Breaking News
recent

'ಬ್ಯೂಟಿಫುಲ್ ಮನಸುಗಳ' ಚಾಯ್ ಪೇ ಚರ್ಚಾ

ನಿರ್ದೇಶಕ ಪವನ್ ಕುಮಾರ್ ಅವರ 'ಲೂಸಿಯಾ'  ಸಿನಿಮಾದಲ್ಲಿ ಒಂದಾಗಿದ್ದ ನಟಿ ಶ್ರುತಿ ಹರಿಹರನ್ ಮತ್ತು ನಟ ನಿನಾಸಂ ಸತೀಶ್ ಅವರು ಮತ್ತೆ 'ಬ್ಯೂಟಿಫುಲ್ ಮನಸುಗಳು' ಚಿತ್ರದ ಮೂಲಕ ಒಂದಾಗಿದ್ದಾರೆ. ಚಿತ್ರಕ್ಕೆ 'ಬುಲೆಟ್ ಬಸ್ಯಾ' ಖ್ಯಾತಿಯ ನಿರ್ದೇಶಕ ಜಯತೀರ್ಥ ಅವರು ಆಕ್ಷನ್-ಕಟ್ ಹೇಳುತ್ತಿದ್ದಾರೆ.
beautiful manasugalu

ಅಂದಹಾಗೆ ಚಿತ್ರೀಕರಣದ ಜೊತೆ-ಜೊತೆಗೆ ಥೀಮ್ ಫೋಟೋ ಶೂಟ್ ಮಾಡಿ ಮುಗಿಸಿರುವ ಚಿತ್ರತಂಡ ಐದು ಎಳೆಗಳಿರುವ ಕಥೆಯನ್ನು ಈ ಚಿತ್ರದಲ್ಲಿ ಹೆಣೆಯುತ್ತಿದ್ದಾರೆ.

ಈಗಾಗಲೇ ನಡೆಸಿರುವ ಫೋಟೋ ಶೂಟ್ ಐದು ಎಳೆಯ ಕಥೆಗೆ ಹೊಂದಾಣಿಕೆಯಾಗುತ್ತಿದ್ದು, ಮೊದಲನೇ ಕಥೆ ಬೋಟಿ ಮತ್ತು ಟೀ. ಅಂದರೆ ನಾಯಕ ಬಾರ್ ಮಾಲೀಕನ ಮಗ, ಅವನು ದೇವಸ್ಥಾನದಲ್ಲಿ ಪೂಜಾರಿಯಾಗಿರುವವರ ಮಗಳನ್ನು ಭೇಟಿ ಮಾಡುತ್ತಾನೆ.('ಬ್ಯೂಟಿಫುಲ್ ಮನಸುಗಳ' ಚಾಯ್ ಪೇ ಚರ್ಚಾ)

ಅವರ ಪ್ರೀತಿ ಎಷ್ಟು ಸರಳವಾಗಿರುತ್ತದೆ ಎಂದರೆ, ಅವರ ಮೊದಲ ರೋಮ್ಯಾಂಟಿಕ್ ಮಾತುಕತೆ ನಡೆಯುವುದೆಲ್ಲವೂ ಟೀ ಕುಡಿಯುವಾಗ ಅದನ್ನು ಈ ಚಿತ್ರದಲ್ಲಿ ಸೆರೆಹಿಡಿಯಲಾಗಿದೆ' ಎನ್ನುತ್ತಾರೆ ನಿರ್ದೇಶಕ ಜಯತೀರ್ಥ.

ಎರಡನೇ ಹಂತದ ಚಿತ್ರೀಕರಣ ಏಪ್ರಿಲ್ 21 ರಿಂದ ಆರಂಭವಾಗಲಿದ್ದು, ಚಿತ್ರಕ್ಕೆ ಸಂಗೀತ ನಿರ್ದೇಶಕ ಬಿಜೆ ಭರತ್ ಅವರು ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ಕಿರಣ್ ಹಂಪಾಪುರ ಅವರು ಕ್ಯಾಮರಾ ಕೈ ಚಳಕ ತೋರಿದ್ದು, ಮೇ ತಿಂಗಳ ಅಂತ್ಯಕ್ಕೆ ಚಿತ್ರೀಕರಣ ಮುಗಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.