Breaking News
recent

ವಜ್ರದ ಉಂಗುರ ಬದಲಾಯಿಸಿಕೊಂಡ ಯಶ್-ರಾಧಿಕಾ

ಸ್ಯಾಂಡಲ್ ವುಡ್ ನ ಕ್ಯೂಟ್ ಕಪಲ್ ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ಅವರು ಕೊನೆಗೂ ಎಂಗೇಜ್ ಆಗಿದ್ದಾರೆ. ಅಂತೂ-ಇಂತೂ ಇಷ್ಟು ದಿನ ಗಾಂಧಿನಗರದ ಮಂದಿಗಿದ್ದ ಅನುಮಾನಗಳಿಗೆ ಶಾಶ್ವತವಾಗಿ ತೆರೆ ಬಿದ್ದಿದೆ.
ರಾಧಿಕಾ ಪಂಡಿತ್ ಅವರ ತಾಯಿ ಮಂಗಳಾ ಅವರ ತವರೂರಾದ ಗೋವಾದಲ್ಲಿ ಈ ನಿಶ್ಚಿತಾರ್ಥ ನೆರವೇರಿದ್ದು, ಅದ್ಧೂರಿ ಸಮಾರಂಭವನ್ನು ಗೋವಾದ ತಾಜ್ ವಿವಾಂತ್ ಹಾಲಿಡೇ ವಿಲೇಜ್ ಹೋಟೆಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ.
Yash and Radhika Pandits engagement image
Yash and Radhika Pandits engagement
ಈ ಸಂಭ್ರಮದ ಸಮಾರಂಭಕ್ಕೆ ಯಶ್-ರಾಧಿಕಾ ಪಂಡಿತ್ ಅವರ ಆಪ್ತರು, ಕುಟುಂಬಸ್ಥರು ಹಾಗೂ ಕನ್ನಡ ಚಿತ್ರರಂಗದ ದಿಗ್ಗಜರು ಮಾತ್ರ ಆಗಮಿಸಿದ್ದಾರೆ. ಮಿಕ್ಕಂತೆ ಅಭಿಮಾನಿಗಳಿಗೆ, ಸಾರ್ವಜನಿಕರಿಗೆ ಹಾಗೂ ಮಾಧ್ಯಮಕ್ಕೆ ಪ್ರವೇಶ ದೊರೆತಿಲ್ಲ.
ಕ್ಯೂಟ್ ಕಪಲ್ ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಯಶ್ ಅವರು 'ನಂದಗೋಕುಲ' ಧಾರಾವಾಹಿ ಕಾಲದಿಂದ ಪರಿಚಯವಾಗಿ, ಒಳ್ಳೆ ಸ್ನೇಹವನ್ನು ಇಟ್ಟುಕೊಂಡಿದ್ದರು. ಆ ನಂತರ 'ಮೊಗ್ಗಿನ ಮನಸು' ಚಿತ್ರದಲ್ಲಿ ಒಂದಾದ ಜೋಡಿ, ಇದೀಗ ಲೈಫ್ ಲಾಂಗ್ ಒಂದಾಗಿ ಹೆಜ್ಜೆ ಹಾಕಲಿದ್ದಾರೆ.
ತಾರೆಯರ ರಾಯಲ್ ನಿಶ್ಚಿತಾರ್ಥದ ಸಂಪೂರ್ಣ ಮಾಹಿತಿಗಾಗಿ ಕೆಳಗಿನ ಅಪ್ಡೇಟ್ ಓದಿ...

1. ಸಂಪ್ರದಾಯಬದ್ಧವಾಗಿ ನೆರವೇರಿದ ನಿಶ್ಚಿತಾರ್ಥ 
ಪಕ್ಕಾ ಒಕ್ಕಲಿಗ ಸಂಪ್ರದಾಯದಲ್ಲಿ ಯಶ್-ರಾಧಿಕಾ ಪಂಡಿತ್ ನಿಶ್ಚಿತಾರ್ಥ ನಡೆಯಿತು. ಸರಿಯಾಗಿ 11.10ಕ್ಕೆ ಯಶ್ ಅವರು ರಾಧಿಕಾ ಅವರ ಕೈಗೆ ವಜ್ರದ ಉಂಗುರ ತೊಡಿಸಿದ್ದಾರೆ. ಕುಟುಂಬ ವರ್ಗ, ಆಪ್ತರು ಹಾಗೂ ಸ್ಯಾಂಡಲ್ ವುಡ್ ದಿಗ್ಗಜರ ಸಮ್ಮುಖದಲ್ಲಿ ತಾರಾ ಜೋಡಿ ಪರಸ್ಪರ ಹಾರ ಬದಲಾಯಿಸಿಕೊಂಡು, ಬೆಲೆಬಾಳುವ ವಜ್ರದ ಉಂಗುರ ತೊಡಿಸಿದರು.

2. ಗೌನ್ ನಲ್ಲಿ ರಾಧಿಕಾ-ಶೆರ್ವಾಣಿಯಲ್ಲಿ ಯಶ್ 
ಕಡು ನೀಲಿ ಬಣ್ಣದ ಶೆರ್ವಾಣಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ಮಿಂಚಿದರೆ, ಕಡು ನೀಲಿ ಬಣ್ಣದ ಜೊತೆಗೆ ಬಿಳಿ ಚುಕ್ಕೆ ಇರುವ ಚೆಂದದ ಗೌನ್ ನಲ್ಲಿ ರಾಧಿಕಾ ಅವರು ಕಂಗೊಳಿಸುತ್ತಿದ್ದರು. ಯಶ್ ಅವರ ಶೆರ್ವಾಣಿಯನ್ನು ಬೆಂಗಳೂರಿನಲ್ಲಿ ಡಿಸೈನ್ ಮಾಡಲಾಗಿದೆ. ಹಾಗೆ ರಾಧಿಕಾ ಅವರ ಗೌನ್ ಅನ್ನು ಇಮ್ರಾನ್ ಸರ್ದಾರಿಯಾ ಅವರ ಪತ್ನಿ ಸಾನಿಯಾ ಸರ್ದಾರಿಯಾ ಅವರು ಡಿಸೈನ್ ಮಾಡಿದ್ದಾರೆ.

3. ತಾರಾ ನಿಶ್ಚಿತಾರ್ಥಕ್ಕೆ ಮಳೆಯ ಸಿಂಚನ 
ಸಮುದ್ರದ ಕಿನಾರೆಯ ಬಳಿ ಹಾಕಿದ ಬಿಳಿ ಬಣ್ಣದ ಅದ್ಧೂರಿ ಸೆಟ್ ನಲ್ಲಿ ಜರುಗಿದ ಯಶ್-ರಾಧಿಕಾ ಪಂಡಿತ್ ಅವರ ನಿಶ್ಚಿತಾರ್ಥಕ್ಕೆ ವರುಣ್ ಕೂಡ ಆಗಮಿಸಿ, ಶುಭಲಗ್ನಕ್ಕೆ ಮಳೆಯ ಸಿಂಚನಗೈದಿದ್ದಾನೆ. ಜಿಟಿಜಿಟಿ ಮಳೆಯ ನಡುವೆ ರಾಧಿಕಾ ಅವರು ಗೌನ್ ಅನ್ನು ಎತ್ತಿಕೊಂಡು ನಿಧಾನವಾಗಿ ಹೆಜ್ಜೆ ಹಾಕುತ್ತಾ, ನಿಶ್ಚಿತಾರ್ಥದ ಮಂಟಪಕ್ಕೆ ಆಗಮಿಸಿದರು. ಯಶ್ ಅವರು ತಮ್ಮ ತಂದೆ-ತಾಯಿ ಹಾಗೂ ಕುಟುಂಬದ ಜೊತೆ ಮಂಟಪಕ್ಕೆ ಆಗಮಿಸಿದರು.

4. ನವ ವಧುವಿನಂತೆ ಸಿಂಗಾರಗೊಂಡ ತಾಜ್ ವಿವಾಂತ್ 
ಇಡೀ ನಿಶ್ಚಿತಾರ್ಥದ ಮಂಟಪ ಬಿಳಿ ಬಣ್ಣದಿಂದ ಕಂಗೊಳಿಸುತ್ತಿದ್ದು, ನವ ವಧುವಿನಂತೆ ಸಿಂಗಾರಗೊಂಡಿತ್ತು. ಒಟ್ನಲ್ಲಿ ಒಂದು ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ರಾಧಿಕಾ ಅವರು ದೇವತೆಯಂತೆ ಅದ್ಭುತವಾಗಿ ಕಂಗೊಳಿಸುತ್ತಿದ್ದರು. ಪುರೋಹಿತ ರವಿಶಂಕರ್ ಅವರು ನಿಶ್ಚಿತಾರ್ಥ ಕ್ರಮಗಳನ್ನು ನೆರವೇರಿಸಿದರು.

5. ಕೆ.ಮಂಜು ಹೇಳಿಕೆ 
ಅಂದಹಾಗೆ ಈ ನಡುವೆ ನಿರ್ಮಾಪಕ ಕೆ.ಮಂಜು ಅವರು ಮಾಧ್ಯಮದ ಜೊತೆ ಮಾತಿಗೆ ಸಿಕ್ಕಿದ್ದರು. ಅವರು ಹೇಳುವ ಪ್ರಕಾರ ಇನ್ನೇನು ಎರಡು ದಿನದಲ್ಲಿ ಯಶ್ ಮತ್ತು ರಾಧಿಕಾ ಅವರು ಬೆಂಗಳೂರಿಗೆ ವಾಪಸಾಗಿ, ಈ ನಿಶ್ಚಿತಾರ್ಥ ಕಾರ್ಯಕ್ರಮದ ಫೋಟೋ ಮತ್ತು ವಿಡಿಯೋಗಳನ್ನು ಮಾಧ್ಯಮದವರಿಗೆ ನೀಡಲಿದ್ದಾರಂತೆ.

6. ಊಟದ ವ್ಯವಸ್ಥೆ 
ಮದುವೆ ಸಮಾರಂಭದಲ್ಲಿ ಭಾಗವಹಿಸಿದ ಗಣ್ಯಾತೀ ಗಣ್ಯರಿಗೆ ಭೂರಿ ಭೋಜನ ತಯಾರು ಮಾಡಲಾಗಿದೆ. ಸುಮಾರು 28 ಬಗೆಯ ಖಾದ್ಯಗಳು ಊಟದ ಮೆನುವಿನಲ್ಲಿದೆ. 8 ಬಗೆಯ ಸ್ವೀಟ್ಸ್, ಪಾಯಸ ಹಾಗೂ ಬೆಂಗಳೂರು ಶೈಲಿಯ ಬಜ್ಜಿ ಬೋಂಡಾ ಕೂಡ ಇದೆ. ಪಕ್ಕಾ ಕರ್ನಾಟಕ ಮತ್ತು ಆಂಧ್ರದ ಶೈಲಿಯಲ್ಲಿ ಭೋಜನ ತಯಾರಾಗಿದೆ.

1. ವಜ್ರದ ಉಂಗುರ ಬದಲಾಯಿಸಿಕೊಂಡ ಯಶ್-ರಾಧಿಕಾ Click Here

2. ಯಶ್-ರಾಧಿಕಾ ನಿಶ್ಚಿತಾರ್ಥ: ಹುಡುಗನ ತಾಯಿ ಏನಂತಾರೆ.? Click Here

3. ಯಶ್ ಗೆ 'ಪ್ರೇಮಲೋಕ'ದ ರವಿಚಂದ್ರನ್ 'Hats Off' ಹೇಳಿದ್ದು ಇದೇ ಕಾರಣಕ್ಕೆ.! Click Here

4. ಯಶ್-ರಾಧಿಕಾ ನಿಶ್ಚಿತಾರ್ಥಕ್ಕೆ ಕೋಟಿ ವೆಚ್ಚದಲ್ಲಿ ರೆಡಿಯಾದ ವೇದಿಕೆ Click Here

5. ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ಮದುವೆ ಫಿಕ್ಸ್ Click Here

6. ಕಡೆಗೂ ತಮ್ಮ ಲವ್ ಸ್ಟೋರಿ ಸೀಕ್ರೆಟ್ ಬಿಚ್ಚಿಟ್ಟ ನಟ ಯಶ್.! Click Here

7. ರವಿಚಂದ್ರನ್ ಹಾಗೂ ಯಶ್ ನಡುವೆ ಮಾತಿನ ಜುಗಲ್ಬಂದಿ.! Click Here

8. Santhu Straight Forward (2016) Kannada Songs Download Click Here
Fresh Kannada

Fresh Kannada

No comments:

Post a Comment

Google+ Followers

Powered by Blogger.