್ತಿರವಾಗಲು ನೋಡಿದಳು, ನನ್ನ ಸಿನಿಮಾದಲ್ಲಿ ಒಂದು ಸಣ್ಣ ಪಾತ್ರ ಮಾಡುವ ಸಲುವಾಗಿ. ಆದರೆ ನಾನು ಯಾವಾಗಲೂ ಕೌಟುಂಬಿಕ ವಾತಾವರಣದಲ್ಲಿ ಕೆಲಸ ಮಾಡಲು ಇಚ್ಛಿಸುತ್ತೇನೆ. ನಾನು ಅಂತಹ ವ್ಯಕ್ತಿಗಳನ್ನು ದೂರ ತಳ್ಳುತ್ತೇನೆ. ಇದಕ್ಕೆಲ್ಲಾ ಅವಕಾಶ ಕೊಡೋದಿಲ್ಲ, ಎನ್ನುತ್ತಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.