Breaking News
recent

ಕಬ್ಬನ್ ಪಾರ್ಕ್ ನಲ್ಲಿ ದಿಢೀರ್ ಪ್ರತ್ಯಕ್ಷ ಆದ ನಾಗತಿಹಳ್ಳಿ

ಖ್ಯಾತ ನಿರ್ದೇಶಕ ನಾಗತೀಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಇಷ್ಟಕಾಮ್ಯ' ಚಿತ್ರದ ಶೂಟಿಂಗ್ ಭರ ಭರನೇ ನಡೆಯುತ್ತಿದ್ದು, ಸದ್ಯಕ್ಕೆ ಇಡೀ ಚಿತ್ರತಂಡ ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ ಚಿತ್ರೀಕರಣಕ್ಕಾಗಿ ಬೀಡು ಬಿಟ್ಟಿದೆ.
nagathihalli chandrashekhar

ಲಾಂಗ್ ಗ್ಯಾಪ್ ಪಡೆದುಕೊಂಡು ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ನಿರ್ದೇಶಕ ನಾಗತೀಹಳ್ಳಿ ಚಂದ್ರಶೇಖರ್ ಅವರು ವಿಶಿಷ್ಟ ಪ್ರೇಮ ಕತೆಯುಳ್ಳ 'ಇಷ್ಟಕಾಮ್ಯ' ಎಂಬ ಚಿತ್ರದ ಮೂಲಕ ಮತ್ತೆ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟಿದ್ದಾರೆ.[ಕಿಚ್ಚ ಸುದೀಪ್ ಒಬ್ಬ ಪರಿಪೂರ್ಣ ನಟ ಎಂದವರು ಯಾರು?]

ಇದೀಗ ಚಿತ್ರದ ಚಿತ್ರೀಕರಣಕ್ಕಾಗಿ ಬೆಂಗಳೂರಿನ ಕಬ್ಬನ್ ಪಾರ್ಕನ್ನು ಶೂಟಿಂಗ್ ಸೆಟ್ ಆಗಿ ಪರಿವರ್ತಿಸಿರುವ ಚಿತ್ರತಂಡ ಚಿತ್ರಕ್ಕಾಗಿ ಕೆಲವು ದೃಶ್ಯಗಳನ್ನು ಪಾರ್ಕ್ ನಲ್ಲಿ ಚಿತ್ರೀಕರಿಸುತ್ತಿದೆ.

ಈಗಾಗಲೇ ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದ್ದು, ನಟ-ನಿರ್ದೇಶಕ ಮತ್ತು ಪರಿಸರವಾದಿ ಸುರೇಶ್ ಹೆಬ್ಳಿಕರ್ ಅವರು ಶನಿವಾರದಂದು (ಫೆಬ್ರವರಿ 6) ಬಿಡುಗಡೆ ಮಾಡಿದ್ದಾರೆ. ಜೊತೆಗೆ ಕನ್ನಡದ ಮೇರು ಕವಿ ಕುವೆಂಪು ಅವರ ಕವನವೊಂದನ್ನು ಕೂಡ ಸಿನಿಮಾದಲ್ಲಿ ಬಳಸಿಕೊಂಡಿರುವುದು ವಿಶೇಷ.[ಹೆಜ್ಜೇನು ದಾಳಿ: ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಆಸ್ಪತ್ರೆಗೆ ದಾಖಲು]

'ಅಗ್ನಿಸಾಕ್ಷಿ' ಧಾರಾವಾಹಿ ಖ್ಯಾತಿಯ ನಟ ವಿಜಯ್ ಸೂರ್ಯ, 'ಅಶ್ವಿನಿ ನಕ್ಷತ್ರ' ಖ್ಯಾತಿಯ ನಟಿ ಮಯೂರಿ, ನಟಿ ಕಾವ್ಯ ಶೆಟ್ಟಿ ಸೇರಿದಂತೆ ಪ್ರಕಾಶ್ ಬೆಳವಾಡಿ, ರಂಗಾಯಣ ರಘು, ಹಿರಿಯ ನಟಿ ಬಿ.ಜಯಶ್ರೀ, ಮಂಡ್ಯ ರಮೇಶ್, ಚಿಕ್ಕಣ್ಣ ಮುಂತಾದ ದೊಡ್ಡ ತಾರಾಬಳಗ ಇರುವ ಚಿತ್ರಕ್ಕೆ ಶಂಕರೇ ಗೌಡ ಅವರು ಬಂಡವಾಳ ಹೂಡಿದ್ದು, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.