Breaking News
recent

ಡಿಂಪಲ್ ಕ್ವೀನ್ ರಚಿತಾ ಅವರಿಗೆ ನಿಂತಲ್ಲಿ ನಿಲ್ಲಲಾಗುತ್ತಿಲ್ಲವಂತೆ

ಕಿರುತೆರೆ ಕ್ಷೇತ್ರದಿಂದ 2012 ರಲ್ಲಿ ಹಿರಿತೆರೆ ಕ್ಷೇತ್ರಕ್ಕೆ ಕಾಲಿಟ್ಟ ನಟಿ ರಚಿತಾ ರಾಮ್ ಅವರು ನಟಿಸಿದ್ದು, ಮಾತ್ರ ಸ್ಯಾಂಡಲ್ ವುಡ್ ನಟ ಸ್ಟಾರ್ ನಟರ ಜೊತೆ. ಕಾಲಿಟ್ಟಾಗಿನಿಂದ ಯಶಸ್ವಿ ಸಿನಿಮಾಗಳಲ್ಲಿ ನಟಿಸಿರುವ ರಚಿತಾ ರಾಮ್ ಇದೀಗ ಮತ್ತೊಂದು ಬಹು ನಿರೀಕ್ಷಿತ ಚಿತ್ರದ ರಿಲೀಸ್ ಗೆ ಸಜ್ಜಾಗಿದ್ದಾರೆ.
Rachita Ram Hot Videos

'ಬುಲ್ ಬುಲ್', 'ದಿಲ್ ರಂಗೀಲಾ', 'ಅಂಬರೀಶ', 'ರನ್ನ', ಮತ್ತು 'ರಥಾವರ' ಸಿನಿಮಾಗಳಲ್ಲಿ ನಟಿಸಿ ಹಿಟ್‌ ಹೀರೋಯಿನ್ ಎನಿಸಿಕೊಂಡಿರುವ ರಚಿತಾ ರಾಮ್ ಅವರು ಇದೀಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬಿಗ್ ಬಜೆಟ್ ನ ಸಿನಿಮಾ 'ಚಕ್ರವ್ಯೂಹ' ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ.

ತಮಿಳು ನಿರ್ದೇಶಕ ಎಮ್.ಸರವಣನ್ ಆಕ್ಷನ್-ಕಟ್ ಹೇಳಿರುವ 'ಚಕ್ರವ್ಯೂಹ' ಚಿತ್ರದ ಆಡಿಯೋ ಬಿಡುಗಡೆ ಆಗಿದ್ದು, ಚಿತ್ರದ ಕೊನೆಯ ಹಾಡು 'ನಿಂತಲ್ಲೇ ನಿಲ್ಲಲಾರೆ' ತಮಗೆ ತುಂಬಾ ಇಷ್ಟ ಎನ್ನುತ್ತಾರೆ ನಟಿ ರಚಿತಾ ರಾಮ್.

ಈ ಹಾಡು ರಚಿತಾ ರಾಮ್ ಅವರ ಮೇಲೆಯೇ ಬರೆಯಲಾಗಿದ್ದು, ನಾಯಕಿಯ ಆವೃತ್ತಿಯಂತೆ. ಈ ಹಾಡನ್ನು ತೆಲುಗಿನ ಖ್ಯಾತ ಗಾಯಕಿ ಮೇಘಾ ಅವರು ಹಾಡಿದ್ದಾರೆ. 'ಇದು ಸಂಪೂರ್ಣವಾಗಿ ನನ್ನ ಕಲ್ಪನೆಯ ಮೇಲೆ ಓಡುವ ಹಾಡು. ಸಾಮಾನ್ಯವಾಗಿ ಪ್ರೀತಿ ಶುರುವಾದ ತಕ್ಷಣ ಡ್ಯುಯೆಟ್ ಇರುತ್ತದೆ. ಆದರೆ ಈ ಹಾಡಿನಲ್ಲಿ ನನ್ನ ಕಲ್ಪನೆಯ ಪ್ರಿಯತಮನನ್ನು ಹೊಗಳುತ್ತಿರುತ್ತೇನೆ' ಎಂದು ನುಡಿಯುತ್ತಾರೆ ರಚಿತಾ ರಾಮ್.

ಯಾವಾಗಲೂ ಕನ್ನಡ ಚಿತ್ರರಂಗದಲ್ಲಿ ನಾಯಕ ನಟರೇ ಪ್ರಧಾನವಾಗಿರುವುದರಿಂದ ಮತ್ತು ಅವರಿಗೆ ಮಾತ್ರ ಪರಿಚಯಾತ್ಮಕ ಪ್ರತ್ಯೇಕ ಹಾಡು ಲಭಿಸುವುದರಿಂದ ಈ ಹಾಡು ಬಹಳ ವಿಶಿಷ್ಟ ಎನ್ನುತ್ತಾರೆ ಗುಳಿಕೆನ್ನೆ ಬೆಡಗಿ ರಚಿತಾ ರಾಮ್.

ಪುನೀತ್ ರಾಜ್ ಕುಮಾರ್ ಅವರ ಪಾತ್ರಕ್ಕೆ 'ಗೆಳೆಯಾ ಗೆಳೆಯಾ' ಹಾಡು ವಿಶಿಷ್ಟವಾಗಿರುವಂತೆ, 'ನಿಂತಲ್ಲಿ ನಿಲ್ಲಲಾರೆ' ನನ್ನ ಪಾತ್ರಕ್ಕೆ ವಿಶೇಷ. ಇದು ಪರಿಚಯಾತ್ಮಕ ಹಾಡು ಅಲ್ಲವಾದರೂ, ಕಲ್ಪನೆಯ ಸೋಲೋ ಹಾಡು ಎನ್ನುತ್ತಾರೆ ರಚಿತಾ ರಾಮ್.

ನಿರ್ಮಾಪಕ ಎನ್.ಕೆ ಲೋಹಿತ್ ಬಂಡವಾಳ ಹೂಡಿರುವ 'ಚಕ್ರವ್ಯೂಹ' ಚಿತ್ರ ಯುಗಾದಿ ಹಬ್ಬಕ್ಕೆ ತೆರೆಗೆ ಬರುವ ಸಾಧ್ಯತೆ ಇದೆ.

Fresh Kannada

Fresh Kannada

No comments:

Post a Comment

Google+ Followers

Powered by Blogger.