Breaking News
recent

ಒಂದು ಪುಟ್ಟ ಕಥೆ - ಅವನು ಅವಳು

ಒಂದು ಪುಟ್ಟ ಕಥೆ - ಅವನು ಅವಳು 
Small story

ಬೆಳ್ಳಗಿನ  ಜಾವ  ನಿದ್ದೆ  ಮನ್ಪು  ಇಳಿಯಿತು..ಪಕ್ಕದಲ್ಲಿ  ನೋಡಿದ..ಅವಳು  ಮುದ್ದಾಗಿ  ಮಲಗಿದ್ದಳು . ಸೂರ್ಯನ  ಕಿರಣಗಳು  ಅವಳ ಚೆಲುವನ್ನು  ಇನ್ನು ಚೆಂದವಾಗಿ  ಬಣ್ಣಿಸಿತ್ತು .ದಿನನಿತ್ಯದ ಹಾಗೆ ಅವನು  ಎದ್ದು  ಟೀ  ಮಾಡಿಕೊಂಡ .ಸ್ನಾನ  ಮಾಡಿ  ಆಫೀಸಿಗೆ ಹೊರಟ.ಸುಮಾರು  ಆರು  ತಿಂಗಳಿಂದ ಹೀಗೆ ನಡೆದಿತ್ತು ..ಅವಳು  ಬಹಳ  ಬದಲಾಗಿದ್ದಳು ..
ಮೌನವಾಗಿರುತಿದ್ದಳು..ಅಡಿಗೆ  ಮಾಡುತಿರಲಿಲ್ಲ .ಅವಳ  ಪಾಡಿಗೆ  ಒಂದು  ಕಡೆ  ಕುತ್ಕೊತಿದ್ದಳು
.ಒಮ್ಮೊಮ್ಮೆ  ಅವ್ನನ್ನು  ನೋಡಿ  ಮುಗುಳ್ನಗುತ್ತಿದ್ದಳು ..ಮದುವೆ  ಆದಾಗ  ಅವಳ ಸ್ವಭಾವ  ಬಹಳ  ಚೂಟಿಯಾಗಿ  ಇತ್ತು .ಪಟಾಕಿ  ಥರ ..ಯಾಕೆ  ಇವಾಗ  ಇಷ್ಟು  ಸಪ್ಪೆಗೆ  ಇದ್ಳೇನೋ  ಅನ್ಕೊಂಡ ..ಈಗೀಗ  ಬರೀ  ಹಳೆ  ಬಟ್ಟೆ  ಹಾಕೋಳದೂ ಅವಳು  ..ಇವನಿಗೆ ಆಫಿಸ್ನಲ್ಲಿ ವಿಪರಾರಿತ  ಕೆಲ್ಸ ..ವೀಕೇಂಡ್ಸ್  ಕೂಡ  ಅಲ್ಲೇ  ಇರುತ್ತಿದ್ದ. ಇವಳೆಂದರೆ  ಒಂಥರ  ಅಸಡ್ಡೆ  ಆಗಿಬಿಟ್ಟಿತ್ತು  ಇವನಿಗೆ  ಈಗೀಗ ..ಇವಳು  ಕನ್ನಿನ್ನಲ್ಲಿ  ಯಾವಾಗಲೂ ಏನೋ  ಸಂಕಟ ..
ಮಾತಾಡೋಕ್ಕೆ  ಹೋದರೆ  ಸುಮ್ನಾಗೋಗ್ತಿದ್ಲು   ..ದೂರ  ಹೋಗಿಬಿಡೋಳು ..ಹೆಂಡತಿ  ಅಂದರೆ  ಇವನಿಗೆ  ಪ್ರಾಣ  ಆಗಿತ್ತು ...ಅವಳನ್ನು  ನೋಡದೆ  ಆಗುವುದೇ  ಇಲ್ಲ  ಅವನಿಗೆ ..ಅವಳಿಗೂ  ಹಾಗೆನೇ  ಇತು ..ಮದುವೆ  ಆದ  ಒಂದು  ವರ್ಷ  ವಿಪರೀತ  ಹಚ್ಕೊಂಡಿದ್ರು .ಇತೀಚಿಗೆ  ಆರು  ತಿಂಗಳಿಂದ  ಯಾಕೋ  ಎಲ್ಲೋ ದೂರ  ಅದರೊ  ಅನಿಸುತಿತ್ತು  ಅವ್ನಿಗೆ ...ಮಾತಿಲ್ಲ ..ಕಥೆ  ಇಲ್ಲ ..ಅವ್ನು ಆಫೀಸ್ ಗೆ ಒಂದು ಕಾಲ್ ಇಲ್ಲ ..ಮನೆಗೆ  ಬರೋ  ನೆಂಟರು  ವಿಪರಥಿ  ಕಮ್ಮಿ  ಆಗಿದ್ದರು ..ಎಲ್ಲರೂ  ಇವನ್ನನು ಒಂಥರ  ನೋಡುತಿದ್ದರು ...ಕೆಲವೊಮ್ಮೆ  ಅವ್ನಿಗೆ  ಅನ್ನಿಸ್ಬಿಟ್ಟಿತು  ಇವಳಿಗೆ  ನನ್ನ  ಮೇಲೆ  ಪ್ರೀತಿ  ಕಮ್ಮಿಯಾಗ್ಬಿಟ್ಟಿದೆ ..ಅಲಕ್ಷೆ  ಮಾಡ್ತಿದಾಳೆ ...ಸ್ವಾರ್ಥಿ  ಅಂಥ ...ಸಿಟ್ಟು  ಬರುತ್ತಿತ್ತು ..ಇವನ್ನಿಡಿದ್ದು ಬಾಡಿಗೆ  ಮನೆ ..ಓನರ್  ಹತ್ತಿರ ಆಗೊಮ್ಮೆ  ಈಗೊಮ್ಮೆ  ಮಾತಾಗುತ್ತಿತ್ತು .ಅವನು ಇವನನ್ನು ಕನಿಕರದಿಂದ ನೋಡುತ್ತಿದ್ದ ..ಛೇ..ಓನರ್ ಗು ನನ್ನ ಸ್ಥಿತಿ ನೋಡಿ ಬೇಜಾರ್ ಆಗಿದೆ  ಅನ್ಕೊಂಡ ...ಆ  ದಿನ  ಆಫೀಸ್ನಲ್ಲಿ  ಎದ್ದು  ನಿರ್ಧರಿಸಿಧ ..  ಸಾಕಿನ್ನು ..ಅವ್ಳಿಗೆ  ವಿಛೇದನ ನೋಟಿಸ್  ಕೊಡಬೇಕು  ...ಮನೆಗೆ  ಬಂದು  ನೋಡಿದ ..ಅವ್ಳು  ಕಾಣಿಸ್ಲಿಲ್ಲ ..ಮೊಬೈಲ್  
ಯುಸ್  ಮಾಡ್ತಾನೆ  ಇರಲಿಲ್ಲ  ಈಗೀಗ  ಅವಳು ..ಅವಳ  ಆಫೀಸ್  ಮನೆ  ಹತ್ರ ನೇ  ಇತ್ತು ..ಸುಮ್ನೆ  ಕೂತಾಗ  ಹೇಳಿದ  ಅವ್ಳಿಗೆ  ಸಾಕು  ಇನ್ನು ...ನಿನ್ನ  ಜೊತೆ  ಸಂಸಾರ ..ನಿಂಗೆ ನನ್ನ  ಮೇಲೆ  ಆಸಕ್ತಿ  ಇಲ್ಲ  ಎಂದ ..ಅವಳ  ಕಣ್ಣಲ್ಲಿ  ನೀರು ಹಾಗೂ ನೋವಿತ್ತು 
ಮರುದಿನ  ಲಾಯೆರ್  ಆಫೀಸ್ಗೆ  ಹೋಗೋಕ್ಕೆ ನಿರ್ಧಾರ  ಮಾಡಿದ ...ಹೋಗೋ ಮೊದಲು  ಅವ್ರಮ್ಮನಿಗೆ  ಕಾಲ್  ಮಾಡಿ  ಹೇಳೋಕ್ಕೆ  ನಿರ್ಧರಿಸಿಧ ...ಬೆಳ್ಳಿಗ್ಗೆ  ಕಾಲ್  ಮಾಡಿದ ..ಅಮ್ಮ  ನಂಗೆ  ಆಗೋಲ್ಲ  ಅವಳ  ಜೊತೆ  ಬದುಕಲೇ ..ವಿಪರೀತ  ಉದಾಸೀನತೆ ತೋರ್ಸ್ತಾಳೆ ...ನನ್ನ  ಯಾವದೇ  ಮಾತಿಗೂ  ಬೆಲೆ  ಇಲ್ಲ ...ಸುಮ್ನೆ  ಅಳ್ತಿತಾಳೆ  ..ಐ  ಹೇಟ್  ಹರ್ ಅಂದ ...ಮತ್ತೊಂದೆಡೆ  ಇಂದ  ಅಳು  ..ನಿನ್  ಯಾಕಮ್ಮ  ಅಳುತಿದ್ಯಾ    ಅಂದ ..ಅವಳು  ಆ  ಥರದ  ಹೆಂಗ್ಸು ..ಕ್ರೂರಿ ...ಭಾವನೆಗಳಿಗೆ  ಬೆಲೆ  ಇಲ್ಲ ...ಮನೆಗೆ  ಬಾ  ಮಗು  ಅಂದಳು  ಅವನಮ್ಮ ..ಸರಿ  ಅಂದ್..ಅವಳು  ಪಕ್ಕದ  ರೂಮ್  ಅಲ್ಲಿ  
ನಿಂತು  ನೋಡುತಿದ್ದಳು  ಅವನನ್  ..ಏನಾದ್ರು  ಹೇಳ್ತಾಳ  ಅನ್ಕೊಂಡ ..ಏನು  ಇಲ್ಲ ....ಛೇ ..ಎಷ್ಟು  ಸೊಕ್ಕು  ಇವಳಿಗೆ  ಅಂದುಕೊಂಡ ..ನಾನು  ಅಮ್ಮನ  ಮನೆಗೆ  
ಹೋಗ್ತಿದೀನಿ ಅಂದ ..ಹುಂ  ಅಂಥ  ತಲೆ  ಆಡಿಸಿದಳು ..ಬೈಕ್ ಸ್ಟ್ಯಾಂಡ್  ತೆಗೆದ ..ಅಬ್ಬಾ ..ಇನ್ನು  ಮೊಣ ಕಾಲು  ನೋಯುತಿತು ..6 ತಿಂಗಳ  ಹಿಂದೆ  ಬೈಕ್  ಸ್ಕಿಡ್  ಆಗಿ ಬಿದ್ದಿತು ..ಇನ್ನು  ನೋವು  ಪೂರ್ತಿ  ಹೋಗಿರ್ಲಿಲ್ಲ ..ಮನೆಗೆ  ಹೋದಾಕ್ಷಣ  ಅವ್ರಮ್ಮ  ಅವ್ನನ್ನ  ಹಿಡಿದು  ಅಥರು ..ಪಾಪ  ನನಮ್ಮಂಗೆ  ಇಂಥ  ಶಾಕ್ಈ  ವಯಸ್ಸಿನಲ್ಲಿ  ಕೊಡ್ಬೇಕಾಯ್ತಲ್ಲ  ನಾನು  ಅಂದುಕೊಂಡ ..ನೀನು  ಬೇಜಾರ್  ಮಾಡ್ಕೋಬೇಡ  ಅಂದ   ಅವ್ರಮ್ಮನಿಗೆ ..ಅವ್ಳು  ಅಂಥವಳೇ ..ದುರಹಂಕಾರಿ ..ಮುಂಗೋಪಿ ...ಬೇರೆಯವರ   ಬಗ್ಗೆ  ಕಾಳಜಿನೇ ಇಲ್ಲ  ಚೂರು  ಅಂದ ..ಅವರಮ್ಮನ ಅಳು  ಮುಗಿಲೆ  ಇಲ್ಲ ..ಅಯ್ಯೋ  ಸಾಕಮ್ಮ  ನಿಲ್ಸು  ದಯವಿಟ್ಟು  ಅಂದ ...ಅಸ್ಟೊತ್ತಿಗೆ  ಅವರಣ್ಣ   ಕೋಣೆಯಿಂದ   ಬಂದ ..ಇವನು  ನಿರ್ಧಾರ  ಹೇಳಿದ ..ಅವರಣ್ಣ  ನಿಟ್ಟುಸಿರು  ಬಿಡುತಾ ಬಾ  ರೂಮ್ ಗೆ  ಅಂದರು ..ಭುಜದ  ಮೇಲೆ  ಕೈ  ಹಾಕಿ  ಕರ್ಕೊಂಡ್  ಹೋದ್ರು ..ಚೇರ್  ಮೇಲೆ  ಕೂಡಿಸಿದರು  ..ನನ್ನ  ನಿರ್ಧಾರ  ಫೈನಲ್  ಅಂದ  ಇವನು ..ನನ್ನ  ಮಾತು  
ಕೇಳು  ಅಂದ  ಅವರಣ್ಣ  ..ಏನು  ಹೇಳು  ಅಂದನಿವ..ನಿನ್ನ  ಹೆಂಡತಿ  ಇಲ್ಲ  ಅಂದ ...ಇವನು  ಹೌದು  ಒನ್ಸ್  ಐ ಗಿವ್ ಡಿವೋರ್ಸ್  ಅವಳಿರೋಲ್ಲ  ಅಂದ ...
ಯಾರಿಗೆ  ಕೊಡ್ತ್ಯ  ಅವ್ಳಿಗೇ ..ಶಾಕ್  ಆಗಿ  ಕೇಳಿದ  ಅವರಣ್ಣ ..ಹೌದು ಯಾಕೆ  ಕೊಡಬಾರದು  ಅಂದ ..ಹೋದವರಿಗೆ  ಏನೋ  ಕೊಡ್ತ್ಯ  ಡಿವೋರ್ಸ್  ಅಂದ ..ಏನು  ಹೋದವರು  ..ಯಾರು  ಎಲ್ಲಿಗೆ  ಆಶ್ಚರ್ಯದಿಂದ  ಕೇಳಿದ  ಇವನು ...6 ತಿಂಗಳ  ಹಿಂದೆ  ಬೈಕ್  ಆಕ್ಸಿಡೆಂಟ್ನಲ್ಲಿ  ಅವಳು   ಹೋಗಿಬಿಟ್ಟಳಲ್ಲೋ ..ಯಾಕೆ  ನೆನಪಿಲ್ವಾ  ಅಂದ  ಅವರಣ್ಣ  ಅವನ 
ಭುಜವನ್ನು  ಗಟ್ಟಿಯಾಗಿ  ಒತ್ತಿ  ಹಿಡಿದು ..ಒಮ್ಮೆಲೇ ಸಿಡಿಲು  ಬಡಿದ  ಅನುಭವ  ಇವನಿಗೆ ..ಅಯ್ಯೋ  ದೇವರೇ ..ಮರುಕ್ಷಣ       ನೆನಪಾಯಿತು ..ಆವತ್ತು  ಗುರುವಾರ ....ಹಿಂದಿನ  ದಿನ  ಭುಧವಾರ  ಪಾರ್ಲರ್  ಹೋಗಿ  ಹೊಸ  ಹೈರ್ಸ್ಟೈಲ್  ಮಾಡ್ಸಿದ್ಲು ..ಅವಳ  ಆಫೀಸ್  ಗೆ  ಡ್ರಾಪ್   ಮಾಡೋಕ್ಕೆ  ಬೈಕ್  ಅಲ್ಲಿ  ಹೋಗ್ಬೇಕಾದ್ರೆ  ಇವತ್ತು  ಹೆಲ್ಮೆಟ್  ಬೇಡ  ಹಾಗೆ  ಚೆನ್ನಾಗಿ  ಕಣ್ಸ್ತ್ಯ  ..ಅಂದಿದ್ದ  ಇವನು ..ಸಂಜೆ  ಹೋಟೆಲ್ಗೆ  ಹೋಗೋಣ ಅಂದಿದ್ದ  ..ಆಫೀಸ್  ಬಳಿ ಹೊರಟಾಗ   ಬೈಕಿನಲ್ಲಿ ರಸ್ತೆ ಮೇಲೆ   ಬೆಕ್ಕು  ಅಡ್ಡಾ  ಬಂದಿತ್ತು  ..ಅವನು  ಹಠಾತ್ ಆಗಿ  ಗಾಡಿಯ  ಮುಂದಿನ  ಬ್ರೆಕ್  ಒಥಿ 
 ಹಿಡಿದ ..ಮರಳು  ಇದ್ದ  ಕಾರಣ  ಗಾಡಿ  ಸ್ಕಿಡ್  ಆಯ್ತು ...ಇಬ್ಬರು  ಬಿದ್ದರು ..ಅವನು  ಹೆಲ್ಮೆಟ  ಹಾಕಿದ ..ಅವಳು  ಹಾಕಿರಲಿಲ್ಲ..ಬಿದ್ದು   ಉರುಳಿದಳು ...ಅಲ್ಲೇ  ಇದ್ದ  ಚಪ್ಪಡಿ  ಕಲ್ಲಿಗೆ  ತಲೆ  ಪೆಟ್ಟು  ಬಿದ್ದು  ಸ್ಥಳದಲ್ಲೇ ಅಸು  ನೀಗಿದಳು ...ಅಯ್ಯೋ  ದೇವರೇ ..ಪ್ರವಾಹದಂತೆ  ಒಮ್ಮೆಲೇ ಎಲ್ಲವೂ   ನೆನಪಾಯಿತು  ಅವ್ನಿಗೆ  ಈಗ ..ಆವ್ತು  ಹೆಲ್ಮೆಟ್  ಹಾಕೊಂಡಿದ್ರೆ  ಉಳಿತಿದ್ಳೇನೋ  ಅವಳು ...ಆ  ನೋವು  ಮರಿಯಲು  ಅವಳ  ಸಾವಿನ ನೆನಪನ್ನು  ಸಪ್ರ್ರೆಸ್  ಮಾಡಿದ್ದ    ...ಹಾಗಿದ್ದರೆ    ಮನೇಲಿ  ಇದ್ದವ್ರು  ಯಾರು ..ಪ್ರತಿ  ದಿನ  ವಿಷಾದ  ಮುಗುಳ್ನಗೆ  ನಗುತ್ತ  ಅವ್ಳಿದಲಲ್ವ ..ತಕ್ಷಣ  ಮನೆಗೆ  ಓಡಿದ ...ಇಷ್ಟು  ದಿನ  ಯಾಕೆ  ಅವಳು  ಮಾತಾಡ್ತಾ  ಇರ್ಲಿಲ್ಲ ..ಅಳ್ತಾ  ಇದ್ದಳು ..ಎಲ್ಲ  ಅರ್ಥ  ಆಯ್ತು  ಅವ್ನಿಗೆ ..ಅಯ್ಯೋ ..ಪಾಪ ..ಸಾವಿನಲ್ಲಿ  ದೂರವಾಗಿ ಮರುಗುತಿದ್ದಳು   ಅವಳು ..ನನ್ನ  ಜೊತೆ  ಇದ್ಲು ..ಆದರೆ  ಮಾನವ  ರೂಪದಲ್ಲಿ  ಇರಲು  ಅಗಲಿಲ್ವಲ್ಲ  ಅಂಥ  ದುಃಖದಿಂದ  ಅಳ್ತಿದಿದ್ಲು ..ಎಂತ  ಕೆಲ್ಸ  ಮಾಡಿದೆ ..ಅವಳನ್ನು  ಅರ್ಥಾನೇ  ಮಾಡಿಕೊಳ್ಲಿಲ್ಲ ...ಮನೆ  ಬಾಗಿಲು  ತೆರೆದು   ಜೋರಾಗಿ  ಕೂಗಿದ  ಅವಳೆಸರನ್ನ  ..ಎಲ್ಲೂ  ಇರಲಿಲ್ಲ ...ಅಲ್ಲೇ  ಬಾಗಿಲ  ಬಳಿ  ಬಂದ ..ಕಿಟಕಿ  ಇಂದಾಚೆ ಎಲ್ಲೋ  ಮೋಡದಲ್ಲಿ  ನೋಡಿದ ..ನಸುನಗುತ್ತಾ  ಅವಳ ಮುದ್ದಾಡಿದ ಮುಖ ಕಾಣಿಸಿತು  ..ಅವನ  ಪ್ರೀತಿ  ಹಾಗೂ  ಪಶ್ಚಾತ್ತಾಪ  ಅವಳನ್ನು  ಮುಕ್ತ   ಗೊಳಿಸಿತ್ತು ...ಅವಳನ್ನು  ಆಗಸದಲ್ಲಿ  ನೋಡಿ  ಇವನು  ಪ್ರೀತಿಯಿಂದ   
ಕಣ್ಣೀರಿಟ್ಟ ...ಮರು  ದಿನ  ಆಫೀಸ್  ಹೊರಡಬೇಕಾದ್ರೆ ಆಗಸದತ್ತ  ನೋಡಿ  ಮುಗುಳ್ನಕ್ಕಿ  ಹೋರಾಟ ...ಅವಳು  ಇದ್ದಾಳೆ  ಇನ್ನು  ನನ್ನೊಟ್ಟಿಗೆ   ಅನ್ನೋ ಸಮಾಧಾನ  ಇತ್ತು  ಅವನ  ಮನಸ್ಸಿನಲ್ಲಿ ..
ಪ್ರೀತಿಯು ಅಮರ ...
Fresh Kannada

Fresh Kannada

No comments:

Post a Comment

Google+ Followers

Powered by Blogger.