Breaking News
recent

ಆತ್ಮಹತ್ಯೆಗೆ ಯತ್ನಿಸಿದ ಶಶಿಕುಮಾರ್ ಸಹಾಯಕ್ಕೆ ನಿಂತ ನಾಯಕಿ ಸೋನು!

ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿ ವರ್ಷವೇ ಉರುಳಿದರೂ, 'ಹಾಫ್ ಮೆಂಟ್ಲು' ಮಾತ್ರ ನಿಮ್ಮ ಎದುರಿಗೆ ಬಂದಿರಲಿಲ್ಲ. 'ಹಾಫ್ ಮೆಂಟ್ಲು' ಚಿತ್ರ ಬಿಡುಗಡೆ ಮಾಡಲು ಹರಸಾಹಸ ಪಟ್ಟಿದ್ದ ನಿರ್ಮಾಪಕ ಶಶಿಕುಮಾರ್, ಸಾಲದ ಶೂಲದಲ್ಲಿ ಸಿಲುಕಿ ಆತ್ಮಹತ್ಯೆಗೂ ಯತ್ನಿಸಿದ್ದರು.

ಹತ್ತತ್ರ ಮೂರು ಮುಕ್ಕಾಲು ಕೋಟಿ ರೂಪಾಯಿ ಬಂಡವಾಳ ಹಾಕಿ, ಸಾಲ ಮಾಡಿ, ಚಿತ್ರವನ್ನ ರಿಲೀಸ್ ಮಾಡಲು ಆಗದೆ, ಮುಂದಿನ ದಾರಿ ತೋಚದೆ, ಮಾನಸಿಕ ಖಿನ್ನತೆಗೆ ಒಳಗಾಗಿ ನಿರ್ಮಾಪಕ ಶಶಿಕುಮಾರ್ ಕಳೆದ ತಿಂಗಳಷ್ಟೆ ಸೂಸೈಡ್ ಅಟೆಂಪ್ಟ್ ಮಾಡಿದ್ದರು.

ಇಂತಹ ಆಘಾತಕಾರಿ ಬೆಳವಣಿಗೆ ಬಳಿಕ ನಿರ್ಮಾಪಕ ಶಶಿಕುಮಾರ್ ರವರಿಗೆ ಸಹಾಯ ಹಸ್ತ ಚಾಚಲು ವಿತರಕರು ಮುಂದೆ ಬಂದಿದ್ದಾರೆ. 'ಹಾಫ್ ಮೆಂಟ್ಲು' ಬಿಡುಗಡೆ ಮಾಡಲು ನಾಯಕಿ ಸೋನು ಗೌಡ ಕೂಡ ಕೈಲಾದ ಸಹಾಯ ಮಾಡಿದ್ದಾರೆ. ಮುಂದೆ ಓದಿ....

1. ಶಶಿಕುಮಾರ್ ನೆರವಿಗೆ ನಾಯಕಿ ಸೋನು ಗೌಡ
ನಿರ್ಮಾಪಕ ಶಶಿಕುಮಾರ್ ರವರಿಗೆ 'ಹಾಫ್ ಮೆಂಟ್ಲು' ಚಿತ್ರದ ನಾಯಕಿ ಸೋನು ಗೌಡ ಸಹಾಯ ಹಸ್ತ ಚಾಚಿದ್ದಾರೆ.

2. ಸಂಭಾವನೆ ಹಿಂದಿರುಗಿಸಿದ ನಟಿ 
ಶಶಿಕುಮಾರ್ ರವರ ಆರ್ಥಿಕ ಬಿಕ್ಕಟ್ಟು ಅರಿತು ನಾಯಕಿ ಸೋನು ಗೌಡ, ತಾವು ಪಡೆದಿದ್ದ ಸಂಭಾವನೆಯಲ್ಲಿ ಸ್ವಲ್ಪ ಮೊತ್ತವನ್ನು ಶಶಿಕುಮಾರ್ ರವರಿಗೆ ಹಿಂದಿರುಗಿಸಿದ್ದಾರೆ.

3. ಹಿಂದಿರುಗಿಸಿದ ಮೊತ್ತ ಎಷ್ಟು? 
ನಾಯಕಿ ಸೋನು ಗೌಡ ರವರ ಸಂಭಾವನೆ ಹಾಗೂ ಅವರು ಹಿಂದಿರುಗಿಸಿರುವ ಮೊತ್ತ ಎಷ್ಟು ಅನ್ನೋದು ಬಹಿರಂಗವಾಗಿಲ್ಲ.

4. ವಿತರಕರ ನೆರವು 
'ಜಾಹ್ನವಿ ಎಂಟರ್ ಪ್ರೈಸಸ್' ಮೂಲಕ 'ಹಾಫ್ ಮೆಂಟ್ಲು' ಸಿನಿಮಾ ಬಿಡುಗಡೆ ಆಗಲಿದೆ. ವಿತರಕರಾದ ಬಸವರಾಜ್, ಶಂಕರ್, ಜಗದೀಶ್ ಹಾಗೂ ಪ್ರಸನ್ನ, ಶಶಿಕುಮಾರ್ ರವರಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ.

5. ಆತ್ಮಹತ್ಯೆ ಯತ್ನ ಪಬ್ಲಿಸಿಟಿ ಅಲ್ಲ!
ಸಿನಿಮಾ ಚೆನ್ನಾಗಿಲ್ಲ ಅಂದ್ರೆ ರಿಲೀಸ್ ಮಾಡುತ್ತಲೇ ಇರಲಿಲ್ಲ. ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ಪಬ್ಲಿಸಿಟಿಗಾಗಿ ಆತ್ಮಹತ್ಯೆಗೆ ಯತ್ನಿಸಲಿಲ್ಲ ಎನ್ನುತ್ತಾರೆ ನಿರ್ಮಾಪಕ ಶಶಿಕುಮಾರ್.

6. 'ಹಾಫ್ ಮೆಂಟ್ಲು' ಬಿಡುಗಡೆ ಯಾವಾಗ?
ವರದಿಗಳ ಪ್ರಕಾರ, ಏಪ್ರಿಲ್ 1 ರಂದು 'ಹಾಫ್ ಮೆಂಟ್ಲು' ಸಿನಿಮಾ ಬಿಡುಗಡೆ ಆಗಲಿದೆ.

7. ಹೊಸಬರ ಸಿನಿಮಾ
ನಾಯಕ ಸಂದೀಪ್, ನಿರ್ದೇಶಕ ಲಕ್ಷ್ಮಿ ದಿನೇಶ್ ಸೇರಿದಂತೆ 'ಹಾಫ್ ಮೆಂಟ್ಲು' ಚಿತ್ರದಲ್ಲಿ ಕೆಲಸ ಮಾಡಿರುವ ಬಹುತೇಕರು ಹೊಸಬರೇ. ಆದ್ರೆ, ಈಗಾಗಲೇ ರಿಲೀಸ್ ಆಗಿರುವ 'ಹಾಫ್ ಮೆಂಟ್ಲು' ಚಿತ್ರದ ಟ್ರೈಲರ್ ಮಾತ್ರ ಭರವಸೆ ಮೂಡಿಸಿರುವುದು ಸುಳ್ಳಲ್ಲ.
Fresh Kannada

Fresh Kannada

No comments:

Post a Comment

Google+ Followers

Powered by Blogger.