Breaking News
recent

ನಂಬಿದ್ರೆ ನಂಬಿ.! ರವಿಶಂಕರ್ ಇನ್ಮುಂದೆ ವಿಲನ್ ಅಲ್ಲ.! ಹೀರೋ ಕಣ್ರೀ!

ಈ ಒಂದು ಅವಕಾಶಕ್ಕಾಗಿ ನಟ ರವಿಶಂಕರ್ ಬರೋಬ್ಬರಿ 30 ವರ್ಷ ಕಾದಿದ್ರು. ನಾಯಕನಿಗೆ ಬೇಕಾದ ಗತ್ತು, ಗೈರತ್ತು...ಎಲ್ಲವೂ ಇದ್ದರೂ, ರವಿಶಂಕರ್ ಗೆ 'ಹೀರೋ' ಆಗಿ ನಟಿಸಲು ಟಾಲಿವುಡ್ ನಲ್ಲಿ ಯಾರೂ ಅವಕಾಶ ನೀಡ್ಲಿಲ್ಲ.
ravishankar

ಹಾಗ್ನೋಡಿದ್ರೆ, ತೆಲುಗು ಸಿನಿ ಅಂಗಳದಲ್ಲಿ ರವಿಶಂಕರ್ ಗುರುತಿಸಿಕೊಂಡಿದ್ದು ಡಬ್ಬಿಂಗ್ ಆರ್ಟಿಸ್ಟ್ ಆಗಿ.

ಅಷ್ಟಕ್ಕೂ, ಟಾಲಿವುಡ್ ಮಾಸ್ ಮಹಾರಾಜ ರವಿತೇಜಾ ಹಾಗೂ ರವಿಶಂಕರ್ ಬಣ್ಣ ಹಚ್ಚಿದ್ದು ಒಟ್ಟಿಗೆ. ಲಕ್ಕಿ ರವಿತೇಜಾ ಇನ್ನೂ ಟಾಲಿವುಡ್ ನ ಲೀಡಿಂಗ್ ಹೀರೋ. ಆದ್ರೆ, ಅಂತಹ ಚಾನ್ಸ್ ರವಿಶಂಕರ್ ಗೆ ಸಿಗಲೇ ಇಲ್ಲ. ಈಗಲೂ ಸಿಗುತ್ತಿಲ್ಲ.

ಪ್ರತಿಭಾವಂತ ರವಿಶಂಕರ್ ಗೆ ಮಣೆ ಹಾಕಿರುವುದು ನಮ್ಮ ಕನ್ನಡ ಚಿತ್ರರಂಗ. ಕಿಚ್ಚ ಸುದೀಪ್ ನಟಿಸಿ, ನಿರ್ದೇಶಿಸಿದ 'ಕೆಂಪೇಗೌಡ' ಸಿನಿಮಾದಲ್ಲಿ 'ಆರ್ಮುಗಂ' ಆಗಿ ಅಬ್ಬರಿಸಿದ ರವಿಶಂಕರ್ ರಾತ್ರೋ ರಾತ್ರಿ 'ಸ್ಟಾರ್' ಆದರು.

ಈಗ ಅದೇ ರವಿಶಂಕರ್ ರವರನ್ನ 'ಹೀರೋ' ಪಟ್ಟಕ್ಕೆ ಏರಿಸುತ್ತಿರುವುದು ನಮ್ಮ ಸ್ಯಾಂಡಲ್ ವುಡ್.! ಮುಂದೆ ಓದಿ.....

1. ರವಿಶಂಕರ್ ಈಗ ಹೀರೋ.!
ಹೌದು, ಇಲ್ಲಿಯವರೆಗೂ ವಿಲನ್ ಆಗಿ ತೆರೆಮೇಲೆ ಮಿಂಚಿದ್ದ ರವಿಶಂಕರ್ ಇನ್ಮುಂದೆ ಹೀರೋ ಆಗಿ ಮಿಂಚಲಿದ್ದಾರೆ.

2. ಯಾವ ಚಿತ್ರಕ್ಕೆ? 
'ಸುರಭಿ..ಕೇರ್ ಆಫ್ ಸುಬ್ಬು ಡ್ರಾಮಾ ಕಂಪನಿ' ಎಂಬ ಚಿತ್ರಕ್ಕೆ ರವಿಶಂಕರ್ ಹೀರೋ ಆಗಿ ಫಿಕ್ಸ್ ಆಗಿದ್ದಾರೆ.

3.ನಿರ್ದೇಶಕರು ಯಾರು?
'ಶಿವಂ', 'ದಂಡುಪಾಳ್ಯ' ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದ ಶ್ರೀನಿವಾಸ್ ರಾಜು 'ಸುರಭಿ..ಕೇರ್ ಆಫ್ ಸುಬ್ಬು ಡ್ರಾಮಾ ಕಂಪನಿ' ಚಿತ್ರದ ನಿರ್ದೇಶಕ.

4. ರವಿಶಂಕರ್ ಹೀರೋ @ 50.! 
ಸುಮಾರು 50 ವರ್ಷ ವಯಸ್ಸಿನ ರವಿಶಂಕರ್, 'ಸುರಭಿ..ಕೇರ್ ಆಫ್ ಸುಬ್ಬು ಡ್ರಾಮಾ ಕಂಪನಿ' ಚಿತ್ರದಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ. ಹೀಗಾಗಿ, ಅವರ ಪಾತ್ರ ಹಾಗೂ ಲುಕ್ಸ್ ಬಗ್ಗೆ ಗಾಂಧಿನಗರದಲ್ಲಿ ಕುತೂಹಲ ಕೆರಳಿದೆ.

5. ರವಿಶಂಕರ್ ನಟನೆಗೆ ಶ್ರೀನಿವಾಸ್ ರಾಜು ಫಿದಾ.! 
'ದಂಡುಪಾಳ್ಯ' ಚಿತ್ರದಲ್ಲಿ ರವಿಶಂಕರ್ ರವರ ನಟನೆ ನೋಡಿ, ಫಿದಾ ಆಗಿರುವ ನಿರ್ದೇಶಕ ಶ್ರೀನಿವಾಸ್ ರಾಜು ಹಿಂದು ಮುಂದು ನೋಡದೆ 'ಸುರಭಿ..ಕೇರ್ ಆಫ್ ಸುಬ್ಬು ಡ್ರಾಮಾ ಕಂಪನಿ' ಚಿತ್ರಕ್ಕೆ ಚಾಲನೆ ನೀಡಿದ್ದಾರೆ.

6. ತಾರಾಬಳಗದಲ್ಲಿ....
ನಿರ್ದೇಶಕ ಶ್ರೀನಿವಾಸ್ ರಾಜು ಸದ್ಯಕ್ಕೆ 'ಸುರಭಿ..ಕೇರ್ ಆಫ್ ಸುಬ್ಬು ಡ್ರಾಮಾ ಕಂಪನಿ' ಚಿತ್ರವನ್ನ ಅನೌನ್ಸ್ ಮಾಡಿದ್ದಾರೆ ಅಷ್ಟೆ. ರವಿಶಂಕರ್ ಹೀರೋ ಪಾತ್ರಕ್ಕೆ ಫಿಕ್ಸ್ ಆಗಿರುವುದು ಬಿಟ್ಟರೆ, ಬಾಕಿ ತಾರಾಗಣದ ಬಗ್ಗೆ ಇನ್ನೂ ಫೈನಲ್ ಮಾಡಿಲ್ಲ.
Fresh Kannada

Fresh Kannada

No comments:

Post a Comment

Google+ Followers

Powered by Blogger.