Breaking News
recent

'ಅಭಿಮಾನಿಗಳೇ ಏಪ್ರಿಲ್ ಫೂಲ್ ಆಗಬೇಡಿ' ಅಂತ ಯಶ್ ಯಾಕಂದ್ರು?

ನಿರ್ಮಾಪಕ ಕೆ.ಮಂಜು ನಿರ್ಮಾಣದಲ್ಲಿ ಮೂಡಿಬರುತ್ತಿರುವ ರಾಕಿಂಗ್ ರಾಮಾಚಾರಿ ಯಶ್ ಮತ್ತು ಸ್ಯಾಂಡಲ್ ವುಡ್ ಪ್ರಿನ್ಸಸ್ ರಾಧಿಕಾ ಪಂಡಿತ್ ಒಂದಾಗಿ ಕಾಣಿಸಿಕೊಳ್ಳುತ್ತಿರುವ ಇನ್ನೂ ಟೈಟಲ್ ಫಿಕ್ಸ್ ಆಗದ ಹೊಸ ಚಿತ್ರ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಾಗುತ್ತಿದೆ.
Yash kannada movies

ಚಿತ್ರಕ್ಕೆ ಇನ್ನೂ ಟೈಟಲ್ ಫಿಕ್ಸ್ ಆಗದಿದ್ದರೂ, 'ಮೈಸೂರು ಹುಲಿ', 'ಗಾಂಧಿ ಕ್ಲಾಸ್' 'ಮಾಂಜಾ' ಅಂತ ಅಂತೆ-ಕಂತೆಗಳ ತರಹೇವಾರಿ ಹೆಸರುಗಳು ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಓಡಾಡುತ್ತಿವೆ.

ಇನ್ನು ಸಿನಿಮಾ ಸೆಟ್ಟೇರಿ ತುಂಬಾ ದಿನಗಳಾದರೂ ಇನ್ನೂ ಚಿತ್ರೀಕರಣ ಆಗದೇ ಆಮೆ ನಡಿಗೆಯಲ್ಲಿ ಸಾಗುತ್ತಿರುವ ಚಿತ್ರದ ಕಾರ್ಯಗಳು ಕೆಲವಾರು ಸಮಸ್ಯೆಗಳಿಂದ ವಿಳಂಬವಾಗುತ್ತಿವೆ.

ಅಂದಹಾಗೆ ಸದಾ ಸುದ್ದಿಯಲ್ಲಿರುವ ಚಿತ್ರ ಇದೀಗ ಮತ್ತೆ ಸುದ್ದಿ ಮಾಡಿದೆ. ಈ ಬಾರಿ ಮಾತ್ರ ಚಿತ್ರದ ಬಗ್ಗೆ ಮಾತನಾಡಿರುವುದು ಬೇರಾರು ಅಲ್ಲ ಚಿತ್ರದ ನಾಯಕ ಖುದ್ದು ರಾಕಿಂಗ್ ಸ್ಟಾರ್ ಯಶ್ ಅವರೇ. ಹೌದು ಚಿತ್ರದ ಟೈಟಲ್ ವಿಚಾರವಾಗಿ ಯಶ್ ಅವರು ತಮ್ಮ ಫೇಸ್ ಬುಕ್ಕಿನಲ್ಲಿ ಉದ್ದವಾದ ಸ್ಟೇಟಸ್ ಒಂದನ್ನು ಹಾಕಿಕೊಂಡಿದ್ದಾರೆ.

ಅಷ್ಟಕ್ಕೂ ಏನಪ್ಪಾ ಅಂತಹ ಸುಧೀರ್ಘ ಸ್ಟೇಟಸ್ ಅನ್ನೋದನ್ನ ನೋಡಲು ಕೆಳಗಿನ ಅಪ್ಡೇಟ್ ಓದಿ....

1. ಚಿತ್ರದ ಟೈಟಲ್ ಬಗ್ಗೆ ಯಶ್ ಏನಂತಾರೇ? 
ನಿರ್ದೇಶಕ ಮಹೇಶ್ ರಾವ್ ಆಕ್ಷನ್-ಕಟ್ ಹೇಳುತ್ತಿರುವ ಚಿತ್ರ ಸೆಟ್ಟೇರಿದ್ದರೂ ಟೈಟಲ್ ಮಾತ್ರ ಇನ್ನೂ ಸರಿಯಾಗಿ ಇಟ್ಟಿಲ್ಲ. ಆದರೂ ಚಿತ್ರದ ಹಲವಾರು ಟೈಟಲ್ ಗಳು ಅಲ್ಲಲ್ಲಿ ಹರಿದಾಡುತ್ತಿವೆ. ಈ ಬಗ್ಗೆ ಯಶ್ ಅಭಿಮಾನಿಗಳಿಗೆ ಏಪ್ರಿಲ್ ಫೂಲ್ ಆಗಬೇಡಿ ಅಂತ ಫೇಸ್ ಬುಕ್ಕಿನಲ್ಲಿ ಎಚ್ಚರಿಕೆ ನೀಡಿದ್ದಾರೆ

2. ಅಸಲಿ ಟೈಟಲ್ ಏನು? 
ಈ ಮೊದಲು ಹಲವರು ಯಶ್ ಅವರ ಮುಂದಿನ ಸಿನಿಮಾ, 'ರಾಜಾ ಹುಲಿ' ಆಯ್ತು ಈಗ 'ಮೈಸೂರು ಹುಲಿ' ಅಂತ ಕೆಲವರು ಅಂದರೆ, ಇನ್ನೂ ಕೆಲವರು ಅಲ್ಲಾರೀ..'ಗಾಂಧಿ ಕ್ಲಾಸ್' ಅಂದರು. ಮತ್ತೆ ಕೆಲವರು ಅದೂ ಅಲ್ಲ 'ಮಾಂಜಾ' ಅಂತ ಅಂದರು. ಆದರೆ ಯಶ್ ಪ್ರಕಾರ ಇದ್ಯಾವುದು ಅಲ್ಲ. ಹಾಗಾದ್ರೆ ನಿಜವಾದ ಟೈಟಲ್ ಏನು ಗೊತ್ತಿಲ್ಲ.

3. ಯುಗಾದಿಗೆ ಗೊತ್ತಾಗುತ್ತೆ 
ಚಿತ್ರದ ನಿಜವಾದ ಟೈಟಲ್ ಹಾಗೂ ಪಕ್ಕಾ ಆಗಿರುವ ಒರಿಜಿನಲ್ ಟೈಟಲ್ ಯುಗಾದಿ ಹಬ್ಬದಂದು ಎಲ್ಲರಿಗೂ ತಿಳಿಯಲಿದೆ. ಅಲ್ಲಿಯವರೆಗೂ ರೂಮರ್ಸ್ ನಂಬಿ ನೀವು ಆಗಬೇಡಿ ಏಪ್ರಿಲ್ ಫೂಲ್ ಅಂತ ಖುದ್ದಾಗಿ ಯಶ್ ಅವರೇ ತಮ್ಮ ಫೇಸ್ ಬುಕ್ಕಿನಲ್ಲಿ ಸ್ಟೇಟಸ್ ಹಾಕಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸಣ್ಣ ಎಚ್ಚರಿಕೆ ನೀಡಿದ್ದಾರೆ.

4. ಚಿತ್ರದ ವಿಳಂಬಕ್ಕೆ ಕಾರಣ 
'ಡೆಡ್ಲಿ ಸೋಮ' ಖ್ಯಾತಿಯ ನಟ ಆದಿತ್ಯ ಅವರು ಚಿತ್ರದಿಂದ ಹೊರ ಬಿದ್ದ ಮೇಲೆ ಅವರ ಜಾಗಕ್ಕೆ ಯಾರನ್ನೂ ಕರೆತಂದಿರಲಿಲ್ಲ. ಆದ್ದರಿಂದ ಅವರ ಜಾಗಕ್ಕೆ ಬೇರೆಯವರನ್ನು ಕರೆತರುವವರೆಗೆ ಚಿತ್ರದ ಶೂಟಿಂಗ್ ಮಾಡುವಂತಿರಲಿಲ್ಲ. ಹಾಗಾಗಿ ಶೂಟಿಂಗ್ ಡಿಲೇ ಆಗಿತ್ತು.

5. ಆದಿತ್ಯ ಜಾಗಕ್ಕೆ ತಿಲಕ್ 
ಇದೀಗ ನಟ ಆದಿತ್ಯ ಅವರ ಜಾಗಕ್ಕೆ 'ಗಂಡಹೆಂಡತಿ' ಖ್ಯಾತಿಯ ನಟ ತಿಲಕ್ ಶೇಖರ್ ಅವರು ಆಗಮಿಸಿದ್ದಾರೆ ಎಂದು ಸುದ್ದಿಯಾಗಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.