Breaking News
recent

ಸುದೀಪ್-ದರ್ಶನ್ ಗ್ಯಾಂಗ್ ನಿಂದ ದಿಢೀರ್ ಸುದ್ದಿ! 'ಮೊಟ್ಟಮೊದಲ ಬಾರಿಗೆ'!

ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ದೋಸ್ತಿ ಈಗ ಮೊದಲಿನ ಹಾಗಿಲ್ಲ. ಇಬ್ಬರ ಸ್ನೇಹದಲ್ಲಿ ಬಿರುಕು ಮೂಡಿರುವ ಹಾಗಿದೆ ಅಂತ ಮಾತನಾಡುವವರ ಸಂಖ್ಯೆ ಕಮ್ಮಿ ಏನಿಲ್ಲ.
ಅಂತವರ ಬಾಯಿಗೆ ಇನ್ನಷ್ಟು ಕಡಲೆ ಸಿಗುವ ಹಾಗೆ, ನಿಮ್ಮೆಲ್ಲರ ಪ್ರೀತಿಯ 'ದಾಸ' ದರ್ಶನ್ ಮೊನ್ನೆಯಷ್ಟೆ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಒಂದು ಎಡವಟ್ಟು ಮಾಡಿದ್ರು.
sudeep darshan deewaar

ಕಿಚ್ಚ ಸುದೀಪ್ ರನ್ನ Unfollow ಮಾಡಿ ಟ್ವಿಟ್ಟರ್ ನಲ್ಲಿ ವಿವಾದ ಸೃಷ್ಟಿಸಿದರು ದರ್ಶನ್. ಇದನ್ನೆಲ್ಲಾ ನೋಡಿದ್ಮೇಲೆ, 'ಕುಚ್ಚಿಕ್ಕು ಗೆಳೆಯರು' ಇನ್ಮುಂದೆ ಒಂದಾಗೋಕೆ ಸಾಧ್ಯವೇ ಇಲ್ಲ ಅಂತ ಭಾವಿಸಿದ ಮಂದಿ ಸಾಕಷ್ಟು. ಮುಂದೆ ಓದಿ.....

1. ಈಗ ಬಂದಿದೆ 'ದಿಢೀರ್ ಸುದ್ದಿ' 
ಕಿಚ್ಚ ಸುದೀಪ್ ಹಾಗೂ ದರ್ಶನ್ ಬಗ್ಗೆ ಇದೀಗ ಸ್ಫೋಟಗೊಂಡಿರುವ 'ದಿಢೀರ್ ಸುದ್ದಿ' ಕೇಳಿದ್ರೆ, ನೀವೂ ನಿಮ್ಮ ಬಾಯಿ ಮೇಲೆ ಬೆರಳಿಡುತ್ತೀರಾ. ಅದೇನು ಅಂತ ಹೇಳ್ತೀವಿ, ಮುಂದೆ ಓದಿ.....

2. ಒಟ್ಟಿಗೆ ಸಿನಿಮಾ ಮಾಡ್ತಾರೆ ದರ್ಶನ್-ಸುದೀಪ್! 
ನೀವು ನಂಬ್ತೀರೋ...ಬಿಡ್ತೀರೋ, 'ಮೊಟ್ಟ ಮೊದಲ ಬಾರಿಗೆ' ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಒಟ್ಟಿಗೆ ಅಭಿನಯಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

3. ಹಾಗಾದ್ರೆ, ಕಿತ್ತಾಟ?
ಫ್ರೆಂಡ್ಸ್ ಅಂದ್ಮೇಲೆ ಕಿತ್ತಾಟ ಸಹಜ. ನೀವು ನಿಮ್ಮ ಫ್ರೆಂಡ್ ಜೊತೆ ಮುನಿಸಿಕೊಳ್ಳುವುದಿಲ್ಲವೇ? ಜಗಳ ಆಡಿದ ಮಾತ್ರಕ್ಕೆ ಗೆಳೆತನಕ್ಕೆ ಎಳ್ಳು-ನೀರು ಬಿಡ್ತೀರಾ? ಇಲ್ಲಾ ತಾನೇ? ಹಾಗೇನೇ! ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮರೆತು 'ದೋಸ್ತಿ ಫಾರ್ಮ್'ಗೆ ಮರಳಿದ್ದಾರೆ ಕಿಚ್ಚ ಸುದೀಪ್ ಹಾಗೂ ದರ್ಶನ್.

4. ಯಾವುದು ಆ ಸಿನಿಮಾ? 
ಇಬ್ಬರು ಸಹೋದರರ ಕಥೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಮೊಟ್ಟ ಮೊದಲ ಬಾರಿಗೆ ತೆರೆ ಹಂಚಿಕೊಳ್ಳಲಿದ್ದಾರೆ.

5. ಸಿನಿಮಾ ರೀಮೇಕೋ, ಸ್ವಮೇಕೋ?
ನಿಜ ಹೇಳ್ಬೇಕಂದ್ರೆ, ದರ್ಶನ್ ಹಾಗೂ ಸುದೀಪ್ for the first time ತೆರೆ ಹಂಚಿಕೊಳ್ಳಲು ಒಪ್ಪಿಕೊಂಡಿರುವ ಸಿನಿಮಾ ರೀಮೇಕ್.

6. ಬಾಲಿವುಡ್ ರೀಮೇಕ್ 
1975 ರಲ್ಲಿ ತೆರೆಕಂಡ ಯಶ್ ಚೋಪ್ರಾ ನಿರ್ದೇಶನದ ಬಾಲಿವುಡ್ ನ ಸೂಪರ್ ಹಿಟ್ ಸಿನಿಮಾ 'ದೀವಾರ್' ಚಿತ್ರದ ಕನ್ನಡ ಅವತರಣಿಕೆಯಲ್ಲಿ ಸುದೀಪ್ ಹಾಗೂ ದರ್ಶನ್ ಮಿಂಚಲಿದ್ದಾರೆ.

7. ಬಾಲಿವುಡ್ ನಲ್ಲಿ ಅಮಿತಾಬ್ ಹಾಗೂ ಶಶಿಕಪೂರ್ ಜೋಡಿ!
'ದೀವಾರ್' ಚಿತ್ರದಲ್ಲಿ ಸಹೋದರರ ಕಥೆ ಇದ್ದು, ಅಮಿತಾಬ್ ಸ್ಮಗ್ಲರ್ ಪಾತ್ರ ನಿರ್ವಹಿಸಿದ್ದರೆ, ಶಶಿ ಕಪೂರ್ ಪೊಲೀಸ್ ಪಾತ್ರದಲ್ಲಿ ಮಿಂಚಿದ್ದರು.

8. ಕನ್ನಡದಲ್ಲಿ ಪೊಲೀಸ್ ಪಾತ್ರಧಾರಿ ಯಾರು?
ಸುದೀಪ್ ಹಾಗೂ ದರ್ಶನ್ ಇಬ್ಬರೂ ಪೊಲೀಸ್ ಪಾತ್ರದಲ್ಲಿ ಮಿಂಚಿ ಜನ ಮನ್ನಣೆ ಗಳಿಸಿದ್ದಾರೆ. ಆದ್ರೆ, ಈ ಚಿತ್ರದಲ್ಲಿ ಯಾರು ಪೊಲೀಸ್ ಪಾತ್ರ ನಿರ್ವಹಿಸುತ್ತಾರೆ ಅನ್ನೋದು ಸದ್ಯಕ್ಕೆ ಇನ್ನೂ ನಿರ್ಧಾರ ಆಗಿಲ್ಲ.

9. ನಿರ್ದೇಶಕರು ಯಾರು?
ಕಿಚ್ಚ ಸುದೀಪ್ ಹಾಗೂ ದರ್ಶನ್ ರನ್ನ ಒಂದು ಮಾಡೋಕೆ ಹೊರಟಿರುವ ನಿರ್ದೇಶಕರು ಬೇರೆ ಯಾರೂ ಅಲ್ಲ, ಸ್ಟೈಲಿಶ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್.

10. 'ದೀವಾರ್' ರೈಟ್ಸ್ ಇಂದ್ರಜಿತ್ ಬಳಿಯಿದೆ! 
ಎರಡು ವರ್ಷದ ಹಿಂದೆ, 'ದೀವಾರ್' ಚಿತ್ರದ ರೀಮೇಕ್ ರೈಟ್ಸ್ ಪಡೆದುಕೊಂಡಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್, ಇದೀಗ ಸಿನಿಮಾ ಮಾಡುವ ಮನಸ್ಸು ಮಾಡಿದ್ದಾರೆ.

11. ಏನಂತಾರೆ ಇಂದ್ರಜಿತ್ ಲಂಕೇಶ್?
''ಯಶ್ ಚೋಪ್ರಾ ನನ್ನ ಫೇವರಿಟ್ ಡೈರೆಕ್ಟರ್. 'ದೀವಾರ್' ನನ್ನ ಫೇವರಿಟ್ ಸಿನಿಮಾ. ನಾನು ಅದರ ರೀಮೇಕ್ ರೈಟ್ಸ್ ಪಡೆದುಕೊಂಡಿದ್ದೀನೆ. ಎರಡು ವರ್ಷದ ಹಿಂದೆ ರೈಟ್ಸ್ ತಗೊಂಡು, ಸುದೀಪ್-ದರ್ಶನ್ ಗೆ ಸಿನಿಮಾ ಮಾಡ್ಬೇಕು ಅಂತಿದ್ದೆ. ಮಾಡ್ತೀನಿ..'' ಅಂತಾರೆ ನಿರ್ದೇಶಕ ಇಂದ್ರಜಿತ್ ಲಂಕೇಶ್.

12. ಸುದೀಪ್-ದರ್ಶನ್ ಬೇಕು! 
''ದೀವಾರ್' ಚಿತ್ರದ ಪಾತ್ರಗಳಿಗೆ ಕನ್ನಡದಲ್ಲಿ ಸುದೀಪ್ ಮತ್ತು ದರ್ಶನ್ ಬಿಟ್ಟು ಇನ್ಯಾರೂ ಜೀವ ತುಂಬಲು ಸಾಧ್ಯವಿಲ್ಲ. ಅವರಿಬ್ಬರನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ರೀಮೇಕ್ ಹಕ್ಕನ್ನು ಖರೀದಿಸಿದ್ದೇನೆ'' ಅಂತಾರೆ ಇಂದ್ರಜಿತ್ ಲಂಕೇಶ್.

13. ಇಬ್ಬರಿಗೂ ಇಂದ್ರಜಿತ್ ಆಪ್ತ
ನಿಮಗೆ ಗೊತ್ತಿರುವ ಹಾಗೆ, ಸುದೀಪ್ ಗೆ ಇಂದ್ರಜಿತ್ ಲಂಕೇಶ್ ಕ್ಲೋಸ್ ಫ್ರೆಂಡ್. 'ಲವ್ ಯು ಆಲಿಯ' ಸೇರಿದಂತೆ, ಇಂದ್ರಜಿತ್ ಲಂಕೇಶ್ ಆಕ್ಷನ್ ಕಟ್ ಹೇಳಿರುವ ಅನೇಕ ಚಿತ್ರಗಳಲ್ಲಿ ಸುದೀಪ್ ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನೂ ದರ್ಶನ್ ಕೂಡ ಇಂದ್ರಜಿತ್ ಲಂಕೇಶ್ ರವರ 'ಮೊನಾಲಿಸಾ' ಚಿತ್ರದ ಹಾಡೊಂದಕ್ಕೆ ಸ್ಟೆಪ್ ಹಾಕಿದ್ದರು. ಹೀಗಾಗಿ, ಇಬ್ಬರು ದಿಗ್ಗಜರನ್ನ ಒಂದು ಮಾಡಲು ಇಂದ್ರಜಿತ್ ಗೆ ಕಷ್ಟದ ಕೆಲಸ ಅಲ್ಲವೇ ಅಲ್ಲ.

14. ಹೀರೋಯಿನ್ ಯಾರು? 
'ದೀವಾರ್' ಚಿತ್ರದಲ್ಲಿ ನಾಯಕಿ ಪರ್ವೀನ್ ಬಾಬಿ ರದ್ದು ಬೋಲ್ಡ್ ಪಾತ್ರ. ಕನ್ನಡದಲ್ಲಿ ಆ ಪಾತ್ರವನ್ನ ಯಾರು ನಿಭಾಯಿಸುತ್ತಾರೆ ಗೊತ್ತಿಲ್ಲ. ಹೇಗಿದ್ದರೂ, ಇಂದ್ರಜಿತ್ ಗೆ ಬಾಲಿವುಡ್ ಚಿರಪರಿಚಿತ. ಅಲ್ಲಿಂದಲೇ, ಬೆಡಗಿಯರನ್ನ ಬರಮಾಡಿಕೊಂಡರೆ ಅಚ್ಚರಿ ಇಲ್ಲ.

15. ಶೂಟಿಂಗ್ ಯಾವಾಗಿಂದ ಶುರು? 
ದರ್ಶನ್ ಕಾಲ್ ಶೀಟ್ ಇನ್ನು ಮೂರು ವರ್ಷ ಖಾಲಿ ಇಲ್ಲ. ಸುದೀಪ್ ರವರದ್ದೂ ಇದೇ ಕಥೆ. ಹೀಗಾಗಿ ಸದ್ಯದ ಕಮಿಟ್ಮೆಂಟ್ ಗಳನ್ನೆಲ್ಲಾ ಮುಗಿಸಿ, ಇಂದ್ರಜಿತ್ ರವರ ಕನಸಿನ ಸಿನಿಮಾಗೆ ಚಾಲನೆ ನೀಡಲಿದ್ದಾರೆ 'ಆಪ್ತ ಗೆಳೆಯರು'.

16. ಅಭಿಮಾನಿಗಳ ಆಸೆಯೂ ಇದೆ 
ಕಿಚ್ಚ ಸುದೀಪ್ ಹಾಗೂ ದರ್ಶನ್ ಒಟ್ಟಾಗಿ ಕಾಣಿಸಿಕೊಳ್ಳುವುದು ಯಾವಾಗ ಅಂತ ಅವರಿಬ್ಬರ ಅಭಿಮಾನಿಗಳೂ ಕೂಡ ತುದಿಗಾಲಲ್ಲಿ ನಿಂತು ಕಾಯ್ತಿದ್ದಾರೆ. ಅಂತಹ ಫ್ಯಾನ್ಸ್ ಗೆ ಇದು ಸ್ವೀಟ್ ನ್ಯೂಸ್ ತಾನೇ?

17. HAPPY ALL FOOL'S DAY MONTH.
ಕಿಚ್ಚ ಸುದೀಪ್ ಮತ್ತು ದರ್ಶನ್ ಒಟ್ಟಾಗಿ 'ಮೊಟ್ಟ ಮೊದಲ ಬಾರಿಗೆ' ನಟಿಸುವ ಈ ದಿಢೀರ್ ಸುದ್ದಿ ಓದಿದ ಎಲ್ಲರಿಗೂ HAPPY ALL FOOL'S DAY MONTH. 'ದೀವಾರ್' ಚಿತ್ರದ ರೀಮೇಕ್ ಹಕ್ಕನ್ನ ಇಂದ್ರಜಿತ್ ಲಂಕೇಶ್ ಖರೀದಿಸಿರುವುದು ನಿಜ. ಅದರಲ್ಲಿ ಸುದೀಪ್ ಹಾಗೂ ದರ್ಶನ್ ಒಂದಾಗಿ ನಟಿಸಬೇಕು ಎಂಬುದು ಇಂದ್ರಜಿತ್ ಲಂಕೇಶ್ ರವರ ಅಭಿಲಾಷೆ ಅನ್ನೋದು ಅಷ್ಟೇ ಸತ್ಯ. ಇಬ್ಬರ ಬಳಿ ಇಂದ್ರಜಿತ್ ಈಗಾಗಲೇ ಮಾತುಕತೆ ನಡೆಸಿದ್ರೂ, ಪ್ರಾಜೆಕ್ಟ್ ಗಿನ್ನೂ ಸುದೀಪ್-ದರ್ಶನ್ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಮುಂದೆ ಚಾಲನೆ ಕೊಟ್ಟರೂ ಕೊಡಬಹುದು. ಆ ಸಮಯ ಬೇಗ ಬರಲಿ ಅನ್ನೋದು 'ಕಿಚ್ಚ-ದಾಸ' ಅಭಿಮಾನಿಗಳ ಹಾರೈಕೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.