Breaking News
recent

ರಮ್ಯಾ ಪಾಲ್ಗೊಂಡಿದ್ದ ವೇದಿಕೆಗೆ ಮೊಟ್ಟೆ ಎಸೆತ; 8 ಮಂದಿ ಅರೆಸ್ಟ್

ಮಾಜಿ ಸಂಸದೆ ರಮ್ಯಾ ಅಥಿತಿಯಾಗಿ ಪಾಲ್ಗೊಂಡಿದ್ದ ಕಾರ್ಯಕ್ರಮದ ವೇದಿಕೆಗೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ramya

ಜನ್ಮಾಷ್ಟಮಿಯಂದು ಕದ್ರಿ ಮೈದಾನದಲ್ಲಿ ಆಯೋಜಿಸಿದ್ದ ರಿದಮಿಕ್ ನೈಟ್ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಲು ನಟಿ ರಮ್ಯಾ ಆಗಮಿಸಿದ್ದರು. ಈ ವೇಳೆ ಸ್ಥಳದಲ್ಲಿದ್ದ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಪಾಕ್ ಪರ ಹಾಗೂ ಮಂಗಳೂರು ನರಕ ಹೇಳಿಕೆ ಖಂಡಿಸಿ ಭಾರೀ ಪೊಲೀಸ್ ಬಂದೋಬಸ್ತುಗಳ ನಡುವೆಯೂ ವೇದಿಕೆಗೆ ಮೊಟ್ಟೆ ತೂರಿದ್ದರು.

ಈ ವಿಚಾರವಾಗಿ ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಂಡಿದ್ದ ಕದ್ರಿ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆ ಪ್ರಮುಖ ಹಾಗೂ ಪಬ್ ದಾಳಿ ಆರೋಪಿ ಸುಭಾಷ್ ಪಡೀಲ್ ಸೇರಿದಂತೆ ಎಂಟು ಮಂದಿ ಕಾರ್ಯಕರ್ತರನ್ನು ಬಂಧಿಸಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.