Breaking News
recent

ರಕ್ಷಿತ್ ಶೆಟ್ಟಿ ಅವರೆ 'ಕಿರಿಕ್ ಪಾರ್ಟಿ' ಶುರು ಆಯ್ತಾ

'ಉಳಿದವರು ಕಂಡಂತೆ' ಚಿತ್ರದ ಮೂಲಕ ನಿರ್ದೇಶಕರ ಪಟ್ಟ ಏರಿದ ನಟ ಕಮ್ ನಿರ್ದೇಶಕ ರಕ್ಷಿತ್ ಶೆಟ್ಟಿ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ 'ಕಿರಿಕ್ ಪಾರ್ಟಿ' ಸದ್ದಿಲ್ಲದೇ ಚಿತ್ರದ ಕೆಲಸ ಕಾರ್ಯಗಳನ್ನು ಆರಂಭಿಸಿದೆ.
kirik party kannada movie

'ರಿಕ್ಕಿ' ಚಿತ್ರವನ್ನು ನಿರ್ದೇಶನ ಮಾಡಿದ್ದ ನಟ ಕಮ್ ನಿರ್ದೇಶಕ ರಿಶಬ್ ಶೆಟ್ಟಿ ಅವರು 'ಕಿರಿಕ್ ಪಾರ್ಟಿ' ಚಿತ್ರಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದು, ರಕ್ಷಿತ್ ಶೆಟ್ಟಿ ಅವರ 'ಪರಂವಾ' ನಿರ್ಮಾಣ ಸಂಸ್ಥೆಯಲ್ಲಿ ಸಿನಿಮಾ ಮೂಡಿಬರುತ್ತಿದೆ.

ಅಂದಹಾಗೆ ಏಪ್ರಿಲ್ 2 ರಂದು ರಕ್ಷಿತ್ ಶೆಟ್ಟಿ, ರಿಶಬ್ ಶೆಟ್ಟಿ ಮತ್ತು ಬಳಗದವರು ರಾಗಿಗುಡ್ಡದ ಆಂಜನೇಯನ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ಆಂಜನೇಯನ ಪಾದಕ್ಕೆರಗಿ ಚಿತ್ರದ ಕೆಲಸಗಳಿಗೆ ಯಾವುದೇ ವಿಘ್ನ ಬಾರದಿರಲಿ ಎಂದು ಪೂಜೆ ಸಲ್ಲಿಸಿದ್ದಾರೆ.

ಇವರೊಂದಿಗೆ ನಟಿ ಯಜ್ಞಾ ಶೆಟ್ಟಿ ಮತ್ತು ಶೀತಲ್ ಶೆಟ್ಟಿ ಅವರು ಕೂಡ ಹಾಜರಿದ್ದರು. ಇದನ್ನು ನೋಡುತ್ತಿದ್ದರೆ, 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ಮತ್ತೆ 'ಉಳಿದವರು ಕಂಡಂತೆ' ಚಿತ್ರತಂಡ ಮುಂದುವರಿಯುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿವೆ. ರಿಶಬ್ ಶೆಟ್ಟಿ ಅವರು ಮಾಡಿರುವ ಟ್ವೀಟ್ ಇಲ್ಲಿದೆ ನೋಡಿ.

ಇನ್ನು ಪೂಜೆ ಸಲ್ಲಿಸಿದ ಬಳಿಕ ಇಡೀ ಚಿತ್ರತಂಡ ಒಟ್ಟಿಗೆ ಕುಳಿತು ಊಟ ಮಾಡಿ ಹರಟೆ ಹೊಡೆಯುವ ಮೂಲಕ ಸಖತ್ 'ಕಿರಿಕ್ ಪಾರ್ಟಿ' ಮಾಡಿದ್ದಾರೆ. ಅಂತೂ ಚಿತ್ರದ ಕೆಲಸಗಳಿಗೆ ಅಧೀಕೃತ ಮುದ್ರೆ ಬಿದ್ದಂತಾಗಿದೆ.

ಅದೇನೇ ಇರಲಿ ಒಟ್ನಲ್ಲಿ 'ಉಳಿದವರು ಕಂಡಂತೆ' ಚಿತ್ರದಂತೆ ಮತ್ತೊಂದು 'ಕಿರಿಕ್' ಚಿತ್ರ ಚಂದನವನಕ್ಕೆ ಬರುತ್ತಿದ್ದು, ಸಿನಿ ಪ್ರಿಯರಿಗೆ ಶೆಟ್ರ 'ಕಿರಿಕ್ ಪಾರ್ಟಿ' ಭಾರಿ ಮಜಾ ಕೋಡೋದು ಗ್ಯಾರೆಂಟಿ.
Fresh Kannada

Fresh Kannada

No comments:

Post a Comment

Google+ Followers

Powered by Blogger.