Breaking News
recent

ಇದಕ್ಕೆ ಅಭಿಮಾನ ಅಂತೀರಾ? 'ಗಬ್ಬರ್' ನೋಡೋಕೆ 'ಪಾಪರ್' ಆಗ್ಬೇಕಾ?

ಪವರ್ ಸ್ಟಾರ್ ಪವನ್ ಕಲ್ಯಾಣ್ ಸಿನಿಮಾಗಳು ರಿಲೀಸ್ ಆಗುತ್ತೆ ಅಂದ್ರೆ ಇಡೀ ಟಾಲಿವುಡ್ ನಲ್ಲಿ ಸಂಚಲನ ಸೃಷ್ಟಿಯಾಗುತ್ತೆ. ತೆಲುಗು ಸಿನಿ ಅಂಗಳದ ಬಾಕ್ಸ್ ಆಫೀಸ್ ಗಡ ಗಡ ನಡುಗುತ್ತೆ. ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ಪವನ್ ರ ಬೃಹತ್ ಕಟೌಟ್ ಗೆ ಹಾಲಿನ ಅಭಿಷೇಕ, ಹೂವಿನ ಅಲಂಕಾರ ಮಾಡ್ತಾರೆ. ಇದೆಲ್ಲಾ ಕಾಮನ್ ಬಿಡಿ...ಇವೆಲ್ಲದಕ್ಕಿಂತ ಒಂದು ವಿಚಿತ್ರ ಅಭಿಮಾನದ ಕಥೆ ಹೇಳ್ತೀವಿ ಕೇಳಿ....
Pawan Kalyans Sardaar Gabbar Singh Movie

ಪವನ್ ಕಲ್ಯಾಣ್ ರವರ ಎಲ್ಲಾ ಅಭಿಮಾನಿಗಳಿಗಿಂತ ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ಕರ್ನೂಲ್ ನ ಭೂಪ ಏಪ್ರಿಲ್ 8 ರಂದು ಬಿಡುಗಡೆ ಆಗುತ್ತಿರುವ 'ಸರ್ದಾರ್ ಗಬ್ಬರ್ ಸಿಂಗ್' ಚಿತ್ರದ ಟಿಕೆಟ್ ಖರೀದಿ ಮಾಡಲು ತನ್ನ ಸ್ವಂತ ಮನೆಯನ್ನ ಮಾರಿದ್ದಾನೆ.!

ತನ್ನ ಮನೆಯ ಮಾರಾಟದಿಂದ ಬಂದ ಬರೋಬ್ಬರಿ 10 ಲಕ್ಷ ರೂಪಾಯಿ ಹಣದಲ್ಲಿ ಲಕ್ಷಕ್ಕಿಂತಲೂ ಹೆಚ್ಚು ಟಿಕೆಟ್ ಗಳನ್ನ ಕೊಂಡುಕೊಂಡಿದ್ದಾನೆ ಪವನ್ ಕಲ್ಯಾಣ್ ಅಪ್ಪಟ ಭಕ್ತ. ಅಲ್ಲದೆ, ಆ ಎಲ್ಲಾ ಟಿಕೆಟ್ ಗಳನ್ನ ಪವನ್ ಕಲ್ಯಾಣ್ ರವರ ಸಮಸ್ತ ಅಭಿಮಾನಿಗಳಿಗೆ ಉಚಿತವಾಗಿ ಹಂಚಿದ್ದಾನಂತೆ.!

ಇದಕ್ಕೆ ಅಭಿಮಾನ ಅಂತೀರಾ...ಮೇನಿಯಾ ಅಂತೀರಾ...ಇಲ್ಲಾ, ಹಿಸ್ಟೀರಿಯಾ ಅಂತ ವರ್ಣನೆ ಮಾಡುತ್ತೀರಾ ನೀವೇ ನಿರ್ಧರಿಸಿ.!

ಅಷ್ಟಕ್ಕೂ, 'ಸರ್ದಾರ್ ಗಬ್ಬರ್ ಸಿಂಗ್' ಚಿತ್ರದ ಟಿಕೆಟ್ ಗಾಗಿ ಮನೆ ಮಾರಿದ ಆ ಭೂಪನ ಪೂರ್ವಾಪರ ಲಭ್ಯವಾಗಿಲ್ಲ.

ಅಂದ್ಹಾಗೆ, ಯುಗಾದಿ ಹಬ್ಬದ ಪ್ರಯುಕ್ತ ಬಿಡುಗಡೆ ಆಗುತ್ತಿರುವ 'ಸರ್ದಾರ್ ಗಬ್ಬರ್ ಸಿಂಗ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವವರು ಕೆ.ಎಸ್.ರವೀಂದ್ರ. ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿರುವ ಈ ಚಿತ್ರದಲ್ಲಿ ಪವನ್ ಕಲ್ಯಾಣ್ ಜೊತೆ ಕಾಜಲ್ ಅಗರ್ವಾಲ್ ಡ್ಯುಯೆಟ್ ಹಾಡಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.