Breaking News
recent

ಬಿಗ್‍ಬಾಸ್ ಸೀಸನ್-4ನ ಸ್ಪರ್ಧಿಗಳು ಯಾರ್ಯಾರು ಗೊತ್ತಾ?

ಕನ್ನಡದ ಬಿಗ್ ಬಾಸ್ ಸೀಸನ್- 4 ಶೀಘ್ರದಲ್ಲೇ ಆರಂಭವಾಗಲಿದೆ. ಇದೇ ವರ್ಷ ಅಕ್ಟೋಬರ್‍ನಲ್ಲಿ ಬಿಗ್ ಬಾಸ್ ಆರಂಭವಾಗಲಿದೆ ಅಂತ ಹೇಳಲಾಗ್ತಿದೆ. ಕಾರ್ಯಕ್ರಮ ಶುರುವಾಗ್ತಿದೆ ಅಂದ್ಮೇಲೆ ಈ ಬಾರಿ ಯಾರ್ಯಾರು ಸ್ಫರ್ಧಿಗಳಾಗಿ ಬಿಗ್‍ಬಾಸ್ ಮನೆಗೆ ಬರ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ.
ಸ್ಯಾಂಡಲ್‍ವುಡ್‍ನ ಖ್ಯಾತ ನಾಮರ ಹೆಸರು ಬಿಗ್ ಬಾಸ್ ಸ್ಫರ್ಧಿಗಳ ಲಿಸ್ಟ್‍ನಲ್ಲಿದೆ. ತಿಥಿ ಚಿತ್ರದ ಗಡ್ಡಪ್ಪ ಪಾತ್ರಧಾರಿ ಚನ್ನೇಗೌಡ, ಹಾಸ್ಯ ನಟ ಕೋಮಲ್, ನಟಿ ಸುಧಾರಾಣಿ, ಅನುಪ್ರಭಾಕರ್, ಪ್ರಿಯಾ ಹಾಸನ್, ಹಿರಿಯ ನಟಿ ತಾರಾ, ಅರುಣ ಅರ್ಚನ, ತುಪ್ಪದ ಬೆಡಗಿ ರಾಗಿಣಿ, ಲೂಸ್ ಮಾದ ಯೋಗಿ, ತರುಣ್ ಹಾಗೂ ನವೀನ್ ಕೃಷ್ಣ ಹೆಸರು ಕೇಳಿಬರ್ತಿದೆ.

ಈ ಲಿಸ್ಟ್ ನಲ್ಲಿ ಅಂತಿಮವಾಗಿ ಬಿಗ್ ಬಾಸ್ ಮನೆಗೆ ಯಾರು ಎಂಟ್ರಿ ಕೊಡ್ತಾರೆ ಅನ್ನೋದು ಇನ್ನೂ ಫೈನಲ್ ಆಗಿಲ್ಲ.
Fresh Kannada

Fresh Kannada

No comments:

Post a Comment

Google+ Followers

Powered by Blogger.