Breaking News
recent

ಕಡೆಗೂ ಕಾವೇರಿ ಹೋರಾಟದ ಬಗ್ಗೆ ತುಟ್ಟಿ ಬಿಚ್ಚಿದ ಮಂಡ್ಯದ 'ಅಣ್ತಮ್ಮ' ಯಶ್

ಕಳೆದ ಒಂದು ವಾರದಿಂದ ಕರುನಾಡಿನಲ್ಲಿ ಕಾವೇರಿ ಕಿಚ್ಚು ಹೊತ್ತು ಉರಿಯುತ್ತಿದ್ದರೂ, 'ಅಣ್ತಮ್ಮ' ಖ್ಯಾತಿಯ ರಾಕಿಂಗ್ ಸ್ಟಾರ್ ಯಶ್ ಮಾತ್ರ ತುಟಿಕ್ ಪಿಟಿಕ್ ಎಂದಿರಲಿಲ್ಲ. ಕಾವೇರಿಗಾಗಿ ಕರ್ನಾಟಕ ಬಂದ್ ಇದ್ದಾಗಲೂ ಯಾವುದೇ ಹೇಳಿಕೆ ನೀಡಿರಲಿಲ್ಲ.
ಸೆಪ್ಟೆಂಬರ್ ಮೊದಲ ವಾರದಲ್ಲಿ ನಡೆದ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಲು ಅಮೆರಿಕಾಗೆ ತೆರಳಿದ್ದ ಯಶ್, ಅಲ್ಲಿಂದ ಯೂರೋಪ್ ಗೆ ಫ್ಲೈಟ್ ಹತ್ತಿದ್ದರು. 'ಸಂತು ಸ್ಟ್ರೇಟ್ ಫಾರ್ವರ್ಡ್' ಚಿತ್ರದ ಹಾಡಿನ ಚಿತ್ರೀಕರಣ ಯೂರೋಪ್ ನಲ್ಲಿ ನಡೆಯುತ್ತಿದೆ. ಹೀಗಾಗಿ ಯಶ್, ರಾಧಿಕಾ ಪಂಡಿತ್ ಮತ್ತು ಇಡೀ ಚಿತ್ರತಂಡ ಅಲ್ಲಿದೆ.
rocking star yash
rocking star yash
ಪರಿಣಾಮ, ಇವರ್ಯಾರೂ 'ಕರ್ನಾಟಕ ಬಂದ್' ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ನಡೆದ ಪ್ರತಿಭಟನೆಯಲ್ಲೂ ಭಾಗವಹಿಸಲಿಲ್ಲ. ಇದೇ ಕಾರಣಕ್ಕೆ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ನೆಗೆಟಿವ್ ಕಾಮೆಂಟ್ ಗಳು ವ್ಯಕ್ತವಾಗುತ್ತಿತ್ತು.
ಈಗ ಕಾವೇರಿ ನೀರು ಹಂಚಿಕೆ ಕುರಿತು ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರ ರೂಪಕ್ಕೆ ತಿರುಗಿರುವುದರಿಂದ, ರಾಜ್ಯದ ಜನತೆ ಶಾಂತಿ ಕಾಪಾಡಬೇಕು ಅಂತ ಯೂರೋಪ್ ನಿಂದ ರಾಕಿಂಗ್ ಸ್ಟಾರ್ ಯಶ್ ವಿಡಿಯೋ ಸಂದೇಶ ಕಳುಹಿಸಿದ್ದಾರೆ. ಓವರ್ ಟು ಯಶ್....ನಾವು ಕನ್ನಡಿಗರು ಶಾಂತಿ ಪ್ರಿಯರು.... 
''ನಮಸ್ಕಾರ, ನಾವು ಕನ್ನಡಿಗರು, ಶಾಂತಿ ಪ್ರಿಯರು ಎನ್ನುವುದನ್ನು ಮರೆಯಬಾರದು. ನ್ಯಾಯ ನಮಗೆ ಸಿಗುತ್ತದೆ. ಅದನ್ನ ಖಂಡಿತ ಬಿಡುವುದು ಬೇಡ. ಆದ್ರೆ, ಅದನ್ನ ಯಾವ ದಾರಿಯಲ್ಲಿ ಅಚೀವ್ ಮಾಡ್ತೀವಿ ಅನ್ನೋದು ತುಂಬಾ ಮುಖ್ಯ ಆಗುತ್ತದೆ'' - ಯಶ್

ಹಿಂಸೆಯಿಂದ ಪ್ರಯೋಜನ ಇಲ್ಲ
''ಶಾಂತಿಯಿಂದ ಮಾತ್ರ ದೊಡ್ಡ ದೊಡ್ಡ ವಿಷಯಗಳು ಅಚೀವ್ ಆಗಿರುವುದು ಲೈಫ್ ನಲ್ಲಿ. Violence ಇಂದ ಏನೂ ಉಪಯೋಗ ಇಲ್ಲ. ಈಗ ನಾವು ನಡೆದುಕೊಳ್ಳುತ್ತಿರುವ ರೀತಿ, ನಾವು ಶಾಂತಿ ಪ್ರಿಯರು, ಕನ್ನಡಿಗರು, ನಮ ಶೋಭೆ ತರುವುದು ಅಲ್ಲ ಅಂತ ನನಗೆ ಅನಿಸುತ್ತದೆ'' - ಯಶ್

ಕಾನೂನನ್ನು ಕೈಗೆ ತೆಗೆದುಕೊಳ್ಳಬೇಡಿ 
''ದಯವಿಟ್ಟು ಯಾರೂ ಕಾನೂನು ಕೈಗೆ ತೆಗೆದುಕೊಳ್ಳಬಾರದು. ಬೆಂಕಿ ಹಚ್ಚೋದಾಗಲಿ, ಅಥವಾ ಯಾರಿಗೋ ಹೊಡೆಯುವುದರಿಂದ ಏನೂ ಪ್ರಯೋಜನ ಇಲ್ಲ'' - ಯಶ್

ಅಲ್ಲಿರುವ ಕನ್ನಡಿಗರ ಗತಿ ಏನು?
''ನಾನು ಹೇಳುವುದು ಒಂದೇನೇ... ಇವಾಗ ನಾವಿಲ್ಲಿ ಹೊಡೆಯುತ್ತೇವೆ ಅಂದ್ರೆ, ಅಲ್ಲಿರುವ ಕನ್ನಡಿಗರ ಗತಿ ಏನು? ಅದನ್ನ ಯೋಚಿಸಬೇಕು. ನ್ಯಾಯ ಸಿಕ್ಕೇ ಸಿಗುತ್ತದೆ. ಹೋರಾಡೋಣ. ಶಾಂತಿಯುತವಾಗಿ ಹೋರಾಡೋಣ'' - ಯಶ್

ಪ್ರಚೋದನೆ ಮಾಡ್ಬೇಡಿ
''ಫೇಸ್ ಬುಕ್ ಮತ್ತು ಇತರ ಸೋಷಿಯಲ್ ಮೀಡಿಯಾದಲ್ಲಿ ಪ್ರಚೋದನಕಾರಿ ಸ್ಟೇಟ್ಮೆಂಟ್ ಕೊಡುವುದನ್ನ ಮಾಡಬೇಡಿ. ಜನರನ್ನು ಪ್ರಚೋದಿಸಬೇಡಿ. ಇದರಿಂದ ಏನೂ ಉಪಯೋಗ ಇಲ್ಲ'' - ಯಶ್

ಶಾಂತಿಯಿಂದ ವರ್ತಿಸಿ 
''ರೈತರ ಪರವಾಗಿ ಎಲ್ಲರೂ ನಿಲ್ಲಬೇಕು. ಆದ್ರೆ ಶಾಂತಿಯುತವಾಗಿ ಎಲ್ಲರೂ ಹೋರಾಡೋಣ. ಹಂಡ್ರೆಡ್ ಪರ್ಸೆಂಟ್ ಹೊಟ್ಟೆಗೆ ಅನ್ನ ತಿನ್ನುವ ಪ್ರತಿಯೊಬ್ಬರೂ ರೈತರ ವಿಷಯದಲ್ಲಿ ಬೆಂಬಲ ನೀಡಲೇಬೇಕು. ಅಶಾಂತಿಯಿಂದ ವರ್ತಿಸುವುದರಿಂದ ರೈತರಿಗೂ ಪ್ರಯೋಜನ ಆಗಲ್ಲ'' - ಯಶ್

ಯಶ್ ಟ್ವೀಟ್ ಇಲ್ಲಿದೆ ನೋಡಿ.... 
ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಮತ್ತು ಟ್ವಿಟ್ಟರ್ ಮೂಲಕ ನಟ ಯಶ್ ನೀಡಿರುವ ವಿಡಿಯೋ ಸಂದೇಶ ನೋಡಲು ಈ ಲಿಂಕ್ ಕ್ಲಿಕ್ ಮಾಡಿ....https://youtu.be/rIulBWpZlY4
Fresh Kannada

Fresh Kannada

No comments:

Post a Comment

Google+ Followers

Powered by Blogger.