Breaking News
recent

'ದೊಡ್ಮನೆ ಹುಡ್ಗ' ಯಾವಾಗ ತೆರೆಗೆ ಬರುತ್ತೆ ಗೊತ್ತಾಯ್ತಾ?

ಎಲ್ಲವೂ ಅಂದುಕೊಂಡಂತೆ ನಡೆದರೆ ಸೆಪ್ಟೆಂಬರ್ 23ಕ್ಕೆ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ರಾಧಿಕಾ ಪಂಡಿತ್ ಅಭಿನಯದ 'ದೊಡ್ಮನೆ ಹುಡ್ಗ' ಎಲ್ಲಾ ಕಡೆ ಗ್ರ್ಯಾಂಡ್ ಆಗಿ ತೆರೆ ಕಾಣಬೇಕಿತ್ತು.
dodmane huduga kannada songs download
ಆದರೆ ಕಾವೇರಿ ಗಲಭೆಯ ಪರಿಣಾಮ, ರೈತರ ಹೋರಾಟಕ್ಕೆ ಬೆಂಬಲಿಸಿದ 'ದೊಡ್ಮನೆ ಹುಡ್ಗ' ಚಿತ್ರತಂಡ, ಸಿನಿಮಾ ಬಿಡುಗಡೆ ಕಾರ್ಯಕ್ರಮವನ್ನು ಮುಂದಕ್ಕೆ ಹಾಕಿದೆ. ಜೊತೆಗೆ ಈಗಾಗಲೇ ಸೆನ್ಸಾರ್ ಅಂಗಳಕ್ಕೆ ಕಾಲಿಟ್ಟ 'ದೊಡ್ಮನೆ ಹುಡ್ಗ', ಅಲ್ಲಿ ಅಧಿಕಾರಿಗಳ ಮನಮೆಚ್ಚಿಸಿ 'ಯು/ಎ' ಪ್ರಮಾಣ ಪತ್ರ ಪಡೆದುಕೊಂಡಿದೆ.
ಅಂದಹಾಗೆ ಪ್ರಮಾಣ ಪತ್ರ ಪಡೆದುಕೊಂಡ ನಿರ್ದೇಶಕ ದುನಿಯಾ ಸೂರಿ ಅವರು, ಬಹುನಿರೀಕ್ಷಿತ ಚಿತ್ರವನ್ನು ಸೆಪ್ಟೆಂಬರ್ ತಿಂಗಳಾಂತ್ಯಕ್ಕೆ, ಅಂದ್ರೆ ಸೆಪ್ಟೆಂಬರ್ 30ರಂದು ಎಲ್ಲಾ ಕಡೆ ಗ್ರ್ಯಾಂಡ್ ಆಗಿ ರಿಲೀಸ್ ಮಾಡಲು ತಯಾರಿ ನಡೆಸಿದ್ದಾರೆ.
ಇನ್ನು ಚಿತ್ರದ ನಿರ್ಮಾಪಕ ಗೋವಿಂದು ಅವರು ಈಗಾಗಲೇ ಚಿತ್ರದ ಬಿಡುಗಡೆ ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ಸಿದ್ಧತೆ ಕೂಡ ಮಾಡಿಕೊಳ್ಳುತ್ತಿದ್ದಾರೆ. ಸ್ಯಾಂಡಲ್ ವುಡ್ ನ ದಿಗ್ಗಜರೆಲ್ಲಾ ಕಾಣಿಸಿಕೊಂಡಿರುವ ಈ ಚಿತ್ರ ಪುನೀತ್ ರಾಜ್ ಕುಮಾರ್ ಅವರ 25ನೇ ಸಿನಿಮಾ ಅನ್ನೋದು ವಿಶೇಷ.
ದುನಿಯಾ ಸೂರಿ ಅವರು ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ 'ದೊಡ್ಮನೆ ಹುಡ್ಗ' ಪುನೀತ್ ಅವರ ಅಭಿಮಾನಿಗಳಲ್ಲಿ ಮತ್ತು ಕನ್ನಡ ಸಿನಿ ಪ್ರಿಯರಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.
ಮಾತ್ರವಲ್ಲದೇ ಪುನೀತ್ ಅವರ 25ನೇ ಸಿನಿಮಾ ಆಗಿರೋದ್ರಿಂತ ಸಾಕಷ್ಟು ವಿಭಿನ್ನವಾಗಿ ಈ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಪುನೀತ್ ಅವರ ಬೃಹತ್ ಕಟೌಟ್ ಕೂಡ ಮುಖ್ಯ ಚಿತ್ರಮಂದಿರದ ಎದುರು ತಲೆ ಎತ್ತಲಿದೆ.
ಬಿಗ್ ಬಜೆಟ್ ನ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಮತ್ತು ರಾಧಿಕಾ ಪಂಡಿತ್ ಮತ್ತೆ ಒಂದಾಗಿದ್ದು, ರೆಬೆಲ್ ಸ್ಟಾರ್ ಅಂಬರೀಶ್, ಸುಮಲತಾ ಅಂಬರೀಶ್, ಭಾರತಿ ವಿಷ್ಣುವರ್ಧನ್, ರಂಗಾಯಣ ರಘು, ಸುನೀಲ್ ನಾಗಪ್ಪ, ಚಿಕ್ಕಣ್ಣ, ರವಿಶಂಕರ್ ಮುಂತಾದವರು ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.