Breaking News
recent

ಬೆನ್ನಿಗೆ ಗಾಯವಾಗಿ ಆಸ್ಪತ್ರೆಗೆ ದಾಖಲಾದ 'ಡ್ಯಾನ್ಸ್ ಕಿಂಗ್' ಪ್ರಭುದೇವ

ಡ್ಯಾನ್ಸ್ ನಲ್ಲಿ ಕಿಂಗ್ ಆಗಿರುವ ಕನ್ನಡಿಗ ಪ್ರಭುದೇವ ಅವರಿಗೆ (Tutak Tutak Tutiya) 'ಟುಟಕ್ ಟುಟಕ್ ಟುಟಿಯಾ' (ತೆಲುಗಿನಲ್ಲಿ 'ಅಭಿನೇತ್ರಿ') ಚಿತ್ರದ ಹಾಡಿನ ಶೂಟಿಂಗ್ ಸಂದರ್ಭದಲ್ಲಿ ಬೆನ್ನಿಗೆ ತೀವ್ರ ಗಾಯವಾಗಿದೆ. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
prabhudeva
ಖಳನಟನಾಗಿ ಖ್ಯಾತಿ ಪಡೆದಿರುವ ಸೋನು ಸೂದ್ ಅವರ ಹೋಮ್ ಪ್ರೊಡಕ್ಷನ್ ನಲ್ಲಿ ಮೂಡಿಬರುತ್ತಿರುವ ಚೊಚ್ಚಲ ಸಿನಿಮಾದಲ್ಲಿ, ಪ್ರಭುದೇವ ಅವರು ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ಮೂಡಿಬರುತ್ತಿದ್ದು, ಏಕಕಾಲದಲ್ಲಿ ತೆರೆ ಕಾಣಲಿದೆ.
ಚಿತ್ರದ ಟೈಟಲ್ ಸಾಂಗ್ ನ ಶೂಟಿಂಗ್ ನಡೆಯುತ್ತಿತ್ತು, ಸುಮಾರು 500 ಸಹ ಕಲಾವಿದರು ಮತ್ತು 350 ಪ್ರೊಫೆಶನಲ್ ಡ್ಯಾನ್ಸರ್ ಗಳು ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಹಾಡಿನ ಚಿತ್ರೀಕರಣ ಭರದಿಂದ ಸಾಗುತ್ತಿತ್ತು, ಜೊತೆಗೆ ನಟ ಪ್ರಭುದೇವ ಅವರು ಕೂಡ ಜಬರ್ದಸ್ತ್ ಆಗಿ ಡ್ಯಾನ್ಸ್ ಮಾಡುತ್ತಿದ್ದರು.
ಸಡನ್ ಆಗಿ ಅವರ ಬೆನ್ನು ಉಳುಕಿದ ಪರಿಣಾಮ ಇದೀಗ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಂದಹಾಗೆ ಈ ಹಾಡಿಗೆ ಪ್ರಭುದೇವ ಅವರೇ ಕೊರಿಯೋಗ್ರಾಫರ್ ಆದ ಕಾರಣ, ಹಾಡಿನ ಶೂಟಿಂಗ್ ಕೂಡ ಮುಂದೂಡಲಾಗಿದೆ.
ವೈದ್ಯರು 2 ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದ್ದು, ಪ್ರಭುದೇವ ಅವರು ಸಂಫೂರ್ಣ ಗುಣಮುಖರಾದ ಮೇಲೆ ಶೂಟಿಂಗ್ ಅಂತ ಸೋನು ಸೂದ್ ಅವರು ಕೂಡ ಘೋಷಣೆ ಮಾಡಿದ್ದಾರೆ. ಚಿತ್ರದಲ್ಲಿ ಪ್ರಭುದೇವ ಅವರಿಗೆ ನಾಯಕಿಯಾಗಿ ತಮನ್ನಾ ಭಾಟಿಯಾ ಅವರು ಅಭಿನಯಿಸಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.