Breaking News
recent

ರಾಜ್-ವಿಷ್ಣು ಬೇರೆ ಬೇರೆಯಲ್ಲ, ಒಬ್ಬನೇ!

‘ಅಧ್ಯಕ್ಷ’ ಚಿತ್ರದ ಬಳಿಕ ಶರಣ್- ಚಿಕ್ಕಣ್ಣ ಜೋಡಿಯಾಗಿ ಮೋಡಿ ಮಾಡಲು ಮುಂದಾಗಿರುವ ಚಿತ್ರ ‘ರಾಜ್- ವಿಷ್ಣು’. ಇನ್ನೊಂದು ವಾರದಲ್ಲಿ ಸೆಟ್ಟೇರಲಿರುವ ಈ ಚಿತ್ರ ತಮಿಳಿನ ‘ರಜನಿ ಮುರುಗನ್’ ರಿಮೇಕ್. ರಾಮು ನಿರ್ಮಾಣ, ಕೆ. ಮಾದೇಶ್ ನಿರ್ದೇಶನದ ‘ರಾಜ್ ವಿಷ್ಣು’ ಚಿತ್ರದಲ್ಲೊಂದು ಬದಲಾವಣೆಯಾಗಿದೆ. ಅದೆಂದರೆ, ನಾಯಕಿ. ಈ ಮೊದಲು ಘೋಷಣೆಯಾಗಿದ್ದಂತೆ, ಮಲಯಾಳಿ ನಟಿ ರಮ್ಯಾ ನಂಬೀಸನ್ ಆಯ್ಕೆಯಾಗಿದ್ದರು. ಇದೀಗ, ಚಿತ್ರದಿಂದ ರಮ್ಯಾ ಹೊರನಡೆದಿದ್ದಾರೆ.
Raj Vishnu kannada movie
ಗಣೇಶ್ ಅಭಿನಯದ ‘ಸ್ಟೈಲ್ ಕಿಂಗ್’ ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿ ನೀಡಿದ್ದ ಗಾಯಕಿ ಕಮ್ ನಾಯಕಿ ರಮ್ಯಾ ನಂಬೀಸನ್, ‘ರಾಜ್ ವಿಷ್ಣು’ ಚಿತ್ರದಲ್ಲಿ ಶರಣ್ ಜತೆ ಡ್ಯುಯೆಟ್ ಹಾಡಲಿದ್ದಾರೆ ಎಂದು ಸುದ್ದಿಯಾಗಿತ್ತು. ‘ಸ್ಟೈಲ್ ಕಿಂಗ್’ ತೆರೆಕಾಣುವ ಮೊದಲೇ ಮತ್ತೊಂದು ಕನ್ನಡ ಚಿತ್ರಕ್ಕೆ ರಮ್ಯಾ ಆಯ್ಕೆಯಾಗಿದ್ದು ಅಚ್ಚರಿಯನ್ನೂ ತಂದಿತ್ತು. ಆದರೀಗ, ಬಂದಷ್ಟೇ ವೇಗದಲ್ಲಿ ‘ರಾಜ್ ವಿಷ್ಣು’ವಿನಿಂದ ಅವರು ಹೊರನಡೆದಿದ್ದಾರೆ. ನಾಯಕ ಶರಣ್ ಹೇಳಿಕೊಳ್ಳುವ ಪ್ರಕಾರ, ಡೇಟ್ಸ್ ಸಮಸ್ಯೆಯಿಂದಾಗಿ ರಮ್ಯಾ ನಟಿಸುತ್ತಿಲ್ಲ. ಅವರ ಜಾಗಕ್ಕೆ ಬೇರೊಬ್ಬರ ಹುಡುಕಾಟ ನಡೆಯುತ್ತಿದೆ!
ಮೂಲ ಚಿತ್ರದಲ್ಲಿ ಶಿವಕಾರ್ತಿಕೇಯನ್- ಸೂರಿ ನಿರ್ವಹಿಸಿದ ಪಾತ್ರಗಳಿಗೆ ಶರಣ್- ಚಿಕ್ಕಣ್ಣ ಜೀವ ತುಂಬಲಿದ್ದಾರೆ. ಪ್ರಮುಖ ಪಾತ್ರವೊಂದಕ್ಕೆ ‘ರೆಬಲ್ ಸ್ಟಾರ್’ ಅಂಬರೀಶ್ ಬಣ್ಣ ಹಚ್ಚಲಿದ್ದಾರೆ ಎನ್ನುವ ಸುದ್ದಿಯೂ ಇದೆ. ಆದರೆ, ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ‘ರಜನಿ ಮುರುಗನ್’ನಲ್ಲಿ ನಾಯಕಿಯಾಗಿ ಕೀರ್ತಿ ಸುರೇಶ್ ಕಾಣಿಸಿಕೊಂಡಿದ್ದರು. ಕನ್ನಡಕ್ಕೆ ರಮ್ಯಾ ಆಯ್ಕೆಯಾಗಿದ್ದರು, ಈಗ ಇಲ್ಲ. ಹಾಗಾಗಿ, ‘ರಾಜ್ ವಿಷ್ಣು’ ಬಳಗ ಹೊಸ ನಾಯಕಿ ಹುಡುಕಾಟದಲ್ಲಿ ಮಗ್ನವಾಗಿದೆ.
Remya nambeesan

ಇನ್ನು, ‘ರಾಜ್ ವಿಷ್ಣು’ ಬಗೆಗೆ ನಾಯಕ ಶರಣ್ ಭಾರೀ ನಿರೀಕ್ಷೆ ಗಳನ್ನಿಟ್ಟುಕೊಂಡಿದ್ದಾರೆ. ಮೂಲ ಕಥೆಯಲ್ಲಿ ಕೊಂಚ ಬದಲಾವಣೆ ತಂದುಕೊಂಡಿದ್ದೇವೆ. ಇಲ್ಲೂ ಪ್ರೇಕ್ಷಕನನ್ನು ನಕ್ಕು ನಲಿಸುವುದೇ ಏಕೈಕ ಗುರಿ. ‘ರಾಜ್- ವಿಷ್ಣು’ ಎಂದರೆ, ಒಬ್ಬನೇ. ಇಬ್ಬರಲ್ಲ. ಡಾ. ರಾಜ್ ಅಭಿಮಾನಿಯಾದ ಅಪ್ಪ ತನ್ನ ಮಗನಿಗೆ ರಾಜ್ ಅಂತ ಹೆಸರಿಟ್ಟಿರುತ್ತಾನೆ. ಆದರೆ, ಆ ಮಗುವಿನ ತಾತ ವಿಷ್ಣುವರ್ಧನ್ ಅಭಿಮಾನಿ. ಆಗ ಶುರುವಾಗುವ ತಗಾದೆಯಲ್ಲಿ ಮಗುವಿಗೆ ‘ರಾಜ್ ವಿಷ್ಣು’ ಅಂತ ನಾಮಕರಣ ಮಾಡಲಾಗುತ್ತದೆ ಎಂದು ಚಿತ್ರದ ಕುರಿತು ವಿವರ ಕೊಡುತ್ತಾರವರು.
Fresh Kannada

Fresh Kannada

No comments:

Post a Comment

Google+ Followers

Powered by Blogger.