Breaking News
recent

ಗಾಂಧಿನಗರದ ಎಲ್ಲಾ ಕಾರ್ಯಚಟುವಟಿಕೆ ಸಂಪೂರ್ಣ ಸ್ಥಗಿತ

ತಮಿಳು ನಾಡಿನಲ್ಲಿ ಕನ್ನಡಿಗರ ಮೇಲೆ ಹಲ್ಲೆ ಹಾಗೂ ಕಾವೇರಿ ನದಿ ನೀರು ಹಂಚಿಕೆ ವಿಷಯವಾಗಿ ಕರ್ನಾಟಕಕ್ಕೆ ಅನ್ಯಾಯ ಆಗುತ್ತಿರುವ ಹಿನ್ನಲೆಯಲ್ಲಿ ನಿನ್ನೆ (ಸೆಪ್ಟೆಂಬರ್ 12) ಬೆಂಗಳೂರಿನಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು.
naane next cm kannada movie songs download
ಬೆಂಗಳೂರಿನ ಮೂಲೆ ಮೂಲೆಯಲ್ಲೂ ಪ್ರಕ್ಷುಬ್ದ ವಾತಾವರಣ ಸೃಷ್ಟಿಯಾದ್ರಿಂದ, ರಾಜರಾಜೇಶ್ವರಿ ನಗರ, ಕೆಪಿ ಅಗ್ರಹಾರ, ಚಂದ್ರಾ ಲೇಔಟ್, ಕಾಮಾಕ್ಷಿಪಾಳ್ಯ, ಯಶವಂತಪುರ, ಜ್ಞಾನಭಾರತಿ, ವಿಜಯನಗರ ಸೇರಿದಂತೆ 16 ಪ್ರದೇಶಗಳಲ್ಲಿ ಇಂದು ಕರ್ಫ್ಯೂ ಜಾರಿ ಆಗಿದೆ.
ಹೀಗಾಗಿ, ಇಂದು ಇಡೀ ಬೆಂಗಳೂರು ಬಿಕೋ ಎನ್ನುತ್ತಿದೆ. ಅಂಗಡಿ-ಮುಂಗಟ್ಟುಗಳು ಕ್ಲೋಸ್ ಆಗಿವೆ. ಆಟೋ-ಬಸ್ ಸಂಚಾರ ಸ್ಥಗಿತಗೊಂಡಿದೆ. ಸಹಜವಾಗಿ ಚಿತ್ರ ಪ್ರದರ್ಶನ ಸೇರಿದಂತೆ ಗಾಂಧಿನಗರದ ಎಲ್ಲಾ ಕಾರ್ಯ ಚಟುವಟಿಕೆಗಳು ಬಂದ್ ಆಗಿವೆ. ಮುಂದೆ ಓದಿ.....

ಚಿತ್ರ ಪ್ರದರ್ಶನ ಇಲ್ಲ.!
ಗಾಂಧಿನಗರದ ಪ್ರಮುಖ ಚಿತ್ರಮಂದಿರಗಳು ಮಾತ್ರ ಅಲ್ಲ, ಬೆಂಗಳೂರಿನ ಎಲ್ಲಾ ಚಿತ್ರಮಂದಿರಗಳು ಇಂದು ಬಂದ್ ಆಗಿವೆ. ಚಿತ್ರ ಪ್ರದರ್ಶನ ಸಂಪೂರ್ಣ ಸ್ಥಗಿತಗೊಂಡಿದೆ.

ಮಲ್ಟಿಪ್ಲೆಕ್ಸ್ ಗಳಲ್ಲೂ ಇದೇ ಕಥೆ 
ಬೆಂಗಳೂರಿನ ಸೂಕ್ಷ್ಮ ಪ್ರದೇಶಗಳಲ್ಲಿ ಕರ್ಫ್ಯೂ ಜಾರಿ ಮಾಡಿರುವುದರಿಂದ ಪ್ರಮುಖ ಮಾಲ್ ಹಾಗೂ ಮಲ್ಟಿಪ್ಲೆಕ್ಸ್ ಗಳೂ ಕೂಡ ಬೀಗ ಜಡಿದಿವೆ. ಟಿಕೇಟ್ ಮೊದಲೇ ಬುಕ್ ಮಾಡಿದ ಕೆಲವರು ಮಾಲ್ ಗಳ ಮುಂದೆ ಕಾಯುತ್ತಿರುವ ದೃಶ್ಯವೂ ಕಂಡುಬಂದಿದೆ.

ಮಂಡ್ಯ-ಮೈಸೂರಿನಲ್ಲೂ ಇದೇ ಪರಿಸ್ಥಿತಿ 
ಕಾವೇರಿ ವಿವಾದದ ಕೇಂದ್ರಬಿಂದುವಾಗಿರುವ ಮಂಡ್ಯದಲ್ಲೂ ಕರ್ಫ್ಯೂ ಜಾರಿ ಆಗಿದೆ. ಪ್ರತಿಭಟನಾಕಾರರು ಕರ್ಫ್ಯೂ ಇದ್ದರೂ ಬೀದಿಗಳಿದು ಪ್ರತಿಭಟಿಸುತ್ತಿದ್ದಾರೆ. ಹೀಗಾಗಿ, ಅಲ್ಲೂ ಚಿತ್ರ ಪ್ರದರ್ಶನ ಇಲ್ಲ.

ಎಲ್ಲಾ ಪ್ರೆಸ್ ಮೀಟ್ ಕ್ಯಾನ್ಸಲ್
ನಟಿ ರಾಗಿಣಿ ದ್ವಿವೇದಿ ಅಭಿನಯದ 'ನಾನೇ ನೆಕ್ಸ್ಟ್ ಸಿ.ಎಂ' ಸೇರಿದಂತೆ ಇಂದು ನಡೆಯಬೇಕಾಗಿದ್ದ ಎಲ್ಲಾ ಸಿನಿಮಾ ಪ್ರೆಸ್ ಮೀಟ್ ಗಳೂ ಕೂಡ ಕ್ಯಾನ್ಸಲ್ ಆಗಿದೆ.

ಶೂಟಿಂಗ್ ಕೂಡ ಇಲ್ಲ?
ಬೆಂಗಳೂರು, ಮಂಡ್ಯ, ಮೈಸೂರು ಸುತ್ತಮುತ್ತ ನಡೆಯುತ್ತಿದ್ದ ಕನ್ನಡ ಚಿತ್ರಗಳ ಚಿತ್ರೀಕರಣ ಕೂಡ ನಿಲ್ಲಿಸಲಾಗಿದೆ. ಮೈಸೂರಿನಲ್ಲಿ ನಡೆಯುತ್ತಿದ್ದ ತಮಿಳು ಚಿತ್ರದ ಶೂಟಿಂಗ್ ಅನ್ನು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಬಲವಂತವಾಗಿ ನಿಲ್ಲಿಸಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.