Breaking News
recent

ಮೌನ ಮುರಿದ ದೊಡ್ಡಗೌಡರು, ರಮ್ಯಾ ಎಚ್ ಡಿಕೆ ವಾಕ್ಸಮರಕ್ಕೆ ಎಚ್ ಡಿಡಿ ಎಂಟ್ರಿ

ಸಿಎಂ ಸಿದ್ದರಾಮಯ್ಯ ಅವರ ವಾಚ್ ಪ್ರಕರಣದ ಗಮನ ಬೇರೆಡೆಗೆ ಸೆಳೆಯಲು ರಮ್ಯಾ ಪ್ರಕರಣವನ್ನು ದೊಡ್ಡದು ಮಾಡಲಾಗುತ್ತಿದೆ ಎಂದು ಮಾಜಿ ಪ್ರಧಾನಿ ಎಚ್. ಡಿ ದೇವೇಗೌಡರು ಹೇಳಿದ್ದಾರೆ.
Ramya

ಚನ್ನರಾಯಪಟ್ಟಣದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಎಚ್.ಡಿ.ದೇವೇಗೌಡರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಾಚ್ ಪ್ರಕರಣಕ್ಕಿಂತ ರಮ್ಯಾ ಅವರ ವಿಚಾರ ದೊಡ್ಡ ವಿಷಯವಲ್ಲ’ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಾಚ್ ಪ್ರಕರಣದ ಕುರಿತ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ರಮ್ಯಾ ಅವರ ಪ್ರಕರಣವನ್ನು ದೊಡ್ಡದು ಮಾಡಲಾಗುತ್ತಿದೆ. ನಾನು ಯಾರ ಬಗ್ಗೆಯೂ ಹಗುರವಾಗಿ ಮಾತನಾಡುವುದಿಲ್ಲ’ ಎಂದು ಹೇಳಿದರು.

ನಾನು ಯಾರ ಬಗ್ಗಯೂ ಹಗುರವಾಗಿ ಮಾತನಾಡುವುದಿಲ್ಲ. ಅದರಲ್ಲೂ ಆ ಹೆಣ್ಣುಮಗಳ ಬಗ್ಗೆಯಂತೂ ಮಾತನಾಡುವುದೇ ಇಲ್ಲ. ನನ್ನ ಬಗ್ಗೆ ಈಗಾಗಲೇ ಹಲವರು ಹಗುರವಾಗಿ ಮಾತನಾಡಿದ್ದಾರೆ. ಅದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ದೇವೇಗೌಡರು ತಿಳಿಸಿದರು. ನನ್ನ ಕುಟುಂಬವನ್ನು ಮಾತ್ರ ರಾಜಕೀಯವಾಗಿ ಬೆಳೆಸಬೇಕೆಂದಿದ್ದರೆ ಜಿ.ಪುಟ್ಟಸ್ವಾಮಿ ಗೌಡರನ್ನು, ದೊಡ್ಡೇಗೌಡರನ್ನು ಎಂಎಲ್‌ಸಿ ಮಾಡುತ್ತಿರಲಿಲ್ಲ. ಆಗ ಯಾರು ಅವರ ಜೊತೆ ಇದ್ದರು. ಹಿಂದಿನದನ್ನು ನೆನೆಪು ಮಾಡಿಕೊಳ್ಳಿ’ ಎಂದು ಗೌಡರು ಸಲಹೆ ನೀಡಿದರು.
Fresh Kannada

Fresh Kannada

No comments:

Post a Comment

Google+ Followers

Powered by Blogger.