Breaking News
recent

ನಿಶ್ಚಿತಾರ್ಥದ ವಜ್ರದುಂಗುರಕ್ಕೆ ಯಶ್ ಫೆವಿಕಾಲ್

ಅಂತೂ-ಇಂತೂ 'ರಾಕಿಂಗ್' ಜೋಡಿಯ ನಿಶ್ಚಿತಾರ್ಥ ಗಣ್ಯಾತೀ ಗಣ್ಯರ ಸಮ್ಮುಖದಲ್ಲಿ ಸಂಪನ್ನವಾಗಿದೆ. 'ನವ ವಧುವಿನಂತೆ' ಕಂಗೊಳಿಸುತ್ತಿದ್ದ ಗೋವಾ ಪಣಜಿಯ ತಾಜ್ ವಿವಾಂತ ಹೋಟೆಲ್ ನ ಹೂವಿನ ಮಂಟಪದಲ್ಲಿ ರಾಕಿಂಗ್ ಸ್ಟಾರ್ ಯಶ್ ಮತ್ತು ಸ್ಯಾಂಡಲ್ ವುಡ್ ಪ್ರಿನ್ಸಸ್ ರಾಧಿಕಾ ಪಂಡಿತ್ ಎಂಗೇಜ್ ಆಗಿದ್ದಾರೆ.
X yash radhika engage
yash radhika

ಜೀವನದಲ್ಲಿ ಒಂದೇ ಬಾರಿ ಬರುವ ಈ ಸುಮಧುರ ಕ್ಷಣವನ್ನು ಮಿಸ್ ಮಾಡಿಕೊಳ್ಳಲು ಬಯಸದ, ಯಶ್ ಮತ್ತು ರಾಧಿಕಾ ಅವರು ತಮ್ಮಿಷ್ಟದಂತೆ ನಿಶ್ಚಿತಾರ್ಥ ವೇದಿಕೆ ಸಿದ್ಧಪಡಿಸಿದ್ದಾರೆ. ತಾವಿಬ್ಬರು ಏನೂ ಅಂದುಕೊಂಡಿದ್ದರೋ ಅದೇ ತರ ಪರಸ್ಪರ ವಜ್ರದುಂಗರ ಬದಲಾಯಿಸಿಕೊಳ್ಳುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಅಂದಹಾಗೆ ಯಶ್ ಅವರಿಗೆ ರಾಧಿಕಾ ಪಂಡಿತ್ ಅವರು ಉಂಗುರ ತೊಡಿಸಿದ ನಂತರ, "ಈ ಉಂಗುರವನ್ನು ಯಾವತ್ತಿಗೂ ತೆಗಿಲೇಬಾರದು ಅಂತ ಆರ್ಡರ್ ಬೇರೆ ಮಾಡಿದ್ದಾರೆ. ಅದಕ್ಕೆ ಯಶ್ ಅವರು ಕೂಡ ಹೋ ಹೋ..ಆಯ್ತು, ಆಯ್ತು ಫೆವಿಕಾಲ್ ಹಾಕಿ ಅಂಟಿಸಿಕೊಳ್ಳುತ್ತೇನೆ" ಎಂದಿದ್ದಾರೆ.
(Annthamma Happy Version Kannada Song Download)
ಇದನ್ನು ಕಂಡಾಗ, ಇವರಿಬ್ಬರು ಎಷ್ಟು ಚೆಂದದ ಜೋಡಿ, ಮುಂದೆ ಎಷ್ಟು ಅನ್ಯೋನ್ಯವಾಗಿರಬಹುದು ಅಂತ ಒಂದ್ಸಾರಿ ಎಲ್ಲರ ಮನಸ್ಸಿಗೆ ಬರೋದು ಖಂಡಿತ. ಇವರಿಬ್ಬರದು ಅನ್ ಸ್ಕ್ರೀನ್ ಕೆಮಿಸ್ಟ್ರಿ ಬಗ್ಗೆ ಈಗಾಗಲೇ ಎಲ್ಲರಿಗೂ ಗೊತ್ತೇ ಇದೆ. ಹಾಗೆ ಆಫ್ ಸ್ಕ್ರೀನ್ ನಲ್ಲೂ ಇವರು ತುಂಬಾ ಮುದ್ದು-ಮುದ್ದಾಗಿ ವರ್ತಿಸುತ್ತಾರೆ. ಮಾತ್ರವಲ್ಲದೇ ಇವತ್ತು ನಿಶ್ಚಿತಾರ್ಥ ಆದ ಕೂಡಲೇ ಯಶ್ ಅವರು ರಾಧಿಕಾ ಅವರನ್ನು ಎತ್ತಿಕೊಂಡು ಬಂದು ಅಭಿಮಾನಿಗಳಿಗೆ ಮೀಟ್ ಮಾಡಿಸಿದ್ದಾರೆ. ನಂತರ ಅಭಿಮಾನಿಗಳತ್ತ ಇಬ್ಬರು ಕೈ ಬೀಸಿ ನಮಸ್ಕರಿಸುವ ಮೂಲಕ ಮುಖ ತೋರಿಸಿ ವಾಪಸಾಗಿದ್ದಾರೆ.

ಇವಾಗ್ಲೆ ರಾಧಿಕಾ ಅವರನ್ನು ಯಶ್ ಇಷ್ಟು ಜೋಪಾನ ಮಾಡ್ತಾರೆ ಅಂತಾದ್ರೆ, ಇನ್ನು ಜೀವನ ಪೂರ್ತಿ ಅದ್ಯಾವ ರೀತಿ ನೋಡಿಕೊಳ್ಳಬಹುದು ಅಲ್ವಾ.?. ಅದೇನೇ ಇರಲಿ ಒಟ್ನಲ್ಲಿ ಮುದ್ದಾದ ಜೋಡಿ ಇಂದು ಅಧೀಕೃತವಾಗಿ ರಿಂಗ್ ಬದಲಾಯಿಸಿಕೊಂಡಿದ್ದು, ಸಾವಿರಾರು ಅಭಿಮಾನಿಗಳ ಖುಷಿಗೆ ಕಾರಣವಾಗಿದೆ.

ಇನ್ನು ನಿರ್ದೇಶಕ ಯೋಗರಾಜ್ ಭಟ್ ಅವರು ಇವರಿಬ್ಬರಿಗಾಗಿ ಒಂದು ಹಾಡನ್ನೇ ಬರೆದಿದ್ದಾರೆ. ಅಣ್ತಮ್ಮ ಹಾಡಿನ ಟ್ಯೂನ್ ಬಳಸಿಕೊಂಡು 'ರಂಗೂ ರಂಗೂ ಎಂಗೇಜ್ಮೆಂಟು, ಕೊನೆಗೂ ಮಾಡ್ಕೊಂಡು ಬಿಟ್ಟ ಅಣ್ತಮ್ಮ'..ಅಣ್ತಮ್ಮ.., ಹೂವಿನಂತ ಹುಡುಗಿ ಕೈಗೆ ಉಂಗುರ ತೊಡಿಸಿಬಿಟ್ಟ...ಅಣ್ತಮ್ಮ..ಅಣ್ತಮ್ಮ...'ಸಾವ್ರ ವರ್ಷದಿಂದ ಪ್ರೀತ್ಸೋರು ಒಬ್ರನೊಬ್ರು, ನೋಡಗಂಟ ನೋಡಿ ಉಂಗುರ ಹಾಕ್ಕೊಂಡು ಬಿಟ್ರು.., ಜೋಡಿ ಏಕ್ದಂ ಸೂಪರ್', ಅಂತ ಭಟ್ರು ಸೂಪರ್-ಡೂಪರ್ ಆಗಿ ನವ ಜೋಡಿಗೆ ಒಂದು ಹಾಡನ್ನೇ ಬರೆದರು. ಇದಕ್ಕೆ ಯಶ್ ಮತ್ತು ರಾಧಿಕಾ ಫುಲ್ ಖುಷ್ ಆದ್ರು ಅಂತ ನಾವು ಬೇರೆ ಹೇಳಬೇಕಿಲ್ಲ ತಾನೆ.

1. ವಜ್ರದ ಉಂಗುರ ಬದಲಾಯಿಸಿಕೊಂಡ ಯಶ್-ರಾಧಿಕಾ Click Here

2. ಯಶ್-ರಾಧಿಕಾ ನಿಶ್ಚಿತಾರ್ಥ: ಹುಡುಗನ ತಾಯಿ ಏನಂತಾರೆ.? Click Here

3. ಯಶ್ ಗೆ 'ಪ್ರೇಮಲೋಕ'ದ ರವಿಚಂದ್ರನ್ 'Hats Off' ಹೇಳಿದ್ದು ಇದೇ ಕಾರಣಕ್ಕೆ.! Click Here

4. ಯಶ್-ರಾಧಿಕಾ ನಿಶ್ಚಿತಾರ್ಥಕ್ಕೆ ಕೋಟಿ ವೆಚ್ಚದಲ್ಲಿ ರೆಡಿಯಾದ ವೇದಿಕೆ Click Here

5. ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ಮದುವೆ ಫಿಕ್ಸ್ Click Here

6. ಕಡೆಗೂ ತಮ್ಮ ಲವ್ ಸ್ಟೋರಿ ಸೀಕ್ರೆಟ್ ಬಿಚ್ಚಿಟ್ಟ ನಟ ಯಶ್.! Click Here

7. ರವಿಚಂದ್ರನ್ ಹಾಗೂ ಯಶ್ ನಡುವೆ ಮಾತಿನ ಜುಗಲ್ಬಂದಿ.! Click Here

8. Santhu Straight Forward (2016) Kannada Songs Download Click Here

9. ನಿಶ್ಚಿತಾರ್ಥದ ವಜ್ರದುಂಗುರಕ್ಕೆ ಯಶ್ ಫೆವಿಕಾಲ್
Fresh Kannada

Fresh Kannada

No comments:

Post a Comment

Google+ Followers

Powered by Blogger.