Breaking News
recent

ಭಂಡಾರಿ ಸಹೋದರರ ಹೊಸ ಚಿತ್ರಕ್ಕೆ ಒಳ್ಳೆ ಲೊಕೇಶನ್ ಇದ್ರೆ ಹೇಳಿ

ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಕೋಲ್ಮಿಂಚಾಗಿ ಪರಿಣಮಿಸಿದ ಭಂಡಾರಿ ಸಹೋದರರ 'ರಂಗಿತರಂಗ' ಚಿತ್ರತಂಡ ಹೊಸ ಪ್ರಾಜೆಕ್ಟ್ ಒಂದನ್ನು ಕೈಗೆತ್ತಿಕೊಂಡಿದ್ದು, ಅದಕ್ಕಾಗಿ ಈ ಮೊದಲು ಟ್ಯಾಲೆಂಟ್ ಹಂಟ್ ಒಂದನ್ನು ಏರ್ಪಡಿಸಿತ್ತು. ಇದೀಗ ಹೊಸದಾಗಿ ಲೊಕೇಶನ್ ನ ಹುಡುಕಾಟದಲ್ಲಿ ತೊಡಗಿದೆ. 

ಇಷ್ಟು ದಿನ ಸಹೋದರ ನಿರುಪ್ ಭಂಡಾರಿ ಅವರ ಮದುವೆಯ ಕಾರ್ಯ ಹಾಗೂ ಓಡಾಟಗಳಲ್ಲಿ ಬ್ಯುಸಿಯಾಗಿದ್ದ ನಿರ್ದೇಶಕ ಅನುಪ್ ಭಂಡಾರಿ ಅವರು ಇದೀಗ ಮುಂದಿನ ಚಿತ್ರದ ಕೆಲಸದ ಕಡೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ.

ಹೊಸ ಚಿತ್ರದ ಕಥೆ ಈಗಾಗಲೇ ರೆಡಿಯಾಗಿದ್ದು, ಚಿತ್ರಕ್ಕೆ ನಾಯಕನಾಗಿ ನಿರುಪ್ ಭಂಡಾರಿ ಅವರೇ ಆಯ್ಕೆಯಾಗಿದ್ದಾರೆ. ಇನ್ನುಳಿದಂತೆ ಪಾತ್ರವರ್ಗವನ್ನು ಕೂಡ ಅನುಪ್ ಭಂಡಾರಿ ಅವರು ಬಹುತೇಕ ಫೈನಲ್ ಮಾಡಿದ್ದಾರೆ. 

ಇನ್ನು ಸದ್ಯಕ್ಕೆ ಉಳಿದಿರೋದು ಅಂದ್ರೆ ಚಿತ್ರದ ಶೂಟಿಂಗ್ ಗಾಗಿ ಲೊಕೇಶನ್ ಗಳ ಹುಡುಕಾಟ. ಅದಕ್ಕಾಗಿ ಅನುಪ್ ಭಂಡಾರಿ ಅವರು ಹೊಸ ಐಡಿಯಾ ಹುಡುಕಿದ್ದಾರೆ. ಅದೇನಪ್ಪಾ ಅಂದ್ರೆ ಸಾಮಾಜಿಕ ಜಾಲತಾಣದ ಮೊರೆ ಹೋಗಿದ್ದಾರೆ.

'ರಂಗಿತರಂಗ' ಚಿತ್ರದಲ್ಲಿ ಪಶ್ಚಿಮ ಘಟ್ಟ ಪ್ರದೇಶ, ಕರಾವಳಿ, ಹಾಗೂ ಊಟಿಯ ಸುಂದರ ಪರಿಸರ ತೋರಿಸಿದ್ದ ಅನುಪ್ ಅವರು ಹೊಸ ಚಿತ್ರದ ಶೂಟಿಂಗ್ ಗಾಗಿ ಜಾಗ ಹುಡುಕಲು ಜನರ ಅಭಿಪ್ರಾಯ ಕೇಳುತ್ತಿದ್ದಾರೆ. 

'ಕರ್ನಾಟಕ, ಭಾರತ, ಯುರೋಪ್ ನ ಕಾಡು, ಬೆಟ್ಟ, ನದಿ, ಕೆರೆ ಅಥವಾ ಯಾವುದೇ ಅದ್ಭುತ ಪ್ರಾಕೃತಿಕ ತಾಣಗಳ ಭಾವಚಿತ್ರ ಹಾಗೂ ಮಾಹಿತಿ ಇದ್ದಲ್ಲಿ ದಯವಿಟ್ಟು gbthefilm@gmail.com ಗೆ ಕಳುಹಿಸಿ ಎಂದು ಅನುಪ್ ಭಂಡಾರಿ ಅವರು ತಮ್ಮ ಫೇಸ್ ಬುಕ್ಕಿನಲ್ಲಿ ಮನವಿ ಮಾಡಿಕೊಂಡಿದ್ದಾರೆ. ಯಾರಿಗಾದರೋ ಬೆಸ್ಟ್ ಲೊಕೇಶನ್ ಸಿಕ್ಕಿದಲ್ಲಿ ಅನುಪ್ ಭಂಡಾರಿ ಅವರ ಈ gbthefilm@gmail.com ಇ-ಮೇಲ್ ಐಡಿಗೆ ಮಾಹಿತಿ ರವಾನಿಸಿ.
Fresh Kannada

Fresh Kannada

No comments:

Post a Comment

Google+ Followers

Powered by Blogger.