Breaking News
recent

ಡ್ರಾಮಾದಲ್ಲಿ ವೀಕ್ಷಕರ ಮನಗೆದ್ದ ಕುಡ್ಲದ ಪೋರಿ ಚಿತ್ರಾಲಿ ಬಗ್ಗೆ ಒಂಚೂರು..

ಕರಾವಳಿ ಪ್ರದೇಶ ಮಂಗಳೂರು ಪ್ರತಿಭೆಗಳ ಆಗರ. ನಾಟ್ಯ, ನಟನೆ, ಸಿನಿಮಾ ರಂಗ, ಓದಿನಲ್ಲೂ ಮಂಗಳೂರಿನವರದ್ದೇ ಮೇಲುಗೈ. ಇದೀಗ ನಾವು ಹೇಳ ಹೊರಟಿರುವ ಆ ಅತ್ಯುನ್ನತ ಪ್ರತಿಭೆ ಬಗ್ಗೆ, ಅದು ಬೇರೆ ಯಾರೂ ಅಲ್ಲ, ತನ್ನ ವಯಸ್ಸಿಗೂ ಮೀರಿ ಅದ್ಭುತ ನಟನೆ ಮೆರೆದ ನಮ್ಮ ಮಂಗಳೂರಿನ ಪುಟಾಣಿ ಹುಡುಗಿ ಚಿತ್ರಾಲಿ.
drama juniors chitrali episodes
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಡ್ರಾಮಾ ಜೂನಿಯರ್ಸ್' ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿರುವ, ಈ ಕುಡ್ಲದ ಪೋರಿ ಚಿತ್ರಾಲಿ. ಈಕೆಗೆ ಈಗ ಕೇವಲ 5 ವರ್ಷ, ಚಿಕ್ಕ ವಯಸ್ಸಿನಲ್ಲಿಯೇ ತನ್ನ ಅದ್ಭುತ ನಟನೆಯ ಮೂಲಕ ಲಕ್ಷಾಂತರ ಪ್ರೇಕ್ಷಕರ ಮನಗೆದ್ದಿದ್ದಾಳೆ ಟಪೋರಿ ಚಿತ್ರಾಲಿ.
ಮುದ್ದು ಪೋರಿ ಚಿತ್ರಾಲಿಯ ಡ್ರಾಮಾ ಕಲರವವನ್ನು ಎಲ್ಲರೂ ತಪ್ಪದೆ ವೀಕ್ಷಿಸುತ್ತಾರೆ. ಪುಟ್ಟ ವಯಸ್ಸಿನಲ್ಲಿಯೇ ಈಕೆ ತನ್ನದೇ ಆದ, ನೂರಾರು ಅಭಿಮಾನಿ ವರ್ಗವನ್ನು ಸಂಪಾದಿಸಿದ್ದಾಳೆ. ಮುಂದೆ ಓದಿ.......

ಬೋಳಾರಿನ ಪೊರ್ಲುದ ಪೊಣ್ಣು
ಮಂಗಳೂರಿನ ಬೋಳಾರ್ ತೇಜ್ ಪಾಲ್ ಸುವರ್ಣ ಮತ್ತು ವೈಶಾಲಿ ತೇಜ್ ಪಾಲ್ ಸುವರ್ಣ ದಂಪತಿಯ ಮುದ್ದು ಮಗಳು ಚಿತ್ರಾಲಿ. ಈಗಾಗಲೇ ತನ್ನ ಮನೋಜ್ಞ ಅಭಿನಯದಿಂದ ಎಲ್ಲರ ಮನ ಸೆಳೆದಿದ್ದು, ತನ್ನ ಪ್ರತಿಭೆಯನ್ನು ಕೂಡ ಎಲ್ಲಾ ಪಸರಿಸಿದ್ದಾಳೆ

ಟಿವಿಯಲ್ಲಿ ದೊಡ್ಡ ವೇದಿಕೆಯಲ್ಲಿ ಚಿತ್ರಾಲಿ
ಚಿತ್ರಾಲಿ ಮೊದಲ ಬಾರಿ ಏರಿದ ದೊಡ್ಡ ವೇದಿಕೆ ಎಂದರೆ ಅದು 'ಡ್ರಾಮಾ ಜೂನಿಯರ್ಸ್'. ಯಾವುದೇ ಪಾತ್ರ ನೀಡಲಿ ಆಕೆ ಅಮೋಘವಾಗಿ ನಿಭಾಯಿಸುವ ಪ್ರತಿಭೆ ಹೊಂದಿದ್ದಾಳೆ. ಆಕೆಯ ಮುದ್ದು ಮುಖ, ಕಿಲಕಿಲ ನಗು ಈಗಾಗಲೇ ಎಲ್ಲರನ್ನೂ ಮೋಡಿ ಮಾಡಿದೆ.

ವಿಶೇಷ ಪ್ರತಿಭೆ 
ಡ್ರಾಮಾ ಜೂನಿಯರ್ಸ್ ನಲ್ಲಿ ಅನೇಕ ಪಾತ್ರಗಳಲ್ಲಿ ಚಿತ್ರಾಲಿ ಅಭಿನಯ ಮಾಡಿದ್ದಾಳೆ. ಅವುಗಳಲ್ಲಿ ವಿಶೇಷವಾಗಿ ನಾಗಿಣಿ, ನಾಗವಲ್ಲಿ, ಕಲ್ಪನಾ, ಅಜ್ಜಿ, ಶಾಲಾ ಹುಡುಗಿ, ಕೃಷ್ಣ, ಹನುಮಾನ್ ಹೀಗೆ ಹಲವು ಪಾತ್ರಗಳಲ್ಲಿ ಚಿತ್ರಾಲಿ ತನ್ನ ವಿಶೇಷ ಪ್ರತಿಭೆ ಮೆರೆದಿದ್ದಾಳೆ.

ದೊಡ್ಡ ವೇದಿಕೆ ಕಲ್ಪಿಸಿಕೊಟ್ಟ 'ಡ್ರಾಮ' 
'ಐ ಬುಸ್ ಯು' ಎಂದು ಮುದ್ದಾಗಿ ಹೇಳುವ ಚಿತ್ರಾಲಿಗೆ, ತನ್ನ ಪ್ರತಿಭೆ ಅನಾವರಣ ಮಾಡಲು ಜೀ ಕನ್ನಡದ 'ಡ್ರಾಮಾ ಜೂನಿಯರ್ಸ್' ಬಹು ದೊಡ್ಡ ವೇದಿಕೆ ಕಲ್ಪಿಸಿಕೊಟ್ಟಿದೆ. ಆಕೆಯ ಪ್ರತಿಭೆಗೆ ತಕ್ಕ ವೇದಿಕೆ ಸಿಕ್ಕಿದೆ ಎಂದು ಆಕೆಯ ಹೆತ್ತವರು ಕೂಡ ಹೆಮ್ಮೆಯಿಂದ ಹೇಳುತ್ತಾರೆ. ಇನ್ನು ಚಿತ್ರಾಲಿಗೆ 'ಬಾರ್ಬಿ ಗೊಂಬೆ'ಗಳೆಂದರೆ ಪಂಚಪ್ರಾಣ.

ನಟನೆ-ಡೈಲಾಗ್ ಎಂದರೆ ಚಿತ್ರಾಲಿಗೆ ಸಲೀಸು
ನಾಟಕಕ್ಕೆ ಮುಖ್ಯವಾಗಿ ಬೇಕಾದದ್ದು ಡೈಲಾಗ್ ಮತ್ತು ಭಾವಾಭಿವ್ಯಕ್ತಿ. ಎಷ್ಟೇ ದೊಡ್ಡ ಡೈಲಾಗ್ ನೀಡಿದರು ಚಿತ್ರಾಲಿ ಸಲೀಸಾಗಿ ನಿಭಾಯಿಸುತ್ತಾಳೆ. ಈ ಮುದ್ದು ಪುಟಾಣಿಯ ಬಾಲ ಪ್ರತಿಭೆ ಎಲ್ಲರ ಗಮನ ಸೆಳೆದಿದೆ. ಈಗಾಗಲೇ ಫೈನಲ್ ತಲುಪಿರುವ ಚಿತ್ರಾಲಿಗೆ ನಾವೆಲ್ಲರೂ ಶುಭ ಹಾರೈಸೋಣ.
Fresh Kannada

Fresh Kannada

No comments:

Post a Comment

Google+ Followers

Powered by Blogger.