Breaking News
recent

5 ರಾಷ್ಟ್ರ ಪ್ರಶಸ್ತಿ + 3 ರಾಜ್ಯ ಪ್ರಶಸ್ತಿ = ಇದೊಳ್ಳೆ ರಾಮಾಯಣ

ಪ್ರಕಾಶ್ ರೈ ನಿರ್ಮಿಸಿ, ನಿರ್ದೇಶಿಸಿ ಮತ್ತು ಅಭಿನಯಿಸಿರುವ 'ಇದೊಳ್ಳೆ ರಾಮಾಯಣ' ಚಿತ್ರ ಅಕ್ಟೋಬರ್ 7ರಂದು ಬಿಡುಗಡೆಯಾಗುತ್ತಿದೆ ಎಂಬ ಸುದ್ದಿ ಹೊಸದೇನಲ್ಲ. ಈಗಾಗಲೇ ಪ್ರಕಾಶ್ ರೈ ಚಿತ್ರದ ಪ್ರಚಾರ ಕೆಲಸವನ್ನು ಶುರು ಮಾಡುವುದಷ್ಟೇ ಅಲ್ಲ, ಬಿಡುಗಡೆಯ ದಿನಾಂಕವನ್ನೂ ಅನೌನ್ಸ್ ಮಾಡಿದ್ದಾರೆ.
Idolle Ramayana kannada movie


ಎಲ್ಲಾ ಸರಿ, 'ಇದೊಳ್ಳೆ ರಾಮಾಯಣ' ಚಿತ್ರದ ವಿಶೇಷತೆಯೇನು ಗೊತ್ತಾ? ಈ ಚಿತ್ರದಲ್ಲಿ ಐವರು ರಾಷ್ಟ್ರ ಪ್ರಶಸ್ತಿ ವಿಜೇತರು ಮತ್ತು ಮೂವರು ರಾಜ್ಯ ಪ್ರಶಸ್ತಿ ವಿಜೇತರು ಮೊದಲ ಬಾರಿಗೆ ಒಟ್ಟಾಗಿ ಕೆಲಸ ಮಾಡಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತರ ಪಟ್ಟಿಯಲ್ಲಿ ಪ್ರಕಾಶ್ ರೈ, ಪ್ರಿಯಾಮಣಿ, ಸಂಗೀತ ನಿರ್ದೇಶಕ ಇಳಯರಾಜ, ಕಲಾ ನಿರ್ದೇಶಕ ಶಶಿಧರ ಅಡಪ ಮತ್ತು ಸಂಕಲನಕಾರ ಶ್ರೀಕರ್ ಪ್ರಸಾದ್ ಇದ್ದಾರೆ. Idolle Ramayana (Mana Oori Ramayanam) Kannada Movie Teaser Download

ಇನ್ನು ರಾಜ್ಯ ಪ್ರಶಸ್ತಿ ವಿಜೇತರಲ್ಲಿ ನಟ ಅಚ್ಯುತ್ ಕುಮಾರ್, ಲೇಖಕ ಜೋಗಿ ಮತ್ತು ಗೀತರಚನೆಕಾರ ಜಯಂತ್ ಕಾಯ್ಕಿಣಿ ಇದ್ದಾರೆ. ಇದೆಲ್ಲಾ ಸೇರಿದರೆ, 'ಇದೊಳ್ಳೆ ರಾಮಾಯಣ' ಚಿತ್ರಕ್ಕೆ ದುಡಿದ ರಾಜ್ಯ ಮತ್ತು ರಾಷ್ಟ್ರಪ್ರಶಸ್ತಿ ವಿಜೇತರ ಸಂಖ್ಯೆ ಎಂಟಾಗುತ್ತದೆ.

'ಇದೊಳ್ಳೆ ರಾಮಾಯಣ' ಚಿತ್ರವು ಮಲಯಾಳಂನ 'ಶಟರ್' ಚಿತ್ರದ ರೀಮೇಕ್ ಆಗಿದ್ದು, ಈ ಚಿತ್ರವನ್ನು ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಾಣ ಮಾಡಿದ್ದಾರೆ ಪ್ರಕಾಶ್ ರೈ. ಕನ್ನಡದಲ್ಲಿ ಚಿತ್ರದ ಹೆಸರು 'ಇದೊಳ್ಳೆ ರಾಮಾಯಣ' ಆದರೆ, ತೆಲುಗಿನಲ್ಲಿ ಚಿತ್ರದ ಹೆಸರು 'ಮನ ಊರಿ ರಾಮಾಯಣಂ' ಎಂದಾಗಿದೆ. ಎರಡೂ ಚಿತ್ರಗಳು ಅಕ್ಟೋಬರ್ 7ರಂದು ಬಿಡುಗಡೆಯಾಗುತ್ತಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.