Breaking News
recent

ಎಲ್ಲರಿಗೂ ಮಾದರಿಯಾದ್ರು ಈ ನವ ದಂಪತಿ..!

ಭಾರತ ದೇಶದಲ್ಲಿ ಮದುವೆ ಅನ್ನೋದು ದುಬಾರಿ ವೆಚ್ಚದ ಒಂದು ವ್ಯವಹಾರ. ಇಲ್ಲಿ ಲಕ್ಷ ಕೋಟಿಗಟ್ಟಲೆ ಹಣ ಸುರಿದು ಮದುವೆ ಮಾಡುವುದೇ ಒಂದು ದೊಡ್ಡ ಸಂಭ್ರಮ. ಆದರೆ ಇದಕ್ಕೆ ವಿರುದ್ದ ಎಂಬಂತೆ ಇಲ್ಲಿಬ್ಬರು ನವ ದಂಪತಿಗಳಿದ್ದಾರೆ. ಭಾರತದಲ್ಲಿ ಮದುವೆ ಆಚರಣೆಯ ರೀತಿ ಬದಲಿಸಿ ಮಾದರಿಯಾಗಿದ್ದಾರೆ.!
ಅಮರಾವತಿ ಮೂಲದ ಈ ನವದಂಪತಿಗಳು ಈ ಹಿಂದೆ ಟೈಮ್ಸ್ ಆಫ್ ಇಂಡಿಯಾ ಮಾಡಿದ್ದ ರೈತರ ದುಸ್ಥಿತಿ ಹಾಗೂ ಆತ್ಮಹತ್ಯೆ ಕುರಿತಂತೆ ವರಧಿ ಅನ್ವಯ ಅವರೆಲ್ಲರಿಗೂ ಸಹಾಯ ಮಾಡುವ ಧೃಢ ನಿರ್ಧಾರ ಕೈಗೊಂಡಿದ್ದಾರೆ.
ಟೈಮ್ಸ ಆಫ್ ಇಂಡಿಯಾ ವರದಿ ಪ್ರಕಾರ ಅಭಯ್ ದೇವಾರೆ ಮತ್ತು ಪ್ರೀತಿ ಕುಂಭಾರೆ ಎಂಬ ನವ ದಂಪತಿ ಭಾರತದಲ್ಲಿನ ಮದುವೆ ಪದ್ದತಿಯಂತೆ ದುಂದುವೆಚ್ಚವನ್ನು ಮಾಡದೆ ಆ ದುಡ್ಡನ್ನು ಕಷ್ಟದಲ್ಲಿರುವ ರೈತರಿಗೆ ಸಹಾಯ ಮಾಡಲು ನಿರ್ಧರಿಸಿದರು. ಪ್ರತಿ ವರ್ಷ ರಾಷ್ಟ್ರದಲ್ಲಿ ಸುಮಾರು 1 ಲಕ್ಷ ಕೋಟಿ ಹಣ ಮದುವೆಗೆಂದೇ ಖರ್ಚು ಮಾಡುತ್ತಿದ್ದು, ಆದರೆ ಈ ನವ ದಂಪತಿಗಳು ತಮ್ಮ ವಿವಾಹವನ್ನು ಸರಳವಾಗಿ ಮಾಡಿಕೊಂಡಿದ್ದರಲ್ಲದೇ ತಮ್ಮ ಮದುವೆಗೆಂದು ಉಳಿಸಿದ ಹಣವನ್ನು ಸಮಾಜ ಸೇವಾ ಕಾರ್ಯಗಳಿಗೆ ವ್ಯಯ ಮಾಡಿದ್ದಾರೆ.
ಈ ದಂಪತಿ 10 ರೈತ ಕುಟುಂಬಗಳಿಗೆ 20 ಸಾವಿರ ಹಣವನ್ನು, ಅದರಲ್ಲೂ ಆತ್ಮಹತ್ಯೆ, ಬೆಳೆ ನಾಶದಿಂದ ಕಂಗೆಟ್ಟ ರೈತ ಕುಟುಂಬಕ್ಕೆ ಸಹಾಯ ಮಾಡಿದ್ದಾರೆ.
ಅಮರಾವತಿ ಮತ್ತು ತಮ್ಮದೇ ಗ್ರಾಮವಾದ ಉಂಬರ್ದ ಬಜಾರ್ ನಲ್ಲಿರುವ ಗ್ರಂಥಾಲಯಗಳಿಗೆ ಸುಮಾರು 52 ಸಾವಿರ ಮೌಲ್ಯದ ಸ್ಪರ್ಧಾತ್ಮಕ ಪರಿಕ್ಷಾ ಪುಸ್ತಕವನ್ನು ನೀಡಿದರು. ಅಲ್ಲದೇ ತಮ್ಮ ಮದುವೆಯ ಭೋಜನ ವ್ಯವಸ್ಥೆಯಲ್ಲೂ ಸರಳ ರೀತಿಯಲ್ಲಿರುವಂತೆ ಮಾಡಿ ಎಲ್ಲರ ಗಮನ ಸೆಳೆದರು.
ಕೋಟಿಗಟ್ಟಲೇ ಹಣ ಸುರಿದು ಆಢಂಬರವಾಗಿ ಮದುವೆ ಮಾಡುವ ಜನರಿಗೆ ಈ ದಂಪತಿ ಸೂಕ್ತ ಉದಾಹರಣೆಯಾಗಲಿ. ಭಾರತದಲ್ಲಿ ಇಂದಿಗೂ ವಿವಾಹಗಳಿಗೆ ಕೋಟಿ ಕೊಟಿ ಹಣ ವ್ಯಯ ಮಾಡುತ್ತಿದ್ದು ಮತ್ತೊಂದೆಡೆ ಮುಂದಿನ ಒಪ್ಪೊತ್ತಿನ ಊಟಕ್ಕೇನು ಮಾಡುವುದೆಂಬ ಚಿಂತೆಯಲ್ಲಿರುವ ಜನರೂ ಇದ್ದಾರೆ. ಇಂತಹ ದಂಪತಿಗಳಿಂದಾದರೂ ವಿವಾಹದ ಆಡಂಬರಕ್ಕೆ ಕಡಿವಾಣ ಬೀಳಲಿ. ಇವರ ಮದುವೆ ಮಾದರಿಯಾಗಿ ಬದಲಾವಣೆಯ ಕಾಲ ಬರಲಿ.
Fresh Kannada

Fresh Kannada

No comments:

Post a Comment

Google+ Followers

Powered by Blogger.