Breaking News
recent

ವಿಮರ್ಶೆ: 'ಮುಂಗಾರು ಮಳೆ' ಅಮರ, 'ಮುಂಗಾರು ಮಳೆ-2' ಒಂಥರಾ.!

'ಮುಂಗಾರು ಮಳೆ' ಚಿತ್ರವನ್ನ ತಲೆಯಲ್ಲಿ ಇಟ್ಟುಕೊಂಡು ನೀವು 'ಮುಂಗಾರು ಮಳೆ-2' ಸಿನಿಮಾ ನೋಡಿದರೆ ನಿಮಗೆ 'ನಿರಾಸೆ' ಕಟ್ಟಿಟ್ಟ ಬುತ್ತಿ. Of Course, ಇದು 'ಮುಂಗಾರು ಮಳೆ' ಚಿತ್ರದ ಮುಂದುವರಿದ ಭಾಗ ಅಲ್ಲ.
mungaru male 2 reviews
ಆದ್ರೆ, ಅದೇ ಶೀರ್ಷಿಕೆಯನ್ನ ಎರಡನೇ ಬಾರಿ ಬಳಸಿರುವುದರಿಂದ ಈ ಸಿನಿಮಾದ ಬಗ್ಗೆ ಬೇಡ ಬೇಡ ಅಂದರೂ ಪ್ರೇಕ್ಷಕರ ನಿರೀಕ್ಷೆ ಮಟ್ಟ ತುಸು ಹೆಚ್ಚು ಇದ್ದೇ ಇರುತ್ತೆ. ಅದರ ಅರಿವು ನಿರ್ದೇಶಕ ಶಶಾಂಕ್ ಗೆ ಇದ್ದರೂ, ಆ ನಿರೀಕ್ಷೆಯನ್ನ ತಲುಪುವಲ್ಲಿ ಅವರು ಅಕ್ಷರಶಃ ಸೋತಿದ್ದಾರೆ.
ಇಂದು ವಿಶ್ವದಾದ್ಯಂತ ಬಿಡುಗಡೆ ಆಗಿರುವ 'ಮುಂಗಾರು ಮಳೆ-2' ಚಿತ್ರದ ಸಂಪೂರ್ಣ ವಿಮರ್ಶೆ ಓದಿರಿ.....
ಚಿತ್ರ : ಮುಂಗಾರು ಮಳೆ-2
ನಿರ್ಮಾಣ : ಜಿ.ಗಂಗಾಧರ್
ಕಥೆ, ನಿರ್ದೇಶನ : ಶಶಾಂಕ್
ಸಂಗೀತ : ಅರ್ಜುನ್ ಜನ್ಯ
ಛಾಯಾಗ್ರಹಣ : ಶೇಖರ್ ಚಂದ್ರ
ಸಂಕಲನ : ಕೆ.ಎಂ.ಪ್ರಕಾಶ್
ತಾರಾಗಣ : ಗಣೇಶ್, ರವಿಚಂದ್ರನ್, ನೇಹಾ ಶೆಟ್ಟಿ, ರವಿಶಂಕರ್, ಐಂದ್ರಿತಾ ರೇ, ಸಾಧು ಕೋಕಿಲ ಮತ್ತು ಇತರರು
ಬಿಡುಗಡೆ ದಿನಾಂಕ : ಸೆಪ್ಟೆಂಬರ್ 10, 2016

1. ಬದಲಾಗಿರುವ ಪ್ರೀತಂ 
ಉನ್ಮಾದ (ಎಕ್ಸೈಟ್ ಮೆಂಟ್) ಸಿಗ್ಲಿಲ್ಲ ಅಂದ್ರೆ ಪ್ರೀತಂ (ಗಣೇಶ್)ಗೆ ಬೋರ್ ಆಗುತ್ತೆ. ಹಾಗೆ ಗರ್ಲ್ ಫ್ರೆಂಡ್ಸ್ ಕೂಡ ಬೋರ್ ಆದ್ರೆ ತಕ್ಷಣವೇ ಬ್ರೇಕ್ ಅಪ್ ಮಾಡಿಕೊಳ್ಳುವ ಪ್ರೀತಂ ಹೈಫೈ ಹುಡುಗ. ತಿಂಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡುವ, ಯಾವಾಗಂದ್ರೆ ಆಗ ಮನಸ್ಸು ಬದಲಾಯಿಸುವ ಕನ್ ಫ್ಯೂಸ್ಡ್ ಯುವಕ.

2. ಬದಲಾಗಿರುವ ನಂದಿನಿ
ಶ್ರೇಯಾ (ಐಂದ್ರಿತಾ ರೇ) ಮತ್ತು ಶಿಲ್ಪಾ (ಶಿಲ್ಪಾ ಮಂಜುನಾಥ್) ಬೋರ್ ಆಗಿ, ಅವರಿಂದ ಬ್ರೇಕ್ ಅಪ್ ಆದ್ಮೇಲೆ ಪ್ರೀತಂ ಕಣ್ಣಿಗೆ ಬೀಳುವುದು ನಂದಿನಿ (ನೇಹಾ ಶೆಟ್ಟಿ). ಗುರುತು ಪರಿಚಯವಿಲ್ಲದ ನಂದಿನಿ ಜೊತೆ ಇಡೀ ರಾಜಸ್ಥಾನ ಸುತ್ತಾಡಿ, ಕೊನೆಗೆ ಆಕೆ ರಾತ್ರೋ ರಾತ್ರಿ ಎಸ್ಕೇಪ್ ಆದ್ಮೇಲೆ ಪ್ರೀತಂಗೆ ನಿಜವಾದ ಪ್ರೀತಿಯ ದರ್ಶನ ಮಾಡಿಸುವುದು ಆತನ ಅಪ್ಪ (ರವಿಚಂದ್ರನ್).

3. ನಂದಿನಿ ಸಿಗುತ್ತಾಳಾ?
ನಂದಿನಿಗಾಗಿ ಹುಡುಕಾಟ ನಡೆಸುವ ಪ್ರೀತಂಗೆ ಆಕೆ ಸಿಗುತ್ತಾಳಾ? ಸಿಕ್ಕರೂ ಪ್ರೀತಂ ಪ್ರೀತಿಗೆ ನಂದಿನಿ ಒಪ್ಪಿಕೊಳ್ಳುತ್ತಾಳಾ? ಇಲ್ಲೂ ಟ್ರಾಜೆಡಿ ಎಂಡಿಂಗ್ ಇದ್ಯಾ ಎಂಬ ಕುತೂಹಲ ಇದ್ದರೆ, ನೀವು ಸಿನಿಮಾ ನೋಡಿ....

4. ಗಣೇಶ್ ನಟನೆ ಹೇಗಿದೆ?
ಅಪ್ಪನ ಮುದ್ದು ಮಗನಾಗಿ, ಉನ್ಮಾದ ಹುಡುಕುವ ಹುಡುಗನಾಗಿ ಗಣೇಶ್ ನಟನೆ ಎಂದಿನಂತಿದೆ.

5. ನೇಹಾ ಶೆಟ್ಟಿ ಸೂಪರ್ 
ಗೊತ್ತು-ಗುರಿಯಿಲ್ಲದ ಹುಡುಗನ ಜೊತೆ ಸೇಫ್ ಆಗಿರಲು ಮೂರು 'ಬಿಸ್ಕೆಟ್' ಎಸೆದು, ಬುಲೆಟ್ ಓಡಿಸುವ ಬೋಲ್ಡ್ ಗರ್ಲ್ ಆಗಿ ನಿರೀಕ್ಷೆಗೂ ಮೀರಿದ ಪರ್ಫಾಮೆನ್ಸ್ ನೀಡಿದ್ದಾರೆ ನೇಹಾ ಶೆಟ್ಟಿ. ತಮ್ಮ ಅಭಿನಯ ಮತ್ತು ಡ್ಯಾನ್ಸ್ ನಿಂದ ಚೊಚ್ಚಲ ಚಿತ್ರದಲ್ಲೇ ನೇಹಾ ಶೆಟ್ಟಿ ಗಮನ ಸೆಳೆಯುತ್ತಾರೆ.

6. ರವಿಚಂದ್ರನ್ ಇಷ್ಟ ಆಗ್ತಾರೆ
ಪ್ರೀತಂ ಅಪ್ಪ ಸೂರ್ಯಕಾಂತ್ ಪಾತ್ರದಲ್ಲಿ ರವಿಚಂದ್ರನ್ ರವರದ್ದು ವಯಸ್ಸಿಗೆ ತಕ್ಕ ಪಾತ್ರ. ಮಗನ ಪ್ರೀತಿ ಉಳಿಸಲು ಸಾಧ್ಯವಾಗದ ಅಸಹಾಯಕ ತಂದೆಯಾಗಿ ರವಿಚಂದ್ರನ್ ನಟನೆ ಮನಮುಟ್ಟುತ್ತೆ.

7. ಉಳಿದವರ ಕಥೆ
ಉಳಿದಂತೆ ರವಿಶಂಕರ್, ಸಾಧು ಕೋಕಿಲ, ತಬಲಾ ನಾಣಿ ಕೊಟ್ಟ ಪಾತ್ರಗಳನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಐಂದ್ರಿತಾ ರೇ, ಶಿಲ್ಪಾ ಮಂಜುನಾಥ್, ಶ್ರದ್ಧಾ ಶ್ರೀನಾಥ್ ಹೀಗೆ ಬಂದು ಹಾಗೆ ಹೋಗ್ತಾರೆ.

8. ಫಸ್ಟ್ ಹಾಫ್ ನಲ್ಲಿ ಬರಗಾಲ! 
'ಮುಂಗಾರು ಮಳೆ-2' ಚಿತ್ರದ ಮೊದಲಾರ್ಧದಲ್ಲಿ ಸಂಪೂರ್ಣ ಬರಗಾಲ. ಸುಡುವ ಬಿಸಿಲಿನಲ್ಲಿ ಕುಳಿತವರಂತೆ ಪ್ರೇಕ್ಷಕರು ಕಿರಿಕಿರಿ ಅನುಭವಿಸುವುದೇ ಹೆಚ್ಚು.

9. ಪ್ರೀತಂಗಲ್ಲ, ಪ್ರೇಕ್ಷಕರಿಗೆ ಬೋರ್ ಆಯ್ತು.! 
'ಎಕ್ಸೈಟ್ ಮೆಂಟ್ ಬೇಕು, ನೀನ್ಯಾಕೋ ಬೋರ್ ಆಗ್ತಿದ್ಯಾ' ಅಂತ ಹುಡುಗಿಯರಿಂದ ಬ್ರೇಕ್ ಅಪ್ ಮಾಡಿಕೊಳ್ಳುವ ಪ್ರೀತಂ ಫಸ್ಟ್ ಹಾಫ್ ಸ್ಟೋರಿ ಪ್ರೇಕ್ಷಕರಿಗಂತೂ ''ಮೈ ಪರ ಪರ ಅಂತ ಪರಚಿಕೊಳ್ಳುವ ಹಾಗೆ'' ಆದ್ರೆ ಅಚ್ಚರಿ ಇಲ್ಲ.

10. ಫೀಲ್ ಇಲ್ಲ.! 
'ಮುಂಗಾರು ಮಳೆ-2' ಚಿತ್ರದ ಫ್ರೇಮ್ ಟು ಫ್ರೇಮ್ ನಲ್ಲಿ ರಿಚ್ನೆಸ್ ಇದೆ. ಆದ್ರೆ, ಎಲ್ಲವೂ ತೂತು ಮಡಿಕೆಯಂತೆ. ಇಡೀ ಸಿನಿಮಾ ಕಲರ್ ಫುಲ್ ಆಗಿ ಕಂಡರೂ, ಫೀಲ್ ಇಲ್ಲ. 'ಬದಲಾಗಿರುವ ಪ್ರೀತಂ-ನಂದಿನಿ ಪ್ರೇಮ್ ಕಹಾನಿ' ಮನಮುಟ್ಟುವುದು ಕಷ್ಟ ಸಾಧ್ಯ.

11. ಪ್ರೇಕ್ಷಕರನ್ನ ಫೂಲ್ ಮಾಡೋದಾ?
ನಂದಿನಿ ಅಡ್ರೆಸ್ ಸಿಕ್ಕ ಕೂಡಲೆ ಆಕೆಯನ್ನ ಭೇಟಿ ಆಗಲು ಪ್ರೀತಂ ಹೊರಡುತ್ತಾನೆ. ಕಟ್ ಮಾಡಿದ್ರೆ, ಪೂರ್ತಿ ಸ್ನೋ ಆವರಿಸಿರುವ ಫಾರಿನ್ ರಸ್ತೆಯಲ್ಲಿ 'ಸರಿಯಾಗಿ ನೆನಪಿದೆ ನನಗೆ...' ಅಂತ ಕೆಂಪು ಕಾರಲ್ಲಿ ಕುಳಿತು ಹಾಡುವ ಪ್ರೀತಂ, ಹಾಡು ಮುಗಿದ ಕೂಡಲೆ ನೇರವಾಗಿ ಲ್ಯಾಂಡ್ ಆಗುವುದು ಹಸಿರು ತುಂಬಿ ತುಳುಕುವ ಮಡಿಕೇರಿಯಲ್ಲಿ.! ಬೆಂಗಳೂರಿನಿಂದ ಮಡಿಕೇರಿಗೆ ಹೋಗುವ ದಾರಿಯಲ್ಲಿ ಪ್ರೀತಂಗೆ ಸ್ನೋ ಸಿಟಿ (ಫಾರಿನ್) ಎಲ್ಲಿ ಸಿಕ್ತೋ, ದೇವರೇ ಬಲ್ಲ.! ಜೊತೆಗೆ ಕಾರ್ ಕೂಡ ಬದಲಾಗಿರುತ್ತದೆ. ಅದು ಡ್ರೀಮ್ ಸಾಂಗ್ ಅಂದುಕೊಳ್ಳೋಣ ಅಂದ್ರೂ ಕ್ಲಾರಿಟಿ ಇಲ್ಲ, ಕನ್ಟಿನ್ಯೂಟಿ ಕೂಡ ಇಲ್ಲ.

12. ಕ್ಯಾಮರಾ ಕೈಚಳಕ
ಇಡೀ ಚಿತ್ರದ ಪ್ಲಸ್ ಪಾಯಿಂಟ್ ಅಂದ್ರೆ ಕ್ಯಾಮರಾ ವರ್ಕ್. ಸ್ಲೋವೇನಿಯಾ ಹಾಗೂ ಮಡಿಕೇರಿಯ ಕಣ್ಣು ಕೋರೈಸುವ ತಾಣಗಳನ್ನ ಸುಂದರವಾಗಿ ಚಿತ್ರೀಕರಿಸಿದ್ದಾರೆ ಛಾಯಾಗ್ರಾಹಕ ಶೇಖರ್ ಚಂದ್ರ.

13. ಹಾಡುಗಳು ಮೋಸ ಇಲ್ಲ.! 
ಅರ್ಜುನ್ ಜನ್ಯ ಸಂಗೀತ ನೀಡಿರುವ ಹಾಡುಗಳು ಚೆನ್ನಾಗಿವೆ. 'ಸರಿಯಾಗಿ ನೆನಪಿದೆ ನನಗೆ...' ಹಾಗೂ 'ಗಮನಿಸು ಒಮ್ಮೆ ನೀ...' ಹಾಡುಗಳು ಗುನುಗುವಂತಿದೆ. ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಸಾಧಾರಣ.

14. ಶೀರ್ಷಿಕೆ ಬೇರೆ ಇಟ್ಟಿದ್ರೆ...
ಬಹುಶಃ ಇದೇ ಚಿತ್ರಕ್ಕೆ ಬೇರೆ ಶೀರ್ಷಿಕೆ ಇಟ್ಟಿದ್ರೆ, ಹೊಸ ಸಿನಿಮಾ ಅಂತ ಪ್ರೇಕ್ಷಕರು ನೋಡ್ತಿದ್ರೋ ಏನೋ....ಆದ್ರೆ, 'ಮುಂಗಾರು ಮಳೆ' ಹೆಸರಿಟ್ಟು ಚಿತ್ರತಂಡ ದೊಡ್ಡ ಎಡವಟ್ಟು ಮಾಡಿಕೊಂಡಂತಿದೆ.

15. ಸೆಕೆಂಡ್ ಹಾಫ್ ನಲ್ಲಿ ಮಳೆ 
ಮಳೆ ಶುರು ಆಗುವುದೇ ಸೆಕೆಂಡ್ ಹಾಫ್ ನಲ್ಲಿ. ಪ್ರೇಕ್ಷಕರು ಎಕ್ಸೈಟ್ ಆಗುವ ಹೊತ್ತಿಗೆ ರಬ್ಬರ್ ಎಳೆದ ಅನುಭವ ಶುರು ಆಗುತ್ತೆ. ಅಪಘಾತ, ಪವಾಡ ಸದೃಶ್ಯ ರೀತಿಯಲ್ಲಿ ಪಾರು, ಫ್ಯಾಮಿಲಿ ಡ್ರಾಮಾ, ಕೊನೆಗೆ.....ಹ್ಯಾಪಿ ಎಂಡಿಂಗ್ ಇದ್ದರೂ ಶಾಕ್ ಮತ್ತು ಡಬಲ್ ಶಾಕ್.! ಎಲ್ಲವನ್ನ ಸಹಿಸಿಕೊಳ್ಳವ ತಾಳ್ಮೆ ಪ್ರೇಕ್ಷಕರಿಗೆ ಇರಬೇಕು.
Fresh Kannada

Fresh Kannada

No comments:

Post a Comment

Google+ Followers

Powered by Blogger.