Breaking News
recent

ಐಪಿಎಲ್ ಜೊತೆ ಬಿಗ್ ಬಜೆಟ್ ಸಿನಿಮಾಗಳ ಜಟಾಪಟಿ

ಸಾಮಾನ್ಯವಾಗಿ ಕ್ರಿಕೆಟ್ ಜಾತ್ರೆ ಶುರುವಾಗುವಾಗ ಬಿಗ್ ಬಜೆಟ್ ಸಿನಿಮಾಗಳ ಬಿಡುಗಡೆ ದಿನಾಂಕವನ್ನು ಮುಂದೂಡುವುದು ಸಂಪ್ರದಾಯ. ಆದರೆ ಈ ಬಾರಿ ಐಪಿಎಲ್ ಸಮಯದಲ್ಲೇ ಸ್ಯಾಂಡಲ್ ವುಡ್ ನ ಬಿಗ್ ಬಜೆಟ್ ನ ಸಿನಿಮಾಗಳು ತೆರೆಗೆ ಬರಲು ತಯಾರಾಗಿದ್ದು ವಿಶೇಷ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ಮಿಂಚಿರುವ ಬಹುನಿರೀಕ್ಷಿತ ಹಾಗೂ ಬಿಗ್ ಬಜೆಟ್ ನ ಸಿನಿಮಾ 'ಚಕ್ರವ್ಯೂಹ' ಎಪ್ರಿಲ್ ತಿಂಗಳಿನಲ್ಲಿ ಯುಗಾದಿ ಹಬ್ಬದ ಸಂದರ್ಭದಲ್ಲಿ ತೆರೆಗೆ ಬರಲು ಸಜ್ಜಾಗಿದ್ದು, ಐಪಿಎಲ್ ವೇಳೆಯಲ್ಲಿ ತೆರೆ ಕಾಣುವ ಸಾಧ್ಯತೆ ಇದೆ.

ಇದರೊಂದಿಗೆ ಕಿಚ್ಚ ಸುದೀಪ್ ಅಭಿನಯದ 'ಕೋಟಿಗೊಬ್ಬ 2' (ತಾತ್ಕಾಲಿಕ ಹೆಸರು) ಕೂಡ ಎಪ್ರಿಲ್ ತಿಂಗಳಿನಲ್ಲಿ ತೆರೆ ಕಾಣುವ ಸಾಧ್ಯತೆ ಬಹಳಿಷ್ಟಿವೆ. ಇದು ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲದಲ್ಲಿ ತೆರೆ ಕಾಣಲಿದ್ದು, ತಮಿಳಿನಲ್ಲಿ 'ಮುಡಿಂಜ ಇವನ ಪುಡಿ' ಎಂಬ ಹೆಸರಿನಲ್ಲಿ ತೆರೆ ಕಾಣಲಿದೆ.

ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ಜಗ್ಗುದಾದಾ' ಚಿತ್ರ ಮಾತ್ರ ಐಪಿಎಲ್ ಮುಗಿದ ನಂತರ ಮೇ ತಿಂಗಳಿನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ಒಟ್ನಲ್ಲಿ ಕ್ರಿಕೆಟ್ ಸರಣಿ ಇದ್ದರೂ ಬೇಸಿಗೆ ರಜೆಯನ್ನು ಸದುಪಯೋಗಪಡಿಸಿಕೊಳ್ಳಲು ನಿರ್ಮಾಪಕರು ಕ್ರಿಕೆಟ್ ಗೆ ಅಂಜದೆ ಭರ್ಜರಿಯಾಗಿ ತಯಾರಿ ನಡೆಸುತ್ತಿದ್ದಾರೆ. ಹೆಚ್ಚಿನ ವಿವರಗಳನ್ನು ನೋಡಲು ಕೆಳಗಿರುವ ಅಪ್ಡೇಟ್ ಓದಿ...

1. ಎಪ್ರಿಲ್ 8ಕ್ಕೆ ಐಪಿಎಲ್ ಉದ್ಘಾಟನೆ
ಎಪ್ರಿಲ್ 8ಕ್ಕೆ ಐಪಿಎಲ್ ಉದ್ಘಾಟನೆಗೊಂಡು 9 ರಿಂದ ಮ್ಯಾಚ್ ಆರಂಭವಾಗಲಿದೆ. ಮೂಲಗಳ ಪ್ರಕಾರ ಪುನೀತ್ ರಾಜ್ ಕುಮಾರ್ ಅವರ 'ಚಕ್ರವ್ಯೂಹ' ಸಿನಿಮಾ ಕೂಡ ಅಂದೇ ತೆರೆ ಕಾಣುವ ಸಾಧ್ಯತೆ ಇದೆ.

2. ನಿರ್ಮಾಪಕ ಎನ್.ಕೆ ಲೋಹಿತ್ ಮಾತುಗಳು
'ಚಕ್ರವ್ಯೂಹ' ಚಿತ್ರದ ಬಿಡುಗಡೆಗೆ ಸಜ್ಜಾಗಿರುವ ನಿರ್ಮಾಪಕ ಎನ್.ಕೆ.ಲೋಹಿತ್ ಅವರು ಹೇಳುವಂತೆ, 'ಎಪ್ರಿಲ್ ತಿಂಗಳಿನಲ್ಲಿ ಬೇಸಿಗೆ ರಜೆಗಳು ಆರಂಭವಾಗುತ್ತವೆ. ಕ್ರಿಕೆಟ್ ಗೆ ಹುಚ್ಚು ಪ್ರೇಮಿಗಳು ಇರುವಂತೆ, ಪುನೀತ್ ರಾಜ್ ಕುಮಾರ್ ಅವರಿಗೂ ಪ್ರತ್ಯೇಕ ಅಭಿಮಾನಿ ಬಳಗ ಇದೆ. ಅವರೂ ತಮ್ಮ ನೆಚ್ಚಿನ ನಟನ ಸಿನಿಮಾ ನೋಡಲು ಸಮಯ ಮಾಡಿಕೊಳ್ಳುತ್ತಾರೆ.- ಎನ್.ಕೆ ಲೋಹಿತ್.

3. ಪುನೀತ್ ಅವರ ಮಹತ್ವದ ಸಿನಿಮಾ
24ನೇ ಸಿನಿಮಾ 'ಚಕ್ರವ್ಯೂಹ' ಪವರ್ ಸ್ಟಾರ್ ಪುನೀತ್ ಅವರ ಸಿನಿ ಜೀವನದಲ್ಲಿ ಮಹತ್ವದ ಸಿನಿಮಾ ಆದ್ದರಿಂದ ಅಭಿಮಾನಿಗಳು ಕೂಡ ಖಂಡಿತವಾಗಿ ಸಿನಿಮಾ ನೋಡೇ ನೋಡ್ತಾರೆ ಎನ್ನುತ್ತಾರೆ 'ಚಕ್ರವ್ಯೂಹ' ನಿರ್ಮಾಪಕ ಎನ್.ಕೆ ಲೋಹಿತ್ ಅವರು.

4. ನಿರ್ಮಾಪಕ ಸೂರಪ್ಪ ಬಾಬು
'ಇತ್ತೀಚೆಗೆ ಜನ ಐಪಿಎಲ್ ನಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೆ. ಈಗ ಅದೂ ಒಂದು ಆಟವಾಗಿ ಉಳಿದಿಲ್ಲ, ಬದ್ಲಾಗಿ ಜನ ಅದನ್ನು ಜೂಜು ಅಂತಾನೇ ಅಂದುಕೊಂಡಿದ್ದಾರೆ. ಕ್ವಾರ್ಟರ್ ಫೈನಲ್ ನಂತರ ಐಪಿಎಲ್ ಹುಚ್ಚು ತುಸು ಗರಿಗೆದರಬಹುದು ಎನ್ನುತ್ತಾರೆ ಕಿಚ್ಚ ಸುದೀಪ್ ಅವರ 'ಮುಡಿಂಜ ಇವನ ಪುಡಿ' ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ಅವರು.

5. ಸಾಲು ಸಾಲು ಸಿನಿಮಾಗಳಿವೆ
ಈ ನಡುವೆ ಕಾಮಿಡಿ ಕಿಂಗ್ ಶರಣ್ ಹಾಗೂ ಹರ್ಷ ಅವರ 'ಜೈ ಮಾರುತಿ 800', ಗೋಲ್ಡನ್ ಸ್ಟಾರ್ ಅಭಿನಯದ 'ಸ್ಟೈಲ್ ಕಿಂಗ್' ಮತ್ತು ರಕ್ಷಿತ್ ಶೆಟ್ಟಿ ಹಾಗೂ ಶ್ರುತಿ ಹರಿಹರನ್ ಅಭಿನಯದ 'ಗೋಧಿ ಮೈ ಬಣ್ಣ ಸಾಧಾರಣ ಮೈ ಕಟ್ಟು' ಸಿನಿಮಾ ಕೂಡ ಬಿಡುಗಡೆಗೆ ಸಿದ್ಧವಾಗಿ ನಿಂತಿದ್ದು, ದಿನಾಂಕ ಅಂತಿಮವಾಗಬೇಕಿದೆ.                        Fresh Kannada

                        Fresh Kannada

                        No comments:

                        Post a Comment

                        Google+ Followers

                        Powered by Blogger.