Breaking News
recent

ಡಾ.ರಾಜ್ ರವರ ಅಪರೂಪದ ಭಾವಚಿತ್ರಗಳು

ಡಾ.ರಾಜ್ ಕುಮಾರ್....ಕನ್ನಡ ಕಲಾಲೋಕ ಎಂದಿಗೂ ಮರೆಯದ ಹೆಸರು.


ಕನ್ನಡ ಚಿತ್ರ ಜಗತ್ತಿನ ದಂತಕಥೆ, ಕರುನಾಡಿನಾದ್ಯಂತ ಮನೆಮನಗಳಲ್ಲಿ ಸದಾ ಸರ್ವಕಾಲ ವಿರಾಜಮಾನಗೊಂಡಿರುವ ಕಲಾದೈವ, ಶಿಸ್ತಿಗೆ ಸರಳತೆಗೆ ಮತ್ತೊಂದು ಹೆಸರೇ ಡಾ.ರಾಜ್ ಕುಮಾರ್. ಈ ಅದಮ್ಯ ಚೇತನ ಇಂದಿಗೂ ಎಂದೆಂದಿಗೂ ಅಜರಾಮರ.

ಪ್ರತಿಯೊಂದು ಚಿತ್ರದಲ್ಲೂ ಮಾದರಿಯಾಗಿ ನಿಲ್ಲುವ ಡಾ.ರಾಜ್, 'ಕಸ್ತೂರಿ ನಿವಾಸ' ಸಿನಿಮಾದ ತ್ಯಾಗಿ ಆಗಿ ವೀರ'ಬಬ್ರುವಾಹನ'ನಾಗಿ ಕಲಾಭಿಮಾನಿಗಳ ಮನಗೆದ್ದವ್ರು.

1929, ಏಪ್ರಿಲ್ 24 ರಂದು ಜನಿಸಿದ ಮುತ್ತುರಾಜ್, ಐದು ದಶಕಗಳ ಕಲಾಸೇವೆಗೆ ಅಸಂಖ್ಯ ಪ್ರಶಸ್ತಿ ಮತ್ತು ಅಭಿಮಾನಿ ದೇವರುಗಳ ಅನಂತ ಪ್ರೀತಿಯನ್ನು ಪಡೆದವರು.

2006, ಏಪ್ರಿಲ್ 12 ರಂದು ರಾಜ್ ಕುಮಾರ್ ನಮ್ಮನಗಲಿದ್ರು. ಆ ದಿನ ಇಡೀ ಕರ್ನಾಟಕ ಜರ್ಜರಿತವಾಗಿತ್ತು. ಕನ್ನಡ ಚಿತ್ರೋದ್ಯಮ ಇನ್ನೂ ಆ ಗಾಯದಿಂದ ಹೊರಬಂದಿಲ್ಲ.

ಡಾ.ರಾಜ್ ಕುಮಾರ್ ರವರ ಸವಿನೆನಪಿನಲ್ಲಿ ಇದೋ ನಿಮಗಾಗಿ ನಿಮ್ಮ 'ಫ್ರೆಶ್ ಕನ್ನಡ.ಕಾಮ್'ದಲ್ಲಿ ಅವರ ಅಪರೂಪದ ಭಾವಚಿತ್ರಗಳ ಗ್ಯಾಲರಿ.... ಕೆಳಗಿರುವ ಫೋಟೋ ಕ್ಲಿಕ್ ಮಾಡಿ.

ಡಾ. ರಾಜ್ ಕುಮಾರ್ ಅವರ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯಲು ಈ ವಿಡಿಯೋ ನೋಡಿ..
Fresh Kannada

Fresh Kannada

No comments:

Post a Comment

Google+ Followers

Powered by Blogger.