Breaking News
recent

ನಟ ಬುಲೆಟ್ ಪ್ರಕಾಶ್ ಮೇಲೆ ದಿನಕರ್ ತೂಗುದೀಪ ಹಲ್ಲೆ!?

ಹಾಸ್ಯ ನಟ ನಿರ್ಮಾಪಕ ಬುಲೆಟ್ ಪ್ರಕಾಶ್ ಮೇಲೆ ದಿನಕರ್ ತೂಗುದೀಪ್ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಬುಲೆಟ್ ಪ್ರಕಾಶ್ ಆರೋಪ ಮಾಡಿದ್ದಾರೆ.
Bullet Prakash

ನಿನ್ನೆ ರಾತ್ರಿ ದಿನಕರ್ ತೂಗುದೀಪ ಹಾಗೂ ಅವರ ಸಹಚರರು ಕೆಂಪಾಪುರ ಬಳಿಯ ರಾಜನ್ ಸ್ಟುಡಿಯೋ ಮುಂದೆ ಬಂದು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ನಿನ್ನನ್ನು ಜೀವಂತವಾಗಿರಲು ಬಿಡೋದಿಲ್ಲ ಅಂತ ಪ್ರಾಣ ಬೆದರಿಕೆ ಹಾಕಿದ್ದಾರಂತೆ. ಈ ಸಂಬಂಧ ಇಂದು ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ಬುಲೆಟ್ ಪ್ರಕಾಶ್ ಹೇಳಿದ್ದಾರೆ.
ಗಲಾಟೆ ಯಾಕೆ?: ಅಷ್ಟಕ್ಕೂ ಇಷ್ಟೆಲ್ಲ ಗಲಾಟೆಗೆ ಕಾರಣವಾಗಿರುವುದು ದುನಿಯಾ ವಿಜಯ್ ಅಭಿನಯದ ಮಾಸ್ತಿಗುಡಿ ಸಿನಿಮಾ ಸೆಟ್‍ನಲ್ಲಿ ನಡೆದ ಘಟನೆ. ಮಾಸ್ತಿಗುಡಿ ಸೆಟ್‍ನಲ್ಲಿ ದಿನಕರ್ ತೂಗುದೀಪ ಬುಲೆಟ್ ಪ್ರಕಾಶ್ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದರಂತೆ. ಈ ವಿಷಯ ತಿಳಿದ ಬುಲೆಟ್ ಪ್ರಕಾಶ್ ಫೋನ್ ಮಾಡಿ ಮಾತನಾಡಿದಾಗ ದಿನಕರ್ ಬಾಯಿಗೆ ಬಂದಂತೆ ಬುಲೆಟ್ ಪ್ರಕಾಶ್‍ಗೆ ಬೈದಿದ್ದಾರೆ.
ಅಲ್ಲದೇ ಸಿನಿಮಾವೊಂದಕ್ಕೆ ದರ್ಶನ್ ಡೇಟ್ ಪಡೆದಿದ್ದರಿಂದ ಆಕ್ರೋಶಗೊಂಡಿರುವ ದಿನಕರ್, ಬುಲೆಟ್ ಪ್ರಕಾಶ್ ಅದು ಹೇಗೆ ಸಿನಿಮಾ ಮಾಡ್ತಾನೆ ನೋಡ್ತೀನಿ ಅಂತೆಲ್ಲಾ ಕೆಟ್ಟದಾಗಿ ಮಾತನಾಡಿದ್ದಾರೆ. ನಂತರ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ದಿನಕರ್ ಬುಲೆಟ್ ಪ್ರಕಾಶ್ ಮನೆಯ ಬಳಿ ಬರುವುದಾಗಿ ತಿಳಿಸಿದರು. ಆದರೆ ಮನೆ ಬಳಿ ಬರಲು ಒಪ್ಪದ ಬುಲೆಟ್ ಪ್ರಕಾಶ್ ರಾಜನ್ ಸ್ಟುಡಿಯೋ ಬಳಿ ಬರಲು ತಿಳಿಸಿದ್ದರು. ಇಲ್ಲಿಗೆ ದಿನಕರ್ ಹಾಗೂ ಅವರ ಸಹಚರರು ಬುಲೆಟ್ ಪ್ರಕಾಶ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪ್ರಕಾಶ್ ಆರೋಪಿಸಿದ್ದಾರೆ.
ದಿನಕರ್ ವರ್ತನೆಯಿಂದ ಆತಂಕಗೊಂಡಿರುವ ಬುಲೆಟ್ ಪ್ರಕಾಶ್ ತಮ್ಮ ಕುಟುಂಬಕ್ಕೆ ಏನಾದರೂ ಆದರೆ ಅದಕ್ಕೆ ದಿನಕರ್ ಅವರೇ ಕಾರಣ ಎಂದು ಹೇಳಿದ್ದಾರೆ. ದಿನಕರ್ ಹಾಗೂ ದರ್ಶನ್ ಮಧ್ಯೆ ಏನು ಗಲಾಟೆ ಇದೆಯೋ ಗೊತ್ತಿಲ್ಲ. ಅವರಿಬ್ಬರು ಚೆನ್ನಾಗಿರಬೇಕು ಎನ್ನುವುದು ನನ್ನ ಆಸೆ. ನನಗೆ ಜೀವ ಬೆದರಿಕೆ ಹಾಕೋದು ಸರಿಯಲ್ಲ. ದರ್ಶನ್ ಜೈಲಿಗೆ ಹೋದಾಗ ದಿನಕರ್ ಎಲ್ಲಿ ಹೋಗಿದ್ದರು. ಹೀಗೆ ನನ್ನ ಮೇಲೆ ದರ್ಪ ತೋರಿಸಿದ್ರು ಅವರ ಚರಿತ್ರೆಯನ್ನೇ ಬಿಚ್ಚಿಡ್ತೀನಿ ಎಂದು ಬುಲೆಟ್ ಪ್ರಕಾಶ್ ಗುಡುಗಿದ್ದಾರೆ.
ದಿನಕರ್ ಬೆದರಿಕೆ ಹಾಕಿರುವ ದಾಖಲಾತಿಗಳು ನನ್ನ ಬಳಿಯಿದ್ದು ಘಟನೆಗೆ ಸಂಬಂಧಿಸಿದಂತೆ ಇಂದು ಪೊಲೀಸ್ ಠಾಣೆಗೆ ದೂರು ನೀಡೋದಾಗಿ ಬುಲೆಟ್ ಪ್ರಕಾಶ್ ತಿಳಿಸಿದಿದ್ದಾರೆ. ಒಟ್ಟಿನಲ್ಲಿ ಮತ್ತೆ ಸ್ಯಾಂಡಲ್‍ವುಡ್ ಗಲಾಟೆ ಬೀದಿ ರಂಪಾಟವಾಗಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.