Breaking News
recent

ಚೌಕಟ್ಟಿನಾಚೆ ನಿಂತು...

bhishma kannada movie download
ಹೊಸ ಪ್ರಯೋಗಗಳಿಗೆ ತುಡಿಯುವ ವಿಶಿಷ್ಟ ನಟ ಕಿಶೋರ್. ಅವರ ನಟನೆಯ ‘ಕಿರಗೂರಿನ ಗಯ್ಯಾಳಿಗಳು’ ಚಿತ್ರರಸಿಕರನ್ನು ರಂಜಿಸುತ್ತಿರುವಾಗಲೇ, ‘ಭೀಷ್ಮ’ ಚಿತ್ರ ತೆರೆಕಾಣುತ್ತಿದೆ. ‘ಚಂದನವನ’ ಪುರವಣಿಯೊಂದಿಗೆ ಅವರು ತಮ್ಮ ಸಿನಿಮಾಗಳ ಕುರಿತು ಮಾತನಾಡಿದ್ದಾರೆ.
* ‘ಭೀಷ್ಮ’ ಚಿತ್ರದ ಬಗ್ಗೆ ಹೇಳಿ?
ಆತುರವಾಗಿ ಪೂರ್ಣಗೊಳಿಸಿರುವ ಟಿಪಿಕಲ್ ಕಮರ್ಷಿಯಲ್ ಸಿನಿಮಾ. ಚಿತ್ರದಲ್ಲಿ ನನ್ನದು ಒಂದು ರೀತಿ ಆ್ಯಂಟಿ ಹೀರೊ ಪಾತ್ರ. ಆತನ ಜೀವನದಲ್ಲಿ ಒಬ್ಬ ಹುಡುಗಿಯ ಪ್ರವೇಶ. ಅವನು ಬದಲಾಗಬೇಕು ಎಂದುಕೊಳ್ಳುತ್ತಾನೆ. ಅವಳು ಅವನನ್ನು ಬಿಟ್ಟು ಹೋಗುವಳಾ, ಜತೆಯಲ್ಲಿ ಇರುವಳಾ ಎನ್ನುವುದೇ ಚಿತ್ರಕಥೆಯಲ್ಲಿನ ಕೌತುಕ. ಒಂದು ಸರಳವಾದ ಸಾಮಾನ್ಯ ಎಳೆಯನ್ನು ಸಿನಿಮಾ ಮಾಡಿದ್ದಾರೆ.
* ‘ಭೀಷ್ಮ’ ಎನ್ನುವ ಹೆಸರು ಚಿತ್ರಕ್ಕೆ ಯಾವ ರೀತಿ ಹೊಂದುತ್ತದೆ?
ಈ ಮೊದಲು ‘ಕರ್ಣ’ ಎನ್ನುವ ಶೀರ್ಷಿಕೆಯನ್ನು ಇಡಲಾಗಿತ್ತು. ಆ ಟೈಟಲ್ ಸಿಕಲಿಲ್ಲ, ಹೆಸರು ‘ಭೀಷ್ಮ’ ಎಂದಾಯಿತು. ಇದೊಂದು ಸರಳ ಕಥೆ.
* ‘ಕಿರಗೂರಿನ ಗಯ್ಯಾಳಿ’ಗಳಲ್ಲಿ ಸೆನ್ಸಾರ್ ಮಂಡಳಿ ಬಹಳಷ್ಟು ಮಾತುಗಳನ್ನು ಮ್ಯೂಟ್ ಮಾಡಿದೆ. ಅಭಿವ್ಯಕ್ತಿ ವಿಚಾರದಲ್ಲಿ ಇದು ಟೀಕೆಗೂ ಕಾರಣವಾಗಿದೆ.
ಒಬ್ಬ ಪ್ರೇಕ್ಷಕನಾಗಿ ನಿಮಗೆ ಏನನ್ನಿಸಿತು?

ಜನರು ಸೆನ್ಸಾರ್ ಮಂಡಳಿಯ ಇತಿಮಿತಿಗಳನ್ನು ಅರ್ಥ ಮಾಡಿಕೊಂಡು ಮಂಡಳಿಗೆ ಬೈಯುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಏನು ಹೇಳಲಾಗುತ್ತಿದೆ ಎನ್ನುವುದು ಅರ್ಥವೇ ಆಗುವುದಿಲ್ಲ. ಮೂಲಕೃತಿಯಲ್ಲಿಯೇ ಈ ಮಾತುಗಳು ಇವೆ. ಗಾದೆಯನ್ನೂ ಮ್ಯೂಟ್ ಮಾಡಲಾಗಿದೆ. ತೇಜಸ್ವಿಯವರಂಥ ಲೇಖಕರ ಕೃತಿಗೆ ಸೆನ್ಸಾರ್ ಎಂದರೆ ಅದು ದುರಹಂಕಾರ ಎನಿಸುತ್ತದೆ. ಆದರೆ ಸಿನಿಮಾ, ಸೆನ್ಸಾರ್ ಕಾನೂನುಗಳಿಗೆ ಬದ್ಧವಾಗಿ ಇರಬೇಕಾಗಿದ್ದು ಅನಿವಾರ್ಯ. ಆದರೆ ಎಲ್ಲದಕ್ಕೂ ಒಂದೇ ಮಾನದಂಡ ಅನ್ವಯ ಆಗಬಾರದು.
ವಯಸ್ಕರ ಚಿತ್ರಕ್ಕೂ ‘ಎ’, ಈ ಚಿತ್ರಕ್ಕೂ ‘ಎ’ ಅಂದರೆ ವ್ಯತ್ಯಾಸವೇನು. ‘ಇಲ್ಲಿ ಬಳಕೆಯಾಗಿರುವುದು ಕೃತಿಯಲ್ಲಿನ, ಹಳ್ಳಿಗಾಡಿನ ಸಾಮಾನ್ಯ ಭಾಷೆ’ ಎಂದು ಕಿರಗೂರು ಚಿತ್ರದ ನಿರ್ಮಾಪಕ ರವೀಂದ್ರ ಅವರು ಸೆನ್ಸಾರ್ ಮಂಡಳಿಯನ್ನು ಪ್ರಶ್ನಿಸಿದ್ದರು. ಆದರೆ ಮಂಡಳಿ ಅದನ್ನು ಕೇಳಲಿಲ್ಲ. ‘ಎ’ ಪ್ರಮಾಣಪತ್ರ ಕೊಟ್ಟರೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಮಕ್ಕಳ ಪ್ರವೇಶಕ್ಕೆ ಅವಕಾಶವಿಲ್ಲ. ತೆರೆಗೆ ಬರುವ ದಿನ ಹತ್ತಿರವಿದ್ದ ಕಾರಣ ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಯಿತು. ಇಲ್ಲದಿದ್ದರೆ ಮೇಲ್ಮನವಿಗೆ ಅವಕಾಶವಿತ್ತು.
* ಮಾತುಗಳನ್ನು ಮೌನವಾಗಿಸಿರುವುದು ಹಲವು ಸನ್ನಿವೇಶಗಳಲ್ಲಿ ರಸಭಂಗಕ್ಕೆ ಕಾರಣವಾಗಿದೆ ಅಲ್ಲವೇ...
ಹೌದು. ‘ಮೊಲೆ ಬಂದವರಿಗೆ ನೆಲ ಕಾಣಲ್ಲವಂತೆ. ಈ ಗಯ್ಯಾಳಿ ಮುಂಡೇರಿಂದ ಕೇರಿಯೇ ಹಾಳಾಯಿತು’ ಎನ್ನುವ ಸಂಭಾಷಣೆ ಮ್ಯೂಟ್ ಆಗಿದೆ. ಕೆಲವು ಹಳ್ಳಿಯ ಬೈಗುಳದ ಮಾತುಗಳು ಮ್ಯೂಟ್ ಆಗಿವೆ. ಇದು ನೋಡುಗರಿಗೆ ಖಂಡಿತಾ ತೊಂದರೆ ಮಾಡುತ್ತದೆ. ಸೆನ್ಸಾರ್ ಮಂಡಳಿ ಸಾಹಿತ್ಯ ಕೃತಿಗೆ ವಿಶೇಷ ಮನ್ನಣೆ ಕೊಟ್ಟು ನೋಡಬೇಕಾಗುತ್ತದೆ ಎನ್ನುವುದು ನನ್ನ ಭಾವನೆ.
* ಪೊಲೀಸ್ ಬ್ರಾಂಡ್‌ನಲ್ಲಿ ಗುರ್ತಾದವರು ನೀವು. ಈಗ ಹಾಸ್ಯಕ್ಕೆ ಹೊರಳುತ್ತಿರುವಂತಿದೆ...
‘ವಾಸ್ಕೋಡಿಗಾಮ’ ಚಿತ್ರವೇ ನನ್ನ ಪೂರ್ಣ ಪ್ರಮಾಣದ ಹಾಸ್ಯ ಚಿತ್ರ. ಆ ಚಿತ್ರದ ನಿರ್ದೇಶಕ ಮಧುಚಂದ್ರ ನನ್ನನ್ನು ಕಾಮಿಡಿ ಚಿತ್ರಕ್ಕೆ ಬಳಸಿಕೊಳ್ಳುವ ಧೈರ್ಯಮಾಡಿದರು. ನಾನು ಕಾಮಿಡಿಗೆ ಹೊಂದಿಕೆಯಾಗುತ್ತೇನಾ ಎಂದು ನನಗೇ ಗೊತ್ತಿರಲಿಲ್ಲ. ಸ್ಟಾರ್‌ಗಳಿಗೆ ಒಂದು ತೊಂದರೆ ಇದೆ. ಸ್ಟಾರ್ ಸಿನಿಮಾಗಳಿಗೆ ರಿಪೀಟ್ ಆಡಿಯನ್ಸ್ ಹೆಚ್ಚು. ಅವರ ನಿರೀಕ್ಷೆಗೆ ತಕ್ಕಂತೆಯೇ ಚಿತ್ರ ಇರಬೇಕು. ಅದು ಮಿತಿಯಾಗುತ್ತದೆ. ಅದನ್ನು ಮೀರಬೇಕು ಎನ್ನುವ ಆಸೆ ಸ್ಟಾರ್‌ಗೆ ಇದ್ದರೂ ಕಷ್ಟಸಾಧ್ಯ. ಆರ್ಟ್‌ ಫಾರ್ಮ್ ನಡುವೆಯೇ ಗಳಿಕೆಯ ಲೆಕ್ಕಾಚಾರವೂ ಇದೆ.
ಸ್ಟಾರ್ ಹಣೆಪಟ್ಟಿ ಇಲ್ಲದ ನನ್ನಂಥ ಕಲಾವಿದರಿಗೆ ಸಿದ್ಧಸೂತ್ರಗಳನ್ನು ಮೀರುವುದು ಸುಲಭ. ಸ್ಟಾರ್‌ ನಟರು ಬೇರೊಂದು ರೀತಿಯಲ್ಲಿ ಮಾರುಕಟ್ಟೆ ಬೆಳೆಸಿದರೆ ನಮ್ಮಂಥವರು ವಸ್ತು, ವಿಷಯ ವ್ಯಾಪ್ತಿ ಬೆಳವಣಿಗೆಗೆ ಕಾರಣವಾಗುತ್ತೇವೆ. ನನ್ನದು ಸನ್ನಿವೇಶಕ್ಕೆ ತಕ್ಕಂತೆ ಕಾಮಿಡಿ. ನಗಿಸುವುದಕ್ಕಾಗಿಯೇ ಕಲಾವಿದರು ಎನ್ನುವಂಥ ಬ್ರಾಂಡ್ ಅಲ್ಲ. ಸನ್ನಿವೇಶಕ್ಕೆ ತಕ್ಕಂತೆ ನಗು. ಈ ಕ್ರೆಡಿಟ್ ಬರವಣಿಗೆಗಾರರಿಗೆ ಸಲ್ಲಬೇಕು. ಕಿರಗೂರಿನಲ್ಲಿ ಎಲ್ಲರದ್ದೂ ಪ್ರಮುಖ ಪಾತ್ರವೇ. ತೇಜಸ್ವಿ ಅವರ ಬಗ್ಗೆ ಇದ್ದ ಗೌರವ, ಸುಮನ್ ಅವರ ಬಗ್ಗೆ ಇದ್ದ ವಿಶ್ವಾಸ ಎಲ್ಲರೂ ಇಲ್ಲಿ ತೊಡಗಲು ಕಾರಣವಾಯಿತು.
* ಇತ್ತೀಚಿನ ದಿನಗಳಲ್ಲಿ ಪ್ರಯೋಗಕ್ಕಿಳಿಯುವ ನಿರ್ದೇಶಕರು ನಿಮ್ಮನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ?
ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ ಮತ್ತು ನನಗೆ ಪ್ರಯೋಗಾತ್ಮಕ ಚಿತ್ರಗಳಲ್ಲಿ ಹೆಚ್ಚು ಅವಕಾಶ ಇರುತ್ತದೆ. ಹತ್ತಾರು ವರುಷಗಳಿಂದ ಸಿನಿಮಾದಲ್ಲಿ ಇದ್ದೇವೆ. ಇವರದ್ದು ಪರಿಚಿತ ಮುಖ, ಜನರು ನೋಡುತ್ತಾರೆ ಎನ್ನುವುದು ಇದಕ್ಕೆ ಕಾರಣ. ಆದರೆ ಹೊಸಬರ ಸಿನಿಮಾ ಚೆನ್ನಾಗಿದ್ದರೆ ಎಲ್ಲರೂ ನೋಡುತ್ತಾರೆ. ಪ್ರಯೋಗಕ್ಕಾಗಿ ಪ್ರಯೋಗ ಎನ್ನುವಂತೆ ಆಗಬಾರದು.

* ‘ಕಬಾಲಿ’ ಚಿತ್ರ ಎಲ್ಲಿಗೆ ಬಂದಿತು?
ಕೊನೆಯ ಹಂತದಲ್ಲಿದೆ. ಮಲೇಷ್ಯಾದಲ್ಲಿನ ಭೂಗತ ಜಗತ್ತಿನ ಬಗೆಗಿನ ಚಿತ್ರ ಅದು. ಅಲ್ಲಿನ ರಾಜಕಾರಣದ ಸುಳಿಗಳು, ಗ್ಯಾಂಗ್‌ಸ್ಟರ್ ಕಥನ ಚಿತ್ರದಲ್ಲಿದೆ. ನನ್ನದು ‘ತುಂಗವನಂ’ ಚಿತ್ರದಲ್ಲಿದ್ದ ರೀತಿಯ ವಿಲನ್ ಪಾತ್ರ.
* ಮುಂದಿನ ಚಿತ್ರ?
ದಶಾವರ ಚಂದ್ರು ನಿರ್ಮಾಣ, ಜಿಯಾವುಲ್ಲಾ ಖಾನ್ ನಿರ್ದೇಶನದ ‘ಅಲ್ಪವಿರಾಮ’. ಈ ಚಿತ್ರಕ್ಕೆ ಅಲ್ಪವಿರಾಮದ ಚಿನ್ನೆಯನ್ನೇ ಶೀರ್ಷಿಕೆ ಆಗಿಸಿಕೊಳ್ಳಲಾಗಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.