Breaking News
recent

ನವದೆಹಲಿಯ ಚಲನಚಿತ್ರೋತ್ಸವದಲ್ಲಿ ಕನ್ನಡ ಚಿತ್ರಗಳ ಅಬ್ಬರ

ಕರ್ನಾಟಕ ಚಲನಚಿತ್ರ ಅಕಾಡೆಮಿ, ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ಚಲನಚಿತ್ರೋತ್ಸವ ನಿರ್ದೇಶನಾಲಯ ಒಟ್ಟಾಗಿ ಸೇರಿ ದೆಹಲಿಯಲ್ಲಿ ಹಮ್ಮಿಕೊಂಡಿರುವ ಕನ್ನಡ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ಕನ್ನಡದ ಒಟ್ಟು 9 ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.

ಇದೇ ಏಪ್ರಿಲ್ 16 ರಿಂದ 18ರವರೆಗೆ ಜರುಗಲಿರುವ ಚಿತ್ರ ಉತ್ಸವ ಸಮಾರಂಭ 16ನೇ ತಾರೀಖಿನಂದು ಬೆಳಗ್ಗೆ ಸರಿಯಾಗಿ 10.15ಕ್ಕೆ ಉದ್ಘಾಟನೆಗೊಳ್ಳಲಿದೆ. ಕಾರ್ಯಕ್ರಮವನ್ನು ನವದೆಹಲಿಯ ಆಗಸ್ಟ್ ಕ್ರಾಂತಿ ಮಾರ್ಗದಲ್ಲಿರುವ ಸಿರಿಫೋರ್ಟ್ ಆಡಿಟೋರಿಯಂ-2 ನಲ್ಲಿ ಹಮ್ಮಿಕೊಳ್ಳಲಾಗಿದೆ.

ನಮ್ಮ ಸ್ಯಾಂಡಲ್ ವುಡ್ ನ ಬಿಗ್ ಸ್ಟಾರ್ ಗಳು ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವುದರಿಂದ ಯಾರೂ ಈ ಸಮಾರಂಭದಲ್ಲಿ ಭಾಗವಹಿಸುತ್ತಿಲ್ಲ. 'ಆದರೆ ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಸ್ಟಾರ್ ನಟ-ನಟಿಯರನ್ನು ಇಂತಹ ಕಾರ್ಯಕ್ರಮಗಳಿಗೆ ಕರೆತರುತ್ತೇವೆ' ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ತಿಳಿಸಿದ್ದಾರೆ.

ಅಂದಹಾಗೆ ಈ ಸಮಾರಂಭದಲ್ಲಿ ನಿರ್ದೇಶಕ ರಾಮ್ ರೆಡ್ಡಿ ಅವರ ತಿಥಿ, ಬಿ.ಎಸ್ ಲಿಂಗದೇವರ 'ನಾನು ಅವನಲ್ಲ ಅವಳು', ಅನುಪ್ ಭಂಡಾರಿ ಅವರ 'ರಂಗಿತರಂಗ', ಮನ್ಸೂರೆ ಅವರ 'ಹರಿವು', ಪಿ.ಶೇಷಾದ್ರಿ ಅವರ 'ವಿದಾಯ', ಶಶಾಂಕ್ ಅವರ 'ಕೃಷ್ಣಲೀಲಾ', ಸಂತೋಷ್ ಆನಂದ್ ರಾಮ್ ಅವರ 'ಮಿ.ಅಂಡ್ ಮಿಸಸ್ ರಾಮಾಚಾರಿ', ನರೇಶ್ ಕುಮಾರ್ ಅವರ 'ಫಸ್ಟ್ ರ್ಯಾಂಕ್ ರಾಜು', ಹಾಗೂ ಪಿ.ವಾಸು ಅವರ 'ಶಿವಲಿಂಗ' ಸಿನಿಮಾ ಪ್ರದರ್ಶನಗೊಳ್ಳಲಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.