Breaking News
recent

ಮುಂಗಾರು ಮಳೆ-2 ಅಲ್ಲ, ಮುಂಗಾರು ಮಳೆ 'ಥೂ' ಅಂತಿದ್ದಾರೆ ಪ್ರೇಕ್ಷಕರು

10 ವರ್ಷದ ಹಿಂದೆ ಜೋರಾಗಿ ಆರ್ಭಟಿಸಿ ಸುರಿದಿದ್ದ ಮಳೆಗೆ ಇಡೀ ಸ್ಯಾಂಡಲ್ ವುಡ್ ಥರಥರ ನಡುಗಿದ್ದು ಇತಿಹಾಸ. ಇದೀಗ ಇಂದು ಕೂಡ ಅದೇ ಹಳೇ ಇತಿಹಾಸ ಮರುಕಳಿಸುತ್ತೋ ಇಲ್ವೋ ಅಂತ ತಿಳಿದುಕೊಳ್ಳುವ ಕಾಲ ಬಂದಿದೆ.
mungaru male 2 reviews
mungaru male 2 reviews
ಇಂದು 'ಮುಂಗಾರು ಮಳೆ 2' ವಿದೇಶದಲ್ಲಿ ಸೇರಿದಂತೆ ಇಡೀ ಕರ್ನಾಟಕದಾದ್ಯಂತ ಗ್ರ್ಯಾಂಡ್ ಆಗಿ ತೆರೆ ಕಂಡಿದೆ. ಈಗಾಗಲೇ ಫಸ್ಟ್ ಡೇ, ಫಸ್ಟ್ ಶೋ ನೋಡಿದ ಕನ್ನಡ ಸಿನಿಪ್ರಿಯರು, ಅಭಿಮಾನಿಗಳು ಮತ್ತು ವಿಮರ್ಶಕರು ಟ್ವಿಟ್ಟರ್ ನಲ್ಲಿ ವಿಮರ್ಶೆ ಕೊಡುತ್ತಿದ್ದಾರೆ.[ಕಾವೇರಿ ವಿವಾದ: ತಮಿಳರಿಗಿಲ್ಲ 'ಮುಂಗಾರು ಮಳೆ 2' ನೋಡೋ ಭಾಗ್ಯ]
ಕೆಲವರು ಆ ಸಿನಿಮಾಗೂ, ಈ ಸಿನಿಮಾಗೂ ಹೋಲಿಸಿದರೆ, ಇದು ಅಷ್ಟೊಂದು ರೋಮಾಂಚನಕಾರಿ ಅನಿಸೋದಿಲ್ಲ, ಸ್ವಲ್ಪ ಬೋರಿಂಗ್ ಇದೆ ಎಂದರೆ, ಇನ್ನು ಕೆಲವರು ಬರೀ ಹಾಡುಗಳನ್ನಷ್ಟೇ ಮೆಚ್ಚಿಕೊಂಡಿದ್ದಾರೆ.
ಟ್ವಿಟ್ಟರ್ ನಲ್ಲಿ ಯಾರು, ಏನೇನು ವಿಮರ್ಶೆ/ಕಾಮೆಂಟ್ ಕೊಟ್ಟಿದ್ದಾರೆ ಅನ್ನೋದನ್ನ ನೋಡೋಣ, ಮುಂದೆ ಓದಿ.....

1. ಕಪಾಲಿಯಲ್ಲಿ 'ಮುಂಗಾರು ಮಳೆ 2'
ಬೆಂಗಳೂರಿನ ಮುಖ್ಯ ಚಿತ್ರಮಂದಿರ 'ಕಪಾಲಿ'ಯಲ್ಲಿ 'ಮುಂಗಾರು ಮಳೆ 2' ಭರ್ಜರಿಯಾಗಿ ತೆರೆ ಕಂಡಿದೆ. ಚಿತ್ರದಲ್ಲಿ ನೇಹಾ ಶೆಟ್ಟಿ ಅವರು ಇದೇ ಮೊದಲ ಬಾರಿಗೆ ಗಣೇಶ್ ಅವರ ಜೊತೆ ಡ್ಯುಯೆಟ್ ಹಾಡುವ ಮೂಲಕ ಬಿಗ್ ಸ್ಕ್ರೀನ್ ಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ನುಳಿದಂತೆ ರವಿಚಂದ್ರನ್, ಐಂದ್ರಿತಾ ರೇ, ಶ್ರದ್ಧಾ ಶ್ರೀನಾಥ್, ರವಿಶಂಕರ್ ಮುಂತಾದವರು ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.

2. ವಿಕಾಸ್ ಕೆ.ಎಸ್
ನಿರೀಕ್ಷೆಗಳನ್ನು ಭೇಟಿ ಮಾಡಿಸುವಲ್ಲಿ 'ಮುಂಗಾರು ಮಳೆ 2' ಸಫಲವಾಗಿದೆ. ಚೆನ್ನಾಗಿದೆ. ನೋಡಬಹುದಾದ ಸಿನಿಮಾ. ರೇಟಿಂಗ್: 4/5. ಆದ್ರೂ ಮೊದಲ ಪ್ರೀತಿ ಚೆನ್ನ ಎನ್ನುವಂತೆ, ಮೊದಲ ಮಳೆ 'ಮುಂಗಾರು ಮಳೆ' ಯಾವಾಗಲೂ ಚೆಂದಚೇ ಚೆಂದ. ಮೊದಲ ಶೋ ನೋಡಿದ ಪ್ರೇಕ್ಷಕ ವಿಕಾಸ್ ಅವರ ಅಭಿಪ್ರಾಯ.

3. ದಿಗಂತ್ ಪ್ರಣವ್ 
'ಶಶಾಂಕ್ ಅವರಿಗೆ ನಾಚಿಕೆಯಾಗಬೇಕು...ಥೂ ನಿನ್ ಮಕಕ್ಕೆ..ಎಂತಹ ನಿರ್ದೇಶಕ ನೀನು..ಮುಂಗಾರು ಮಳೆ ಸೀಕ್ವೆಲ್ ಹಾಳು ಮಾಡಿದ್ದಿ. ತುಂಬಾ ಬೋರಿಂಗ್ ಸಿನಿಮಾ..ಎಂತ ನಿರ್ದೇಶಕ ನೀನು...ಕಚಡಾ ಸಿನಿಮಾ...ತುಂಬಾ ದಿನಗಳ ಬಳಿಕ ಬಂದ ಅತ್ಯಂತ ಕೆಟ್ಟ ಸಿನಿಮಾ'. -ಪ್ರೇಕ್ಷಕ ದಿಗಂತ್ ಪ್ರಣವ್ ಟ್ವೀಟ್.

4. ಸಿನಿಲೋಕ 
'ಮಧ್ಯಂತರ. ರೋಮಾಂಚನಕಾರಿ ಏನಿಲ್ಲ. ಹಾಡುಗಳು ಕೊಂಚ ರಿಲೀಫ್ ಕೊಡುತ್ತವೆ.

5. ಎಸ್ ಶ್ಯಾಮ್ ಪ್ರಸಾದ್ 
'ಇನ್ನೂ ಕೂಡ ರೋಮಾಂಚನಕಾರಿ ಸನ್ನಿವೇಶಕ್ಕೆ ಕಾಯುತ್ತಲೇ ಇದ್ದೇನೆ..ಉನ್ಮಾದ'. ಹೀಗೆ ವಿಮರ್ಶಕ ಎಸ್ ಶ್ಯಾಮ್ ಪ್ರಸಾದ್ ಟ್ವೀಟ್ ಮಾಡಿದ್ದಾರೆ.

6. ಕನ್ನಡ ಮೂವಿ ಫ್ಯಾನ್ಸ್ 
'ಮುಂಗಾರು ಮಳೆ' ಫಸ್ಟ್ ಹಾಫ್, ತುಂಬಾ ಉದ್ದವಾದ ಹಾಗೂ ಪ್ರೀತಿ ತುಂಬಿದ, ಜೊತೆ-ಜೊತೆಗೆ ಟ್ವಿಸ್ಟ್ ವುಳ್ಳ ಪಯಣ. ಓಲ್ಡ್ ಈಸ್ ಗೋಲ್ಡ್ ಅನ್ನೋ ಭಾವನೆ ಮೂಡುತ್ತಿದೆ'.

7. ಚಿರಂತನ್ 
'ಇದೇ ವಿಷಯವನ್ನು ಇಟ್ಟುಕೊಂಡು ನಾನೇ ಒಳ್ಳೆ ಸಿನಿಮಾ ಮಾಡುತ್ತಿದ್ದೆ. 'ಮುಂಗಾರು ಮಳೆ' ಅಂತ ಬ್ರ್ಯಾಂಡ್ ಹೆಸರು ಇಟ್ಟುಕೊಂಡಿದ್ದಕ್ಕೆ ನಾಚಿಕೆ ಆಗಬೇಕು. ಶಶಾಂಕ್ ನಿಮಗೆ ನಾಚಿಕೆ ಆಗಬೇಕು' ಸಿನಿಪ್ರಿಯ ಚಿರಂತನ್ ಟ್ವೀಟ್.

8. ಶಶಿಪ್ರಸಾದ್ ಎಸ್.ಎಂ 
'ಮುಂಗಾರು ಮಳೆ 2', ಮಳೆ ಶುರುವಾಗಿದೆ, ಮೊಲ ಇನ್ನು ಸಿಕ್ಕಿಲ್ಲ. ಮಧ್ಯಂತರ ಮತ್ತೆ ಮಳೆ ಬರುತ್ತಿದೆ. ತುಂಬಾ ರೋಮಾಂಚನಕಾರಿ ಅನಿಸುತ್ತಿಲ್ಲ. ತುಂಬಾ ಮ್ಯೂಸಿಕ್ ಮತ್ತು ಹಿನ್ನಲೆ ಸಂಗೀತವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ' ವಿಮರ್ಶಕ.

9. ಡಿಡಿಎಲ್ ಜೆ ನೆನಪಿಸುತ್ತದೆ 
'ಶಾರುಖ್ ಮತ್ತು ಕಾಜೋಲ್ ಅವರ 'ಡಿಡಿಎಲ್ ಜೆ' ನೆನಪಿಸುವ ರೈಲಿನ ದೃಶ್ಯ, ಜೊತೆಗೆ ಟ್ವಿಸ್ಟ್ ಬೇರೆ. ಚೈನ್ ಎಳೆದು ರೈಲು ನಿಲ್ಲಿಸಲಾಗಿದೆ. ಆದರೆ ಇದು ಮುಂಗಾರು ಮಳೆ 2'.-ವಿಮರ್ಶಕ ಶಶಿಪ್ರಸಾದ್ ಎಸ್.ಎಂ.

10. ಹ್ಯಾಪಿ ಎಂಡಿಂಗ್ 
'ಮುಂಗಾರು ಮಳೆ 2' ಹ್ಯಾಪಿ ಎಂಡಿಂಗ್. ಆದ್ದರಿಂದ ದೊಡ್ಡ ನಿಟ್ಟುಸಿರು, ಯಾಕೆಂದರೆ ಇನ್ನು 'ಮುಂಗಾರು ಮಳೆ 3' ಮಾಡುವ ಯೋಚನೆ ಇಲ್ಲ ಅಂತ. ಪ್ರೇಮಿಗಳಿಗೆ ಪಾಠ, ಯಾವಾಗಲೂ ಸೀಟ್ ಬೆಲ್ಟ್ ಧರಿಸಿ ಪ್ರಯಾಣಿಸಿ'. -ವಿಮರ್ಶಕ ಶಶಿಪ್ರಸಾದ್.

11. ಕನ್ನಡ ಮೂವೀಸ್ 
'ಮುಂಗಾರು ಮಳೆ 2' ಸಂಪೂರ್ಣ ದೃಶ್ಯಗಳ ಟ್ರೀಟ್, ರೇಟಿಂಗ್: 3.5/5.
Fresh Kannada

Fresh Kannada

No comments:

Post a Comment

Google+ Followers

Powered by Blogger.