Breaking News
recent

ಸ್ಯಾಂಡಲ್ ವುಡ್ ನಲ್ಲಿ ಮತ್ತೆ 'ಕೌರವ'ನ ಆರ್ಭಟ ಶುರು

90ರ ದಶಕದಲ್ಲಿ ನಿರ್ದೇಶಕ ಎಸ್.ಮಹೇಂದರ್ ಆಕ್ಷನ್-ಕಟ್ ನಲ್ಲಿ, ನಟ ಬಿ.ಸಿ.ಪಾಟೀಲ್ ಅವರು ನಿರ್ಮಿಸಿ, ನಾಯಕರಾಗಿ ನಟಿಸಿದ್ದ 'ಕೌರವ' ಚಿತ್ರ ಸಾಕಷ್ಟು ಹೆಸರು ಮಾಡಿತ್ತು. ಮಾತ್ರವಲ್ಲದೇ 'ಕೌರವ' ಚಿತ್ರದ ಭಾಗ-2ನ್ನು ತೆರೆಗೆ ತರುವುದಾಗಿ ಬಿ.ಸಿ. ಪಾಟೀಲ್ ಹೇಳಿಕೊಂಡಿದ್ದರು.
ಆದರೆ ಬಿಸಿ ಪಾಟೀಲ್ ಅವರು ಆ ಸಿನಿಮಾದ ಬಗ್ಗೆ ಮತ್ತೆ ಮಾತೆತ್ತಲಿಲ್ಲ. ಇದೀಗ ನಿರ್ದೇಶಕ ಎಸ್.ಮಹೇಂದರ್ ಮತ್ತೊಮ್ಮೆ 'ಕೌರವ' ಎಂಬ ಹೆಸರಿನ ಶೀರ್ಷಿಕೆಯನ್ನೇ ಇಟ್ಟುಕೊಂಡು ಅದರ ಮುಂದುವರಿದ ಭಾಗವನ್ನು ಆರಂಭಿಸಿದ್ದಾರೆ.
'ಮಹಾಕಾಳಿ' ಚಿತ್ರದಲ್ಲಿ ನೆಗಟಿವ್ ಪಾತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ನಟ ನರೇಶ್ ಗೌಡ ಅವರು 'ಕೌರವ ಭಾಗ-2' 'ಒನ್ಸ್ ಮೋರ್ ಕೌರವ' ಚಿತ್ರದ ಮೂಲಕ ಮೊದಲ ಬಾರಿಗೆ ನಾಯಕನಾಗಿ ನಟಿಸುತ್ತಿದ್ದಾರೆ. ಮುಂದೆ ಓದಿ...

1. ನಟನೆಯ ಜೊತೆಗೆ ನಿರ್ಮಾಣ
ಈ ಬಾರಿ ನಟ ನರೇಶ್ ಗೌಡ ಅವರೇ ತಮ್ಮ ನಟನೆಯ ಚಿತ್ರಕ್ಕೆ ತಾವೇ ನಿರ್ಮಾಪಕರೂ ಆಗಿದ್ದಾರೆ. 'ಕೌರವ' ಮೊದಲ ಭಾಗದಲ್ಲಿ ಬಿ.ಸಿ ಪಾಟೀಲ್ ಅವರು ರೌಡಿ ಪಾತ್ರದಲ್ಲಿ ಕಾಣಿಸಿಕೊಂಡರೆ, ಭಾಗ-2, ಮತ್ತೊಮ್ಮೆ 'ಕೌರವ' ಚಿತ್ರದಲ್ಲಿ ನಟ ನರೇಶ್ ಗೌಡ ಅವರು ಖಡಕ್ ಪೊಲೀಸ್ ಆಫೀಸರ್ ಆಗಿ ಅಭಿನಯಿಸಲಿದ್ದಾರೆ.

2. ಹಳ್ಳಿಯಲ್ಲಿ 'ಕೌರವ'ನ ಜರ್ನಿ ಶುರು
'ಕೌರವ ಭಾಗ 2' ಚಿತ್ರೀಕರಣ ಸಂಪೂರ್ಣ ಹಳ್ಳಿಯಲ್ಲಿ ನಡೆಯಲಿರುವುದರಿಂದ, ಶ್ರೀರಂಗಪಟ್ಟಣ, ತಲಕಾಡು ಮುಂತಾದ ಸ್ಥಳಗಳಲ್ಲಿ ಸುಮಾರು 60 ದಿನಗಳ ಕಾಲ, ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

3. ನಾಯಕಿ ಯಾರು?
'ಸೋಡಾಬುಡ್ಡಿ' ಚಿತ್ರದ ಮೂಲಕ ಹಿರಿತೆರೆಗೆ ಕಾಲಿಟ್ಟ ನಟಿ ಅನುಷಾ ರಂಗನಾಥ್ ಈ ಚಿತ್ರದಲ್ಲಿ ನರೇಶ್ ಗೌಡ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಸ್ಯಾಂಡಲ್ ವುಡ್ ನಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. 'ಕೌರವ' ಚಿತ್ರದಲ್ಲಿ ನಟಿ ಅನುಷಾ ಅವರು ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

4. ತಾರಾಗಣದಲ್ಲಿ ಯಾರೆಲ್ಲಾ ಇದ್ದಾರೆ
ಚಿತ್ರದಲ್ಲಿ ಊರ ಹಿರಿಯರಾಗಿ, ಹಿರಿಯ ನಟ ಶಿವರಾಂ, ಇವರೊಂದಿಗೆ 'ರಂಗಾಯಣ', 'ಅಭಿನಯ ತರಂಗ' ಮತ್ತು 'ನೀನಾಸಂ'ಗಳಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳನ್ನು ಇನ್ನುಳಿದ ಪಾತ್ರಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಸದಾ ನೆಮ್ಮದಿ ಬಯಸುವ ನಾಯಕ ಹಳ್ಳಿಗೆ ವರ್ಗವಾಗಿ ಬಂದಾಗ ಅಲ್ಲಿನ ವಾತವರಣವನ್ನು ಹತೋಟಿಗೆ ತಂದು ಹೇಗೆ ಶಾಂತಿಯನ್ನು ಕಾಪಾಡುತ್ತಾನೆ ಎಂಬುದು ಇಡೀ ಸಿನಿಮಾದ ತಿರುಳು.

5. ತಾಂತ್ರಿಕ ವರ್ಗ
ಸಾಹಿತಿ ಕೆ.ಕಲ್ಯಾಣ್ ರಚನೆ ಮಾಡಿರುವ 8 ಗೀತೆಗಳಿಗೆ ಶ್ರೀಧರ್ ಸಂಭ್ರಮ್ ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಕ ಕೆ.ಕೃಷ್ಣಕುಮಾರ್ ಅವರ ಕ್ಯಾಮೆರಾ ಕೈ ಚಳಕ, ಡಿಫರೆಂಟ್ ಡ್ಯಾನಿ ಸಾಹಸ, ಸಂಕಲನ ಕೆ.ಎಂ.ಪ್ರಕಾಶ್, ಮದನ್-ಹರಣಿ ನೃತ್ಯ ಸಂಯೋಜನೆ ಮಾಡಲಿದ್ದಾರೆ. ನಾಗರಬಾವಿ ಶ್ರೀ ಸೊಲ್ಲಾಪುರದಮ್ಮ ದೇವಸ್ಥಾನದಲ್ಲಿ ನಡೆದ ಮುಹೂರ್ತ ಸಮಾರಂಭಕ್ಕೆ ನಿರ್ಮಾಪಕ ಭೋಗೇಂದ್ರ ಸೇರಿದಂತೆ ಚಿತ್ರರಂಗದ ಹಲವು ಹಿತೈಷಿಗಳು ಆಗಮಿಸಿ 'ಕೌರವ' ಮುಂದುವರಿದ ಭಾಗದ ಸಿನಿಮಾ ತಂಡಕ್ಕೆ ಶುಭ ಹಾರೈಸಿದರು.
Fresh Kannada

Fresh Kannada

No comments:

Post a Comment

Google+ Followers

Powered by Blogger.